ಗಾಂಧಿನಗರ ನಾವೂರು ಶ್ರೀ ಕಲ್ಕುಡ ದೈವಸ್ಥಾನ ದಾನಿಗಳು ಹಾಗೂ ಭಕ್ತರಿಗೆ ಅಭಿನಂದನಾ ಸಭೆ

ಸುಳ್ಯ : ಗಾಂಧಿನಗರ ನಾವೂರು ಶ್ರೀ ಕಲ್ಕುಡ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ನಡೆದ ಶ್ರೀ ದೈವಗಳ ಪುನರ್‌ಪ್ರತಿಷ್ಠಾ ಕಲಶೋತ್ಸವವನ್ನು ಯಶಸ್ವಿಗೊಳಿಸಲು ಸಹಕರಿಸಿದ ದಾನಿಗಳು ಹಾಗೂ ಭಗವದ್ಭಕ್ತರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಜೂ. 28ರಂದು ದೇವಸ್ಥಾನದಲ್ಲಿ ಅಭಿನಂದನಾ ಸಭೆ ನಡೆಯಿತು.

. . . . . . . . .

ಸಭೆಯಲ್ಲಿ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ದಿನೇಶ್ ಮಡಪ್ಪಾಡಿ ಜೀರ್ಣೋದ್ಧಾರ ಕಾರ್ಯ ನಡೆದು ಬಂದ ಹಾದಿ ಹಾಗೂ ಖರ್ಚು-ವೆಚ್ಚದ ವಿವರಗಳನ್ನು ಮಂಡಿಸಿದರು.

. . . . . . .

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣ ಕಾಮತ್ ಆರಂಬೂರು ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಧರ್ಮದರ್ಶಿ ಪಿ.ಕೆ ಉಮೇಶ್, ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಅವಿನಾಶ್ ಕುರುಂಜಿ, ಉಪಾಧ್ಯಕ್ಷ ಜಯಪ್ರಕಾಶ್ ರೈ, ಪ್ರಮುಖರಾದ ರಾಮಚಂದ್ರ ರಾವ್ ಆಗ್ರೋ, ಪ್ರಭಾಕರನ್ ನಾಯರ್, ಡಿ.ಎಸ್.ಗಿರೀಶ್ ದೇವರಗುಂಡ, ಧರ್ಮದರ್ಶಿ ಮಂಡಳಿಯ ಸದಸ್ಯ ಸೋಮನಾಥ ಪೂಜಾರಿ, ಚಂದ್ರಶೇಖರ ಪಿ.ಆರ್, ಪ್ರಕಾಶ್ ಹೆಗ್ಡೆ, ಪಿ.ಜಿ.ಜಯರಾಮ, ಪೂಜಾರಿ ತಿಮ್ಮಪ್ಪ ಗೌಡ ನಾವೂರು ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ಥಳೀಯ ಭಕ್ತಾದಿಗಳು ಉಪಸ್ಥಿತರಿದ್ದರು.

ಧರ್ಮದರ್ಶಿ ಮಂಡಳಿಯ ಸದಸ್ಯ ಹರೀಶ್ ಬೂಡುಪನ್ನೆ ಸ್ವಾಗತಿಸಿ, ಆಡಳಿತ ಸಮಿತಿ ಕಾರ್ಯದರ್ಶಿ ದಿನೇಶ್ ಕುಮಾರ್ ಕೆ.ಸಿ ವಂದಿಸಿ, ಪ್ರಚಾರ ಸಮಿತಿ ಸಂಚಾಲಕ ಶಿವಪ್ರಸಾದ್ ಆಲೆಟ್ಟಿ ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading