ಸುಬ್ರಹ್ಮಣ್ಯ ರೋಟರಿ ಕ್ಲಬ್ ಗೆ ಪ್ಲಾಟಿನಮ್ ಅವಾರ್ಡ್

ಸುಬ್ರಹ್ಮಣ್ಯ ಜೂನ್ 28 : ಅಂತರಾಷ್ಟ್ರೀಯ ರೋಟರಿ ಜಿಲ್ಲೆ 31/81ರ ಜಿಲ್ಲಾ ಪ್ರಶಸ್ತಿ ಪ್ರಧಾನ ಸಮಾರಂಭ ಇತ್ತೀಚೆಗೆ ಮೈಸೂರಿನಲ್ಲಿ ನಡೆದಿದ್ದು, ಸುಬ್ರಹ್ಮಣ್ಯ ರೋಟರಿ ಕ್ಲಬ್ ವಿವಿಧ ವಿಭಾಗಗಳಲ್ಲಿ ಸಲ್ಲಿಸಿದ ಸೇವೆಗಳಿಗಾಗಿ ಪ್ಲಾಟಿನಮ್ ಅವಾರ್ಡ್ ಗಳಿಸಿಕೊಂಡಿದೆ. ರೋಟರಿ ಜಿಲ್ಲೆಯ ದಕ್ಷಿಣ ಕನ್ನಡ, ಕೊಡಗು, ಮೈಸೂರು ಹಾಗೂ ಚಾಮರಾಜನಗರ ಕಂದಾಯ ಜಿಲ್ಲೆಗಳನ್ನೊಳಗೊಂಡ ಕ್ಲಬ್ ಸರ್ವಿಸ್ ವಿಭಾಗದಲ್ಲಿ ಕಾರ್ಗಿಲ್ ಯೋಧರನ್ನು ಗೌರವಿಸಿರುವುದು, ವೈದ್ಯರ ದಿನಾಚರಣೆ, ವಿಶ್ವಸಂಖ್ಯಾ ದಿನಾಚರಣೆ, ಪ್ರಥಮ ಚಿಕಿತ್ಸಾ ತರಬೇತಿ, ಮಾಹಿತಿ ಹಾಗೂ ವಿವಿಧ ತರಬೇತಿ ಶಿಬಿರಗಳನ್ನು ಮಾಡಲಾಗಿದ್ದು, ಕ್ಲಬ್ ಸರ್ವೀಸ್ ನಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಗಿದೆ. ಸಮುದಾಯ ಸೇವಾ ವಿಭಾಗದಲ್ಲಿ ವಿವಿಧ ಶಾಲೆಗಳಿಗೆ ಕೊಡುಗೆಗಳನ್ನು ನೀಡಿರುವುದು, ವೈದ್ಯಕೀಯ ಶಿಬಿರ, ಕಣ್ಣಿನ ಚಿಕಿತ್ಸಾ ಶಿಬಿರ, ದಂತ ಚಿಕಿತ್ಸಾ ಶಿಬಿರ, ರಕ್ತದಾನ ಶಿಬಿರಗಳನ್ನು ಏರ್ಪಡಿಸಲಾಗಿದೆ. ಹಾಗೆಯೇ ಅಶಕ್ತ ಯುವಕನಿಗೆ ಸಹಾಯ ಹಸ್ತ, ಮಹಿಳಾ ಸಬಲೀಕರಣ ತರಬೇತಿ ಹಾಗೂ ಟೈಲರಿಂಗ್ ಕ್ಲಾಸ್, ನಾಯಕತ್ವ ತರಬೇತಿ ಶಿಬಿರ, ವನಮಹೋತ್ಸವ ಆಚರಣೆಯೊಂದಿಗೆ ಗಿಡ ನೆಡುವ ಕಾರ್ಯಕ್ರಮ, ಸಾರ್ವಜನಿಕ ಸ್ಥಳಗಳಲ್ಲಿ ಎಚ್ಚರಿಕೆ ಹಾಗೂ ಜಾಗೃತಿಯ ಕರಪತ್ರಗಳನ್ನು ಹಂಚಿರುವುದು, ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಏರ್ಪಡಿಸಿರುವುದು ಹಾಗೂ ಆರ್ಥಿಕ ವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿರುವುದು. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ನ್ಯಾಪ್ಕಿನ್ಸ್ ಬರ್ನಿಂಗ್ ಮಷೀನ್ ನೀಡಿರುವುದು ಸೇರಿದಂತೆ ಇನ್ನಿತರ ಸೇವಾ ಕಾರ್ಯಕ್ರಮಗಳಿಗಾಗಿ ರೋಟರಿ ಜಿಲ್ಲೆಯಿಂದ ಪ್ಲಾಟಿನಮ್ ಅವಾರ್ಡ್ ದೊರಕಿರುತ್ತದೆ. 

. . . . . . . . .

ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷರಾದ ಜಯಪ್ರಕಾಶ್.ಆರ್ ಅವರು ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಬಾಲಕೃಷ್ಣ ಪೈ, ಗೋಪಾಲ ಎಣ್ಣೆಮಜಲು, ಚಂದ್ರಶೇಖರ ನಾಯರ್, ರಾಮಕೃಷ್ಣ ಮಲ್ಲಾರ, ಪ್ರಶಾಂತ್ ಕೋಡಿಬೈಲ್, ಮೈಲಪ್ಪ ಸಂಕೇಶ, ರೋಹಿತ್ ಬಿ.ಬಿ ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading