ಬೆಳ್ಳಾರೆ : ರೋಟರಿ ಕ್ಲಬ್ ವತಿಯಿಂದ ವತಿಯಿಂದ ಅಶಕ್ತ ಯುವಕನಿಗೆ ಕೋಳಿ ಫಾರಂ ಹಸ್ತಾಂತರ

ಜೂನ್ 25 : ಸುಳ್ಯ ತಾಲೂಕು ಬೆಳ್ಳಾರೆ ಸಮೀಪ ವಾಸವಿರುವ ವಿಜಯ್ ಎಂಬ ಬೆನ್ನು ಮೂಳೆ ಮುರಿತಕ್ಕೊಳಗಾದ ಅಶಕ್ತ ಯುವಕನಿಗೆ ರೋಟರಿ ಕ್ಲಬ್ ಗಳ ವತಿಯಿಂದ ಬಿಳಿನೆಲೆ ಕೈಕಂಬ ನರ್ಸರಿ ಬಳಿ ನಾಟಿಕೋಳಿ ಫಾರಂ ಕಟ್ಟಡ ನಿರ್ಮಿಸಿ ಗುರುವಾರ ಹಸ್ತಾಂತರಿಸಲಾಯಿತು. ರೋಟರಿ ಕ್ಲಬ್ ಮಡಿಕೇರಿ ಮಿಸ್ಟ್ರಿ ಹಿಲ್ಸ್, ರೋಟರಿ ಕ್ಲಬ್ ಬೆಳ್ಳಾರೆ ಹಾಗೂ ರೋಟರಿ ಕ್ಲಬ್ ಸುಬ್ರಹ್ಮಣ್ಯ ಇವುಗಳ ಜಂಟಿ ಆಶ್ರಯದಲ್ಲಿ ಸುಮಾರು ಮೂರುವರೆ ಲಕ್ಷಕ್ಕಿಂತ ಅಧಿಕ ವೆಚ್ಚದಲ್ಲಿ ಕೋಳಿ ಫಾರಂ ಕಟ್ಟಡವನ್ನು ನಿರ್ಮಿಸಿ ಕೋಳಿ ಸಾಕಣೆಗೆ ಅನುಕೂಲ ಮಾಡಿ ಅಶಕ್ತ ಯುವಕನ ಬಾಳಿಗೆ ಸ್ವಉದ್ಯೋಗದೊಂದಿಗೆ ಸ್ವಾವಲಂಬಿ ಜೀವನ ನಡೆಸಲು ಸಹಾಯ ಮಾಡಲಾಯಿತು. ವಿಜಯ್ ಎನ್ನುವ ಯುವಕ 2022 ಆಗಸ್ಟ್ 17ರಂದು ಮಂಗಳೂರಿನಿಂದ ಬೆಳ್ಳಾರೆಗೆ ಬಸ್ಸಿನಲ್ಲಿ ಬರುತ್ತಿದ್ದಾಗ ಕಲ್ಲಡ್ಕದ ಸಮೀಪ ಬಸ್ಸು ದೊಡ್ಡ ಗುಂಡಿಗೆ ಬಿದ್ದಿತ್ತು. ಬಸ್ಸಿನೊಳಗೆ ಇದ್ದ ವಿಜಯ್ ಅವರು ಕೆಳಗೆ ಬಿದ್ದು ಬೆನ್ನು ಮೂಳೆ ಮುರಿದು ಆಸ್ಪತ್ರೆಗೆ ದಾಖಲಾದರು. ಚಿಕಿತ್ಸೆ ಫಲಕಾರಿಯಾಗದೆ ಎದ್ದು ನಡೆಯಲು ಕೂಡ ಅಸಹಾಯಕರಾಗಿ ಅವರಿಗೆ ಜೀವನ ನಡೆಸುವುದೇ ಸವಾಲಾಗಿತ್ತು. ಅದೇ ರೀತಿ ಅವರಿಗೆ ಯಾವುದೇ ಆರ್ಥಿಕ ಸಹಾಯ ಕೂಡ ಇಲ್ಲದೆ ಇದ್ದು ಅವರ ಕೋರಿಕೆ ಮೇರೆಗೆ ಮಡಿಕೇರಿ ರೋಟರಿ ಮಿಸ್ಟರಿ ಹಿಲ್ಸ್, ರೋಟರಿ ಕ್ಲಬ್ ಬೆಳ್ಳಾರೆ, ಸುಬ್ರಹ್ಮಣ್ಯ ರೋಟರಿ ಕ್ಲಬ್ ಗಳು ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಇವರ ಸಹಯೋಗದೊಂದಿಗೆ ಸುಮಾರು ಮೂರುವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಕಟ್ಟಡವನ್ನು ನಿರ್ಮಿಸಿ ವಿಜಯ್ ರವರ ಸ್ವಾವಲಂಬಿ ಜೀವನಕ್ಕೆ ಮೂರು ಕ್ಲಬ್ ಗಳು ಒಟ್ಟಿಗೆ ಸೇರಿ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಮಡಿಕೇರಿ ಮಿಸ್ಟರಿ ಹಿಲ್ಸ್‌ನ ಅಧ್ಯಕ್ಷ ರತ್ನಾಕರ್ ರೈ, ನಿಯೋಜಿತ ಅಧ್ಯಕ್ಷ ರಾಜೇಶ್, ಸ್ವಾಮಿ ವಿವೇಕಾನಂದ ಯೂಥ್ ಮೂವ್‌ಮೆಂಟ್ ಕಾರ್ಯದರ್ಶಿ ಡಾl ಪ್ರಶಾಂತ್ ಸಿ.ಆರ್, ಕಾರ್ಯಕ್ರಮ ವ್ಯವಸ್ಥಾಪಕ ಅಂಕಚಾರಿ, ಬೆಳ್ಳಾರೆ ರೋಟರಿ ಕ್ಲಬ್ಬಿನ ನಿಯೋಜಿತ ಅಧ್ಯಕ್ಷ ಅರಿಫ್ ಬಿ.ಎಂ, ಪೂರ್ವ ಏ.ಜಿ ವಿನಯ್ ಕುಮಾರ್, ಪೂರ್ವಾಧ್ಯಕ್ಷರುಗಳಾದ ರವೀಂದ್ರ ಗೌಡ, ಪದ್ಮನಾಭ ಬೀಡು, ಪ್ರಸಾದ ಕೆ.ವಿ, ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷ ಜಯಪ್ರಕಾಶ್, ನಿಯೋಜಿತ ಅಧ್ಯಕ್ಷ ರೋಹಿತ್ ಬಿ.ಬಿ, ಜೋನಲ್ ಲೆಫ್ಟಿನೆಂಟ್ ಚಂದ್ರಶೇಖರ ನಾಯರ್, ಪೂರ್ವಾಧ್ಯಕ್ಷರುಗಳಾದ ಡಾl ರವಿ ಕಕ್ಕೆ ಪದವು, ಗೋಪಾಲ್ ಎಣ್ಣೆಮಜಲು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿಜಯ್ ಅವರ ಸ್ನೇಹಿತ ಹಾಗೂ ನರ್ಸರಿ ಬಳಿ ವಾಸವಿರುವ ಯತೀಶ್ ಅವರು ಅತಿಥಿಗಳನ್ನು ಬರಮಾಡಿಕೊಂಡು, ಎಲ್ಲರನ್ನು ಸ್ವಾಗತಿಸಿ, ಸಹಾಯ ಮಾಡಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಮರ್ಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading