ಗುತ್ತಿಗಾರು ಬ್ಲೆಸ್ಡ್ ಕುರಿಯಾಕೋಸ್ ರಜತ ಮಹೋತ್ಸವದ ಅಧಿಕೃತ ಚಾಲನೆಯ ಉದ್ಘಾಟನಾ ಕಾರ್ಯಕ್ರಮ

ಗುತ್ತಿಗಾರಿನ ಬ್ಲೆಸ್ಡ್ ಕುರಿಯಾಕೋಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಂಸ್ಥೆಯ ಬೆಳ್ಳಿ ಹಬ್ಬದ ಅಂಗವಾಗಿ ಲೋಗೋ ಅನಾವರಣ ಮಾಡುವುದರ ಮೂಲಕ ಈ ಶೈಕ್ಷಣಿಕ ವರ್ಷದಲ್ಲಿ ನಡೆಯಲಿರುವ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆಯನ್ನು ಜೂನ್ 20ರಂದು ಸಂಭ್ರಮ ಮತ್ತು ಶಿಸ್ತಿನೊಂದಿಗೆ ಉದ್ಘಾಟಿಸಲಾಯಿತು. ಕಾರ್ಯಕ್ರಮವು ಸಂಸ್ಥೆಯ ಸಾಧನೆಗಳನ್ನು ಸ್ಮರಿಸುವ ವಿಶೇಷ ಕ್ಷಣವಾಗಿ ರೂಪುಗೊಂಡಿತು.

. . . . . . . . .

ಕಾರ್ಯಕ್ರಮದ ಆರಂಭದಲ್ಲಿ ಗುತ್ತಿಗಾರಿನ ಸಿ.ಎಂ.ಸಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರು ಹಾಗೂ ಕರ್ನಾಟಕ ಪ್ರಾಂತ್ಯದ ಸಿಎಂಸಿ ಪ್ರಾಂತೀಯ ಮುಖ್ಯಸ್ಥರು ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ಈ ವಿಶೇಷ ಸಂದರ್ಭದಲ್ಲಿ ಲೋಗೋ ಅನಾವರಣ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶ್ರೀ ಭರತ್ ಮುಂಡೋಡಿ ಅವರು ಆಗಮಿಸಿ ಲೋಗೋವನ್ನು ಅನಾವರಣಗೊಳಿಸಿದರು. ಅವರು ಸಂಸ್ಥೆಯ ಶಿಕ್ಷಣ ಮತ್ತು ಸೇವಾ ಕ್ಷೇತ್ರದ ಕೊಡುಗೆಯನ್ನು ಪ್ರಶಂಸಿಸಿ ಶುಭ ಹಾರೈಸಿದರು.

. . . . . . .

ಶುಭ ಹಾರೈಕೆಗಾಗಿ ರೆವೆರೆಂಡ್ ಫಾದರ್ ಥೋಮಸ್ ಪಾರೆಕಟ್ಟೆಲ್ ಅವರು ಉಪಸ್ಥಿತರಿದ್ದು, ತಮ್ಮ ಆಶೀರ್ವಚನ ಸಂದೇಶವನ್ನು ನೀಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಲಿಜೋ ಜೋಸ್, ಶಾಲಾ ಸಂಚಾಲಕಿ ಸಿಸ್ಟರ್ ಸಿಲ್ವಿಯ, ಶಾಲಾ ಮುಖ್ಯ ಗುರುಗಳಾದ ಸಿಸ್ಟರ್ ಟ್ರೀಸಾ ಜಾನ್ ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಕಾರ್ಯಕ್ರಮವು ಅತ್ಯಂತ ಶಿಸ್ತಿನಿಂದ ಹಾಗೂ ಸಂತಸದಿಂದ ನೆರವೇರಿತು. ಕಾರ್ಯಕ್ರಮದಲ್ಲಿ ಸಿಸ್ಟರ್ ಕ್ರಿಸ್ಟಿನಾ ವಂದಿಸಿ, ಸಹ ಶಿಕ್ಷಕಿಯರಾದ ಶಾಂತಕುಮಾರಿ, ಸುಧಾರಾಣಿ, ವಿಥುಲ ಕಾರ್ಯಕ್ರಮವನ್ನು ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading