ವಿದ್ಯಾಮಾತಾ ಅಕಾಡೆಮಿಯಲ್ಲಿ ನವೋದಯ ಮತ್ತು ಸೈನಿಕ ಶಾಲಾ ಪ್ರವೇಶ ಪರೀಕ್ಷೆಗೆ ತರಬೇತಿ ಪ್ರಾರಂಭ | ಒಂದೇ ಸೂರಿನಡಿಯಲ್ಲಿ ವಿವಿಧ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಳ ಪೂರ್ವ ತಯಾರಿ ತರಬೇತಿ ಪ್ರಾರಂಭಿಸಿದ ವಿದ್ಯಾಮಾತ | ಜೂನ್ 21ರಿಂದ ವಿದ್ಯಾಮಾತಾ ಅಕಾಡೆಮಿ ಪುತ್ತೂರು ಹಾಗೂ ಜೂನ್ 28ರಂದು ಸುಳ್ಯ ಶಾಖೆಯಲ್ಲಿ ತರಬೇತಿ ಪ್ರಾರಂಭ

ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಅಧೀನಕ್ಕೆ ಒಳಪಟ್ಟಿರುವ ನವೋದಯ ಶಾಲಾ ಪ್ರವೇಶ ಪರೀಕ್ಷೆ ಹಾಗೂ ಸೈನಿಕ ಶಾಲಾ ಪರೀಕ್ಷೆ ಸೇರಿದಂತೆ ವಿವಿಧ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರತಿಷ್ಠಿತ ತರಬೇತಿ ಕೇಂದ್ರವಾದ ವಿದ್ಯಾಮಾತಾ ಅಕಾಡೆಮಿಯು ಪೂರ್ವ ತಯಾರಿ ತರಬೇತಿಯನ್ನು ಪ್ರಾರಂಭಿಸಿದೆ.
ಎಲ್ಲಾ ವಸತಿ ಶಾಲೆಗಳ 6ನೇ ಮತ್ತು 9ನೇ ತರಗತಿಯ ಹಾಗೂ 1st PUC ಪ್ರವೇಶಾತಿಯನ್ನು ಬಯಸುವ ವಿದ್ಯಾರ್ಥಿಗಳು ವಿದ್ಯಾಮಾತಾ ಅಕಾಡೆಮಿಯ ಈ ತರಬೇತಿಯ ಸೌಲಭ್ಯವನ್ನು ಪಡೆದುಕೊಳ್ಳಲು ಸಂಸ್ಥೆಯ ಕೇಂದ್ರ ಕಚೇರಿಯಾದ ವಿದ್ಯಾಮಾತಾ ಅಕಾಡೆಮಿ ಪುತ್ತೂರು ಹಾಗೂ ಸಂಸ್ಥೆಯ  ಸುಳ್ಯ ಶಾಖೆಯನ್ನು ಸಂಪರ್ಕಿಸಿ ತಕ್ಷಣವೆ ದಾಖಲಾತಿಯನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

. . . . . . . . .

ಕಳೆದ ಸಾಲಿನಲ್ಲಿ ಅತ್ಯುತ್ತಮ ಫಲಿತಾಂಶ ದಾಖಲಿಸಿದ್ದ ಸಂಸ್ಥೆ
ಕಳೆದ ಸಾಲಿನಲ್ಲಿ ನಡೆದ ನವೋದಯ/ಸೈನಿಕ ಶಾಲಾ ಪ್ರವೇಶ ಪರೀಕ್ಷೆಗೆ ಪೂರಕವಾಗಿ ತರಬೇತಿಯನ್ನು ನೀಡಿದ್ದ ವಿದ್ಯಾಮಾತಾ ಅಕಾಡೆಮಿಯು ನವೋದಯ ಶಾಲಾ ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವುದು ಗಮನಿಸಬೇಕಾದ ಅಂಶವಾಗಿದ್ದು, ಈ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಉನ್ನತ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿರುವುದು ಸಂಸ್ಥೆಯ ಯಶಸ್ಸಿಗೆ ಹಿಡಿದ ಕೈಗನ್ನಡಿಯಾಗಿದೆ.
ಕೇವಲ ಅಂಕಗಳಿಗೆ ಮಾತ್ರ ಸೀಮಿತವಾಗಿರುವ ಇಂದಿನ ಶಿಕ್ಷಣ ವ್ಯವಸ್ಥೆಯು ಕೌಶಲ್ಯದ ವಿಷಯದಲ್ಲಿ ಹಿಂದುಳಿಯುತ್ತಿರುವುದನ್ನು ಪರಿಗಣಿಸಿ ವಿದ್ಯಾಮಾತಾ ಅಕಾಡೆಮಿಯಲ್ಲಿ ನೀಡಲಾಗುವ ನವೋದಯ, ಸೈನಿಕ, ಮೊರಾರ್ಜಿ ಸೇರಿದಂತೆ ವಿವಿಧ ವಸತಿಯುತ ಶಾಲೆಗಳ ಪ್ರವೇಶ ಪರೀಕ್ಷೆಗಳ ಪೂರ್ವ ಸಿದ್ದತಾ ತರಗತಿಗಳ ಜೊತೆಗೆ ವ್ಯಕ್ತಿತ್ವ ವಿಕಸನದ ಕಡೆಗೂ ಗಮನವಹಿಸಲಾಗುತ್ತದೆ.

. . . . . . .

*21.06.2026 ರಂದು ವಿದ್ಯಾಮಾತಾ ಅಕಾಡೆಮಿ ಪುತ್ತೂರು ಹಾಗೂ 28.06.2026 ರಂದು ಸುಳ್ಯ ವಿದ್ಯಾಮಾತಾದಲ್ಲಿ ತರಬೇತಿ ಪ್ರಾರಂಭ*
ಈ ಪೂರ್ವ ಸಿದ್ದತಾ ತರಬೇತಿಯು ಪ್ರತೀ ಭಾನುವಾರ ಬೆಳಿಗ್ಗೆ 10.00 ಗಂಟೆಯಿಂದ ಸಂಜೆ ಗಂಟೆ 3.00ರ ವರೆಗೆ ನಡೆಯಲಿದೆ, ಒಂದೇ ಸೂರಿನಡಿಯಲ್ಲಿ ವಿವಿಧ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಳ ತರಬೇತಿಯು ಸೀಮಿತ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ವೈಯಕ್ತಿಕವಾಗಿ ಪ್ರತೀ ವಿದ್ಯಾರ್ಥಿಗಳ ಕುರಿತು ಗಮನವಹಿಸಿ ವಿದ್ಯಾರ್ಥಿಗಳಲ್ಲಿರುವ ನ್ಯೂನತೆಗಳನ್ನು ಸರಿ ಪಡಿಸಲಾಗುತ್ತದೆ.
*ವಿಶೇಷ ಮಾಥ್ಸ್ ಕ್ಲಬ್ ತರಬೇತಿ ನೀಡುತ್ತಿದೆ ವಿದ್ಯಾಮಾತಾ*
ಮಕ್ಕಳ ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುವ ಪರಿಕಲ್ಪನೆಯೊಂದಿಗೆ ಅಬಾಕಸ್,ಮಾನಸಿಕ ಸಾಮರ್ಥ್ಯ ಸೇರಿದಂತೆ ವಿಶೇಷ ಗಣಿತ ಸಂಬಂಧಿತ ತರಗತಿಗಳನ್ನು  ಪಡೆದಿರುವ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟ ಹಾಗೂ ಅಂತರಾಷ್ಟ್ರೀಯ ಮಟ್ಟದ ಗಣಿತ/ಒಲಿಂಪಿಯಾಡ್ ಗಳಲ್ಲಿ ಚಾಂಪಿಯನ್ ಆಗಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು ಈ ಎಲ್ಲಾ ಸಾಧನೆಗಳನ್ನು ಪರಿಗಣಿಸಿ 2026ನೇ ಸಾಲಿನ ಹೊಸ Maths Club Batch ಹಾಗೂ ವಿವಿಧ ವಸತಿ ಶಾಲಾ ಪ್ರವೇಶ ಪರೀಕ್ಷೆಗಳ ತರಬೇತಿಗೆ ದಾಖಲಾತಿ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು ಆಸಕ್ತ ಅಭ್ಯರ್ಥಿಗಳು ಸಂಸ್ಥೆಯ ಕಚೇರಿಯನ್ನು ಸಂಪರ್ಕಿಸಲು ಅಥವಾ 9620468869 ಗೆ ಕರೆ ಮಾಡಿ ಮಾಹಿತಿ ಪಡೆಯಲು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ವಸತಿ ಶಾಲೆಗಳ ಪ್ರವೇಶಕ್ಕೆ ಸಂಬಂದಿಸಿದ ಅರ್ಹತೆಗಳು ಆಯಾ ವಸತಿ ಶಾಲಾ ಆಯ್ಕೆ ಪ್ರಕ್ರಿಯೆ ಪ್ರಾರಂಬಿಸುವ ಸಂದರ್ಭದಲ್ಲಿ ಪ್ರಕಟಿಸುವ ಅಂತಿಮ ಅಧಿಸೂಚನೆಯಲ್ಲಿ ಪ್ರಕಟಗೋಳ್ಳುತ್ತದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading