ಪೆರುವಾಜೆ : ಕಂಬದೊಂದಿಗೆ ಕಾಣೆಯಾದ ಸಿ.ಸಿ ಕ್ಯಾಮೆರಾ ; ತಿಂಗಳುಗಳೇ ಕಳೆದರೂ ಇನ್ನೂ ನಡೆದಿಲ್ಲ ಮರು ಅಳವಡಿಕೆಯ ಕಾರ್ಯ

ಬೆಳ್ಳಾರೆ ಸವಣೂರು ರಸ್ತೆಯ ಪೆರುವಾಜೆ ಗ್ರಾಮದ ಮಾಪ್ಲೆಮಜಲು ಎಂಬಲ್ಲಿ ಅಳವಡಿಸಲಾಗಿದ್ದ ಸಿ.ಸಿ ಕ್ಯಾಮೆರಾವೊಂದು ಕಾಣೆಯಾಗಿ ಹಲವು ತಿಂಗಳುಗಳೇ ಕಳೆದರೂ ಇನ್ನೂ ಮರು ಅಳವಡಿಕೆಯ ಕೆಲಸವಾಗಿಲ್ಲ. ಈ ಪ್ರದೇಶ ತಿರುವು ರಸ್ತೆಯಿಂದ ಕೂಡಿದ್ದು ಹಲವು ಅಪಘಾತಗಳು ನಡೆಯುತ್ತಿರುತ್ತವೆ. ಜೊತೆಗೆ ಅಕ್ರಮವಾಗಿ ಹೊಯಿಗೆ, ದನ ಸಾಗಾಟ ಸೇರಿದಂತೆ ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೇ ಈ ರಸ್ತೆಯ ಮೂಲಕ ನಡೆಯುತ್ತಿದೆ. ಅಕ್ರಮ ಚಟುವಟಿಕೆಗಳ ಸತ್ಯದರ್ಶನ ಮಾಡಿಸುತ್ತಿದ್ದ ಸಿ.ಸಿ ಕ್ಯಾಮರಾವು ಕಂಬದೊಂದಿಗೆ ಕಾಣೆಯಾಗಿರುವುದು ಕಳ್ಳರ ಕೈಚಳಕ ಎನ್ನಲಾಗುತ್ತಿದ್ದು, ಕೂಡಲೇ ಸ್ಥಳೀಯಾಡಳಿತ ತುರ್ತಾಗಿ ಗಮನ‌ ಹರಿಸಿ ಈ ಸ್ಥಳದಲ್ಲಿ ಹೊಸ ಸಿ.ಸಿ ಕ್ಯಾಮೆರಾ ಅಳವಡಿಸಬೇಕೆಂದು ಈ ಭಾಗದ ನಾಗರಿಕರು ಆಗ್ರಹಿಸುತ್ತಿದ್ದಾರೆ. (ವರದಿ : ಎಂ.ಎ.ಮುಸ್ತಫಾ ಬೆಳ್ಳಾರೆ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading