ಸುಬ್ರಹ್ಮಣ್ಯ : ಕುಮಾರಧಾರ – ಕುಲ್ಕುಂದ ಕಾಲೋನಿ ರಸ್ತೆ ಬದಿ ಸ್ವಚ್ಛತಾ ಅಭಿಯಾನ – “ಎಲ್ಲಿ ಸ್ವಚ್ಛತೆ ಇದೆಯೋ ಅಲ್ಲಿ ದೇವರ ಸಾನಿಧ್ಯ ಇದೆ ” : ರಾಜಶೇಖರ ಕೋಟ್ಯಾನ್

ಸುಬ್ರಹ್ಮಣ್ಯ ಜೂನ್ 07 : ದಿನನಿತ್ಯ ರಾಜ್ಯ ಹೊರ ರಾಜ್ಯಗಳಿಂದ ಸಾವಿರಾರು ಭಕ್ತಾದಿಗಳು ಕುಕ್ಕೆ ಕ್ಷೇತ್ರಕ್ಕೆ ಬಂದು ಶ್ರೀ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ ಹೋಗುತ್ತಾರೆ. ಆದರೆ ಬರುವಾಗ ಅಥವಾ ಹೋಗುವ ಸಂದರ್ಭದಲ್ಲಿ ಪ್ಲಾಸ್ಟಿಕ್ ಬಾಟಲಿ, ತಟ್ಟೆ, ಚೀಲ ಹಾಗೂ ಇನ್ನಿತರ ಕಚ್ಚಾ ವಸ್ತುಗಳನ್ನು ಮಾರ್ಗದ ಬದಿಯ ಚರಂಡಿಗೆ ಎಸೆದು ಹೋಗುವುದು ಸಾಮಾನ್ಯವಾಗಿದೆ. ಎಷ್ಟೇ ಬಾರಿ ಜಾಗೃತಿ ಮೂಡಿಸಿದರು ಕೂಡ ಇದು ನಿರಂತರವಾದ ಕೆಲವು ಭಕ್ತಾದಿಗಳು ಹಾಗೂ ಪ್ರಯಾಣಿಕರ ಅಭ್ಯಾಸವಾಗಿಬಿಟ್ಟಿದೆ. ಕಳೆದ 11 ವರ್ಷಗಳಿಂದ ನಿರಂತರವಾಗಿ ಪ್ರತಿ ರವಿವಾರ ಸ್ವಚ್ಛತಾ ಕಾರ್ಯವನ್ನು ಮಾಡುತ್ತಾ ಬರುತ್ತಿರುವ ಡಾ. ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಇಂದು ರವಿವಾರ ಕೂಡ 533ನೇ ವಾರದಲ್ಲಿ ಕುಮಾರಧಾರ ಸೇತುವೆಯಿಂದ ಕುಲ್ಕುಂದ ದವರೆಗೆ ಮುಖ್ಯರಸ್ತೆಯ ಎರಡು ಬದಿಗಳಲ್ಲಿ ಇದ್ದಂತಹ ಪ್ಲಾಸ್ಟಿಕ್ ಚೀಲ ಪ್ಲಾಸ್ಟಿಕ್ ತಟ್ಟೆ ಪ್ಲಾಸ್ಟಿಕ್ ಬಾಟಲಿ ಇತ್ಯಾದಿಗಳನ್ನು ಸ್ವಚ್ಛಗೊಳಿಸಿರುತ್ತಾರೆ. ಸ್ವಚ್ಛತಾ ಕಾರ್ಯವನ್ನು ಮಾಡುತ್ತಿರುವ ಸಂದರ್ಭದಲ್ಲಿ ಕ್ಷೇತ್ರಕ್ಕೆ ಬಂದ ದೇವರ ಭಕ್ತ ಚಲನಚಿತ್ರ ನಟ, ನಿರ್ಮಾಪಕ ಹಾಗೂ ಸಮಾಜಸೇವಕ ರಾಜಶೇಖರ ಕೋಟ್ಯಾನ್ ಅವರು ಸ್ವಚ್ಛತೆ ಮಾಡುತ್ತಿರುವ ಸ್ಥಳಕ್ಕೆ ಬಂದು ಸ್ವಚ್ಛತಾ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡುತ್ತಾ “ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವು ದೇಶದ ಹಾಗೂ ರಾಜ್ಯದ ಪ್ರತಿಷ್ಠಿತ ನಾಗಾರಾಧನೆಯ ಕ್ಷೇತ್ರವಾಗಿದ್ದು, ಇಲ್ಲಿ ಸ್ವಚ್ಛತೆಗೆ ಬಹಳ ಪ್ರಾಮುಖ್ಯ ನೀಡಬೇಕಾಗಿದೆ. ಎಲ್ಲಿ ಸ್ವಚ್ಛತೆ ಇದೆಯೋ ಅಲ್ಲಿ ದೇವರ ಸಾನಿಧ್ಯವಿದೆ, ಎಂಬಂತೆ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಇಲ್ಲಿ ಪ್ರತಿ ರವಿವಾರ ಸುಮಾರು 50 ರಿಂದ 60 ಸ್ವಯಂಸೇವಕ ಸಿಬ್ಬಂದಿಗಳೊಂದಿಗೆ ನಿರಂತರವಾಗಿ ಕ್ಷೇತ್ರದಾದ್ಯಂತ ಸ್ವಚ್ಛತಾ ಕಾರ್ಯವನ್ನು ಮಾಡುತ್ತಿರುವ ಡಾ. ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನ ಎಲ್ಲಾ ಸದಸ್ಯರುಗಳು ಹಾಗೂ ಅದರ ಸಂಸ್ಥಾಪಕರಾದ ಡಾ. ರವಿ ಕಕ್ಕೆಪದವು ಇವರ ಕಾರ್ಯವನ್ನು ಮೆಚ್ಚಿಕೊಂಡು ಇದರಿಂದ ಆದಷ್ಟು ಜಾಗೃತಿ ಭಕ್ತಾದಿಗಳಲ್ಲಿ ಹಾಗೂ ಪ್ರಯಾಣಿಕರಲಿ ಮೂಡಲಿ” ಎಂದರು. ಅವರೊಂದಿಗೆ ಸೋಮೇಶ್ವರ ದೇವಳದ ಆಡಳಿತ ಸಮಿತಿ ಸದಸ್ಯ ಹಾಗೂ ಪುರಸಭಾ ಸದಸ್ಯ ದೀಪಕ್ ಪಿಲ್ಲಾರ್, ಗೆಜ್ಜೆಗಿರಿ ಕ್ಷೇತ್ರದ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ದೀಪಕ್ ಕೊಟ್ಯಾನ್, ಲೋಕೋಪಯೋಗಿ ಇಲಾಖೆ ಉದ್ಯಮಿ ವೈಶಾಖ ರಾವ್ ರವರು ಸ್ವಚ್ಛತಾ ಕಾರ್ಯಕ್ರಮವನ್ನು ಶ್ಲಾಘಿಸಿ ಎಲ್ಲರೂ ಇಂತಹ ಪುಣ್ಯ ಕಾರ್ಯದಲ್ಲಿ ತೊಡಗಿಸುವುದರೊಂದಿಗೆ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದರು. ಡಾ. ರವಿ ಕಕ್ಕೆಪದವು ಅವರು ಸ್ವಚ್ಛತಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ನಿವೃತ್ತ ಉಪನ್ಯಾಸಕ ಸೀನಿಯರ್ ಚೇಂಬರ್ ಸ್ಥಾಪಕ ಅಧ್ಯಕ್ಷ ವಿಶ್ವನಾಥ ನಡುತೋಟ, ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಗೋಪಾಲ್ ಎಣ್ಣೆಮಜಲು, ಕುಲ್ಕುಂದ ಬಸವೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಗಿರಿಧರಸ್ಕಂದ, ವೈಟ್ ಲಿಫ್ಟರ್ ಗಣೇಶ್ ಮುಂತಾದವರು ಹಾಜರಿದ್ದು ಸ್ವಚ್ಛತೆಯ ಬಗ್ಗೆ ತಮ್ಮ ತಮ್ಮ ಅನುಭವಗಳನ್ನು ತಿಳಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading