ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘ ನೂತನ ಸಮಿತಿ ಪದಗ್ರಹಣ ಹಾಗೂ ಬೈಲುವಾರಿ ಸಮಿತಿ ಸದಸ್ಯರ ಆಯ್ಕೆ

ಸುಳ್ಯ : ಇತ್ತೀಚೆಗೆ ನಡೆದ ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ಮಹಾಸಭೆಯಲ್ಲಿ ಆಯ್ಕೆಯಾದ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಕಾರ್ಯಕ್ರಮ ಹಾಗೂ ಉಪಸಮಿತಿಗಳ ರಚನಾ ಕಾರ್ಯಕ್ರಮವು ಭಾನುವಾರ ಸುಳ್ಯ ಕೇರ್ಪಳ ಸಂಧ್ಯಾರಶ್ಮಿ ಸಭಾಭವನದಲ್ಲಿ ನಡೆಯಿತು. 
ನೂತನ ಕಾರ್ಯಕಾರಿ ಸಮಿತಿ ಆಧ್ಯಕ್ಷ ಸುರೇಶ್ ಕರ್ಲಪ್ಪಾಡಿ ನೇತೃತ್ವದ ಸಮಿತಿಯಲ್ಲಿ ಕಾರ್ಯದರ್ಶಿ ಗೋಪಾಲಕೃಷ್ಣ ಮೊರಂಗಲ್ಲು, ಕೋಶಾಧಿಕಾರಿ ರಾಧಾಕೃಷ್ಣ ಬೇರ್ಪಡ್ಕ, ಉಪಾಧ್ಯಕ್ಷೆ ಹೇಮಲತಾ ಕಲ್ಲುಗುಂಡಿ, ಜೊತೆಕಾರ್ಯದರ್ಶಿ ನಿತೀಶ್ ಎರ್ಮೇಟ್ಟಿ, ಸಂಘಟನಾ ಕಾರ್ಯದರ್ಶಿ ವಿಜಯಕುಮಾರ್ ಎರ್ಮೇಟ್ಟಿ ಹಾಗೂ ನಿರ್ದೇಶಕರುಗಳಾಗಿ ವೆಂಕಟ್ರಮಣ ಬೇರ್ಪಡ್ಕ, ಚಂದ್ರಶೇಖರ ಉದ್ದಂತಡ್ಕ, ಸಂಜಯ್ ನೆಟ್ಟಾರು, ಸಚಿತ್ ಕಲ್ಮಡ್ಕ, ಕೇಶವ ಮೊರಂಗಲ್ಲು, ಪ್ರವೀಣ್ ಕುಮಾರ್ ಜಯನಗರ, ಸೌಮ್ಯಾ ಇರಂತಮಜಲು, ಸತ್ಯಾ ಕೊಲ್ಲಮೊಗ್ರ ಕನಕಮಜಲು, ವಿಶಾಲಾಕ್ಷಿ ಮೊರಂಗಲ್ಲು ಹಾಗೂ ಸಂಘದ ಆಂತರಿಕ ಲೆಕ್ಕಪರಿಶೋಧಕರಾಗಿ ಮಹಾಲಿಂಗನ್ ಬಾಜರ್ತೊಟ್ಟಿ ಮತ್ತು ಸಂಘದ ಕಾನೂನು ಸಲಹೆಗಾರರಾಗಿ ವಕೀಲ ನಾರಾಯಣ.ಕೆ ಹಾಗೂ ಸಂಘದ ಗೌರವ ಸಲಹೆಗಾರರಾಗಿ ಶಂಕರ ಪಾಟಾಳಿ ಪರಿವಾರಕಾನ, ನಾರಾಯಣ ಪಾಟಾಳಿ ನಾವೂರು ಮತ್ತು ಚಂದ ಕುಡೆಕಲ್ಲು ಪದಗ್ರಹಣ ಸ್ವೀಕರಿಸಿದರು. ಪದಗ್ರಹಣ ಸಭೆಯ ಅಧ್ಯಕ್ಷತೆಯನ್ನು ನಿರ್ಗಮಿತ ಅಧ್ಯಕ್ಷ ವೆಂಕಟ್ರಮಣ ಬೇರ್ಪಡ್ಕ ವಹಿಸಿ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿದರು. 
ಇದೇ ಸಂಧರ್ಭದಲ್ಲಿ ಸಂಘದ ಉಪಸಮಿತಿಗಳಾದ ಗ್ರಾಮವಾರು ಸಮಿತಿ ಹಾಗೂ ಮಹಿಳಾ ಸಮಿತಿಗಳನ್ನು ರಚಿಸಲಾಯಿತು ಗ್ರಾಮವಾರು ಸಮಿತಿ ಸಂಚಾಲರಾಗಿ ಉದಯರವಿ ಕಲ್ಚಾರು ಹಾಗೂ ಸಹ ಸಂಚಾಲಕರಾಗಿ ಸೀತಾರಾಮ ಕರ್ಲಪ್ಪಾಡಿ ಮಹಿಳಾ ಸಮಿತಿ ಸಂಚಾಲಕಿಯಾಗಿ ವಿಶಾಲಾ ಕರ್ಲಪ್ಪಾಡಿ ಹಾಗೂ ಸಹಸಂಚಾಲಕಿಯಾಗಿ ಪ್ರೇಮಾ ಚಂದ ಕುಡೆಕಲ್ಲು ಇವರನ್ನು ನೇಮಿಸಿಕೊಳ್ಳಲಾಯಿತು.
ನೂತನ ಗ್ರಾಮವಾರು ಸಮಿತಿಯ ಸದಸ್ಯರುಗಳಾಗಿ ಪ್ರಸಾದ್ ಸುಮೀ ನಿಲಯ ಜಯನಗರ, ಲೋಕೇಶ್ ಕರ್ಲಪ್ಪಾಡಿ, ಶಂಕರ ಬಡ್ಡಡ್ಕ, ಶಶಿಧರ ನೆಲ್ಲಿಕುಂಜೆ, ನಾರಾಯಣ ಸಂಕೇಶ,ಪ್ರದೀಪ್ ಹುಳಿಯಡ್ಕ, ಜನಾರ್ಧನ ನೀರಬಿದಿರೆ, ದಾಮೋದರ ಅಡ್ಕಾರ್, ಗಣೇಶ್ ಪರ್ಲಿಕಜೆ ಐವರ್ನಾಡು, ದಿನೇಶ್ ಹೊಸೂರು, ಶಿವಪ್ರಸಾದ್ ಪೇರಾಲು, ಗಣೇಶ್ ಪಾಜಪಳ್ಳ, ನಾಗೇಶ್ ಪೆರಾಜೆ, ಲಕ್ಷ್ಮೀಶ ಬೆಳ್ಳಾರೆ, ಸುರೇಶ್ ಕಂದ್ರಪ್ಪಾಡಿ, ನವೀನ್ ಕೊಯನಾಡು, ಜಗದೀಶ್ ಮಠ, ತೀರ್ಥರಾಮ ಮೊರಂಗಲ್ಲು, ಪ್ರದೀಪ್ ಪೆರಾಜೆ, ಪ್ರಶಾಂತ್ ಸೂಂತೋಡು, ಗಿರಿಧರ ಗುತ್ತಿಗಾರು, ಶಶಿಧರ ಕೈವಲ್ತಡ್ಕ, ಮತ್ತು ರವೀಂದ್ರ ಹುಳಿಯಡ್ಕ ಹಾಗೂ ಮಹಿಳಾ ಸಮಿತಿಯ ಸದಸ್ಯರುಗಳಾಗಿ ನಯನಾ ಕಾಟಿಪಳ್ಳ, ಅನುತಾ ಕರ್ಲಪ್ಪಾಡಿ,ಸವಿತಾ ಹುಳಿಯಡ್ಕ, ಅಕ್ಷತಾ ಬಡ್ಡೆಕಲ್ಲು, ಸುಮನಾ ಹುಳಿಯಡ್ಕ, ಪುಷ್ಪಾಲತಾ ಬೆಟ್ಟಂಪಾಡಿ, ಅಂಬಿಕಾ ಮಹಾಬಲಡ್ಕ, ಹರಿಣಾಕ್ಷಿ ಮಹಾಬಲಡ್ಕ, ವಿದ್ಯಾ ಮಾಧವ ಕರ್ಲಪ್ಪಾಡಿ, ಜಯಂತಿ ಕರ್ಲಪ್ಪಾಡಿ, ಆಶಾ ಕೋಲ್ಚಾರು, ಜಯಲತಾ ಕೇರ್ಪಳ, ಹರಿಣಾಕ್ಷಿ ನಾರಾಯಣ ಶಾಂತಿನಗರ, ಸರಸ್ವತಿ ಬೆಟ್ಟಂಪಾಡಿ, ಶಾಂತಲಾ ಅಡ್ಕಾರು, ಅನಿತಾ ಅಡ್ಕಾರು, ಸರಸ್ವತಿ ಕೈವಲ್ತಡ್ಕ, ಪ್ರೇಮಾ ದಿವಾಕರ ನೈಯ್ಯೋಣಿ, ರವಿಕಲಾ ಮೊರಂಗಲ್ಲು, ಲಲಿತಾ ಉಬರಡ್ಕ, ವಿಜಯ ವಿಶ್ವನಾಥ ಜಯನಗರ, ದಮಯಂತಿ ಕರ್ಲಪ್ಪಾಡಿ ಹಾಗೂ ಮಾಧ್ಯಮ ಸಮಿತಿ ಸದಸ್ಯರುಗಳಾಗಿ ಮಿಥುನ್ ಕರ್ಲಪ್ಪಾಡಿ,ಸುಖೇಶ್ ಅಡ್ಕಾರ್ ಹಾಗೂ ಗಾಯತ್ರಿ ಪ್ರಶಾಂತ್ ಪೆರಾಜೆ ಇವರುಗಳನ್ನು ಅಯ್ಕೆಮಾಡಿಕೊಳ್ಳಲಾಯಿತು. 
ಸಂಜಯ್‌ ನೆಟ್ಟಾರು ಸ್ವಾಗತಿಸಿ, ಗೋಪಾಲಕೃಷ್ಣ ಮೊರಂಗಲ್ಲು ವಂದಿಸಿ ಸಚಿತ್ ಕಲ್ಮಡ್ಕ ಕಾರ್ಯಕ್ರಮ ನಿರೂಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading