ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಕೆವಿಜಿ ಆಯುರ್ವೇದ ಗಿಡ ಮೂಲಿಕಾ ವನಕ್ಕೆ “ಹಸಿರು ಪ್ರಶಸ್ತಿ-2026”

ಗೋ ಗ್ರೀನ್ ಅಭಿಯಾನ “ಇಂದು ಗಿಡ ನೆಡಿ - ನಾಳೆಯನ್ನು ರಕ್ಷಿಸಿ” ಎನ್ನುವಂತೆ ಜೇಸಿಐ ಇಂಡಿಯಾ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ವಿವಿಧ ಪರಿಸರ ಸಂವರ್ಧಿತ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಅದರಂತೆ ಪರಿಸರ ಸಂರಕ್ಷಣೆ ಹಾಗೂ ಹಸಿರು ಅಭಿವೃದ್ಧಿಗೆ ಅತ್ಯುತ್ತಮ ಕೊಡುಗೆ ನೀಡುವ ವ್ಯಕ್ತಿ ಯಾ ಸಂಘ - ಸಂಸ್ಥೆಯನ್ನು ಗುರುತಿಸಿ ಗೌರವಿಸುವುದ್ದಾಗಿದ್ದು, ಅದರಂತೆ ಜೇಸಿವಿ ಸುಳ್ಯ ಪಯಸ್ವಿನಿಯು ಜೂನ್ 5 ರಂದು ವಿದ್ಯೆಯ ಜೊತೆಗೆ ಪರಿಸರ ಸಂರಕ್ಷಣೆಯ ಮೌಲ್ಯಗಳನ್ನು ಬೆಳೆಸುವುದು ಶಿಕ್ಷಣ ಸಂಸ್ಥೆಯ ನಿಜವಾದ ಉದ್ದೇಶ. ಹಸಿರು ಕ್ಯಾಂಪಸ್ - ಸುಸ್ಥಿರ ಭವಿಷ್ಯದ ಅಡಿಪಾಯ” ಎನ್ನುವಂತೆ, ಪರಿಸರ ಸಂರಕ್ಷಣೆ, ಔಷದೀಯ ಸಸ್ಯಗಳ ಸಂವರ್ಧನೆ, ಜೀವ ವೈವಿಧ್ಯದ ರಕ್ಷಣೆ, ಹಸಿರು ಪರಿಸರ ನಿರ್ಮಾಣ ಹಾಗೂ ಔಷಧೀಯ ಸಸ್ಯ ಸಂಪತ್ತಿನ ಉಳಿವಿಗಾಗಿ ನಿರಂತರ ಪರಿಸರ ಸಂವರ್ಧಿತ ಕಾರ್ಯಗಳೊಂದಿಗೆ ಗುರುತಿಸಿಕೊಳ್ಳುತ್ತಿರುವ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಕೆವಿಜಿ ಆಯುರ್ವೇದ ಗಿಡ ಮೂಲಿಕಾ ವನಕ್ಕೆ “ಹಸಿರು ಪ್ರಶಸ್ತಿ-2026” ನ್ನು ನೀಡಿ ಗೌರವಿಸಿದೆ.

. . . . . . . . .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಜೇಸಿಐ ಸುಳ್ಯ ಪಯಸ್ವಿನಿಯ ಅಧ್ಯಕ್ಷರಾದ ಜೆ.ಎಫ್.ಎಂ. ಲತಾಶ್ರೀ ಸುಪ್ರೀತ್ ಮೋಂಟಡ್ಕ ಹಸಿರು ಪ್ರಶಸ್ತಿಯ ಬಗ್ಗೆ ಮಾತನ್ನಾಡಿದರು. ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಜೇಸಿಐ ಸುಳ್ಯ ಪಯಸ್ವಿನಿಯ ಪೂರ್ವಾಧ್ಯಕ್ಷರಾದ ಜೇಸಿ. ಹೆಚ್.ಜಿ.ಎಫ್. ಚಂದ್ರಶೇಖರ ನಂಜೆ ನೆರವೇರಿಸಿ ಶುಭಹಾರೈಸಿದರು. ವೇದಿಕೆಯಲ್ಲಿ ನಿಮಾ ಸುಳ್ಯ ಇದರ ಅಧ್ಯಕ್ಷರಾದ ಡಾ. ಲಕ್ಷ್ಮೀಶ ಕೆ. ಎಸ್., ಎನ್.ಎಸ್.ಎಸ್. ಯೋಜನಾಧಿಕಾರಿ ಡಾ. ಪ್ರಮೋದ್ ಪಿ. ಎ., ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ವಿನಯ್ ಶಂಕರ್ ಭಾರದ್ವಾಜ್ ಬಿ., ದ್ರವ್ಯಗುಣ ವಿಭಾಗ ಮುಖ್ಯಸ್ಥರಾದ ಡಾ. ರಾಜಶೇಖರ ಎನ್., ಡಾ. ವಿಜಯಲಕ್ಷ್ಮಿ ಪಿ. ಬಿ., ಅಗದ ತಂತ್ರ ವಿಭಾಗ ಮುಖ್ಯಸ್ಥರಾದ ಡಾ. ಅವಿನಾಶ್ ಕೆ. ವಿ., ಲಯನ್ಸ್ ಕೋಶಾಧಿಕಾರಿ ಲ. ಜತ್ತಪ್ಪ ರೈ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಬೋದಕ ಹಾಗೂ ಬೋದಕೇತರ ವರ್ಗದವರು, ಸ್ನಾತ್ತಕೋತ್ತರ ವಿದ್ಯಾರ್ಥಿಗಳು ಹಾಗೂ ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

. . . . . . .

ಏನಿದು ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಹರ್ಬಲ್ ಗಾರ್ಡನ್ (ಗಿಡ ಮೂಲಿಕಾ ವನ) ? ಸುಮಾರು ನಾಲ್ಕು ಎಕರೆ ವಿಸ್ತೀರ್ಣದಲ್ಲಿ 782ಕ್ಕೂ ಅಧಿಕ ಔಷಧೀಯ ಸಸ್ಯಗಳನ್ನು ಸಂರಕ್ಷಿಸುತ್ತಾ, ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ವಿವಿಧ ಔಷಧೀಯ ಸಸ್ಯಗಳ ಗುರುತು, ಗುಣಧರ್ಮಗಳು ಹಾಗೂ ಚಿಕಿತ್ಸಾ ಉಪಯೋಗಗಳ ಪ್ರಾಯೋಗಿಕ ಜ್ಞಾನವನ್ನು ನೀಡುವ ಪ್ರಮುಖ ಕೇಂದ್ರವಾಗಿದ್ದಲ್ಲದೇ, ಸಂಶೋಧಕರ ಸಂಶೋಧನೆಗಳಿಗೆ ಪೂರಕವಾಗುವಂತೆ ಗುಣಮಟ್ಟದ ಔಷಧೀಯ ಸಸ್ಯಗಳನ್ನು ಪೋಷಿಸುತ್ತಾ, ಸಂರಕ್ಷಿಸುತ್ತಾ, ಪ್ರಾಯೋಗಿಕ ಕಲಿಕೆಗೆ ಉತ್ತಮ ವಾತಾವರಣವನ್ನು ನಿರ್ಮಿಸಿ ಕೊಡುವುದರೊಂದಿಗೆ, ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮತ್ತು ಆಯುರ್ವೇದದ ಮಹತ್ವವನ್ನು ಬೆಳೆಸುತ್ತಿರುವ ಶಿಕ್ಷಣ ಸಂಸ್ಥೆಯ ಅಂಗ ಭಾಗವಾಗಿರುತ್ತದೆ. ರಾಷ್ಟ್ರೀಯ ಆಯುರ್ವೇದ ದಿನ, ವನಮಹೋತ್ಸವ, ವಿಶ್ವ ಪರಿಸರ ದಿನ ಹಾಗೂ ಇತರ ಸಂದರ್ಭಗಳಲ್ಲಿ ಗಿಡ ನೆಡುವ ಮೂಲಕ ಸಸ್ಯೋದ್ಯಾನವನ್ನು ವಿಸ್ತರಿಸುತ್ತಾ, ಪ್ರಕೃತಿಯ ಅಮೂಲ್ಯ ಔಷಧ ಸಂಪತ್ತನ್ನು ಸಂರಕ್ಷಿಸಿ, ಆಯುರ್ವೇದ ಜ್ಞಾನವನ್ನು ಪಸರಿಸುತ್ತಿರುವ ಕೆವಿಜಿ ಆಯುರ್ವೇದ ಹರ್ಬಲ್ ಗಾರ್ಡನ್ ಹಸಿರು ಭವಿಷ್ಯದ ದಾರಿದೀಪವಾಗಿರುವ ಹಸಿರು ಪರಿಸರ ನಿರ್ಮಾಣ ಹಾಗೂ ಔಷಧೀಯ ಸಸ್ಯ ಸಂಪತ್ತಿನ ಉಳಿವಿಗಾಗಿ ನಿರಂತರ ಕಾರ್ಯೋನ್ಮುಖವಾಗಿರುವ ಮೂಲಿಕಾ ವನವೇ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಹರ್ಬಲ್ ಗಾರ್ಡನ್.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading