ಸುಳ್ಯದ ಬೃಹತ್ ಮಳಿಗೆ “ಸ್ಟಾರ್ ಟೈಲ್ಸ್” ಶುಭಾರಂಭ – 730ಕ್ಕೂ ಅಧಿಕ ಅಂತಾರಾಷ್ಟ್ರೀಯ ಗುಣಮಟ್ಟದ ಟೈಲ್ಸ್ ಗಳ ಭವ್ಯ ಸಂಗ್ರಹ

ಅಂತಾರಾಷ್ಟೀಯ ಖ್ಯಾತಿಯ ಟೈಲ್ಸ್ ಗಳ ಅಪೂರ್ವ ಸಂಗ್ರಹದೊಂದಿಗೆ ಸ್ಟಾರ್ ಟೈಲ್ಸ್ ಮಳಿಗೆ ಸುಳ್ಯದಲ್ಲಿ ಜೂ.01ರಂದು ಶುಭಾರಂಭಗೊಂಡಿತು. ಕೆವಿಜಿ ಅಕಾಡೆಮಿ ಅಫ್ ಲಿಬರಲ್ ಎಜುಕೇಶನ್ ಸೊಸೈಟಿ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ, ಸೈಂಟ್ ಬ್ರಿಜಿಡ್ಸ್ ಚರ್ಚ್ ಧರ್ಮಗುರು ರೆ.ಫಾ. ಅಲ್ವಿನ್ ಡಿಕುನ್ಹಾ ನೂತನ ಮಳಿಗೆಯನ್ನು ಉದ್ಘಾಟನೆ ಮಾಡಿದರು. ಕುಂಬೊಳ್ ತಂಙಳ್ ಪರಂಪರೆಯ ಸಯ್ಯದ್ ಉಮ್ಮರ್ ಕುಂಞಕೋಯ ತಂಙಳ್ ಅವರ ಸುಪುತ್ರ ಸಯ್ಯದ್ ಶಹೀರ್ ಹುಸೈನ್ ತಂಙಳ್ ಕುಂಬೊಳ್ ಮಳಿಗೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಶುಭ ಹಾರೈಸಿದರು. 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ಸೂಡ ಅಧ್ಯಕ್ಷ ಕೆ.ಎಂ. ಮುಸ್ತಫ ವಹಿಸಿದ್ದರು. ಸ್ಟಾರ್ ಗ್ರೂಪ್‌ನ ಸ್ಥಾಪಕ ಬಾಬಾ ಕುಂಞ, ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ಎಂ.ಬಿ.ಫೌಂಡೇಷನ್ ಅಧ್ಯಕ್ಷ ಎಂ.ಬಿ. ಸದಾಶಿವ, ಸುಳ್ಯ ತಾಲೂಕು ಬಂಟರ ಸಂಘದ ಅಧ್ಯಕ್ಷ ಎನ್. ಜಯಪ್ರಕಾಶ್ ರೈ, ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ಎಂ. ವೆಂಕಪ್ಪ ಗೌಡ, ಎಸ್. ಸಂಶುದ್ದೀನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಜಿ.ಪಂ. ಮಾಜಿ ಸದಸ್ಯೆ ಸರಸ್ವತಿ ಕಾಮತ್, ವರ್ತಕರ ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್ ಜನತಾ, ಇಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ ಕೃಷ್ಣ, ಎ.ಸಿ.ಎಫ್. ಪ್ರಶಾಂತ್ ಪೈ, ಪಿ. ಮಯೂರ್ ಅಂಬೆಕಲ್ಲು, ಸಂತೋಷ್ ಕುತ್ತಮೊಟ್ಟೆ, ಹೇಮಂತ್ ಕಾಮತ್, ಮಹಮ್ಮದ್ ಕೆ.ಎಂ. ಅಬ್ದುಲ್ ಲತೀಫ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಟಾರ್ ಟೈಲ್ಸ್ ಮಳಿಗೆ ಸಿಬ್ಬಂದಿ ಹರಿಪ್ರಸಾದ್ ಅಡ್ತಲೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಜಿತ್ ಅಡ್ತಲೆ ಕಾರ್ಯಕ್ರಮ ನಿರೂಪಿಸಿದರು.

ಅಂತಾರಾಷ್ಟ್ರೀಯ ಖ್ಯಾತಿಯ ಗುಣಮಟ್ಟದ ಟೈಲ್ಸ್ ಗಳ 730ಕ್ಕೂ ಅಧಿಕ ಟೈಲ್ಸ್‌ಗಳನ್ನು ಒಳಗೊಂಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಅತೀ ದೊಡ್ಡದು ಎನ್ನಬಹುದಾದ ಟೈಲ್ಸ್ ಮಾರಾಟ ಮಳಿಗೆ ಸುಳ್ಯ ನಗರದ ಗಾಂಧಿನಗರ ಪೆಟ್ರೋಲ್ ಪಂಪ್ ಬಳಿಯ ಎಂ.ಕೆ. ರೆಸಿಡೆನ್ಸಿಯಲ್ಲಿ ಪ್ರಾರಂಭಗೊಂಡಿದೆ. ಸುಮಾರು 9 ಸಾವಿರ ಚದರ ಅಡಿ ವಿಸ್ತಾರವಾದ ಸ್ಥಳ ಒಳಗೊಂಡಿರುವ ಶೋರೂಂನಲ್ಲಿ ವಿವಿಧ ವಿನ್ಯಾಸ ಮತ್ತು ಗುಣಮಟ್ಟದ ಟೈಲ್ಸ್ ಗಳನ್ನು ಡಿಸ್‌ಪ್ಲೆ ಮಾಡುವ ಮೂಲಕ ಟೈಲ್ಸ್ ಗಳ ಅದ್ಭುತ ಲೋಕವನ್ನು ತೆರೆಯಲಾಗಿದೆ. ಜೊತೆಗೆ ಬೃಹತ್ ಗೋದಾಮುಗಳನ್ನು ನಿರ್ಮಿಸಲಾಗಿದೆ. ಟೈಲ್‌ಗಳ ಜೊತೆಗೆ ಸಾನಿಟರಿ, ಇಲೆಕ್ಟಿಕಲ್ ಮತ್ತು ಟೈಲ್ಸ್‌ಗಳ ಅದ್ಭುತ ಲೋಕ : ಸ್ಟಾರ್ ಟೈಲ್ಸ್‌ನ ನೂತನ ಶೋರೂಂನಲ್ಲಿ ಟೈಲ್ಸ್ ಗಳ ವಿಸ್ಮಯ ಲೋಕ ಅನಾವರಣಗೊಂಡಿದೆ. ಅಂತಾರಾಷ್ಟೀಯ ಖ್ಯಾತಿಯ ಟೈಲ್ಸ್‌ಗಳು ಸೇರಿ ಎಲ್ಲಾ ಕಂಪೆನಿಗಳ ಪ್ರಮುಖ ಬ್ರಾಂಡ್‌ಗಳ ಟೈಲ್ಸ್‌ಗಳು ಇಲ್ಲಿ ಲಭ್ಯವಿರಲಿದೆ. ಅಂತಾರಾಷ್ಟೀಯ ಬ್ರಾಂಡ್‌ಗಳಾದ ಕಝಾರಿಯ, ರಾಕ್ ಸೆರಾಮಿಕ್ಸ್, ಜಾನ್ಸನ್, ಸೋಮಾನಿ, ನಿಡೋ, ಕ್ರಿಯೆನ್ನಾ ವರ್ಮೋರಾ, ಬೋಪೋ ಗ್ರಾನಿಟೊ, ಬೋನ್ಸಾ, ಫ್ಯಾವಿಯೇಟ್, ಮಿಲೇನಿಯಮ್, ಓಯಸಿಸ್, ಇಟಾಲಿಕಾ, ಸಿಮೋನ್ಸಾ ಸೇರಿದಂತೆ ಎಲ್ಲಾ ಟೈಲ್ಸ್ಗಳು ಇಲ್ಲಿ ಲಭ್ಯವಿದೆ. ಮೈಕ್ ಲ್ಯಾಟ್ರಿಕೇಟ್, ಪಿಡ್ಲೆಂಟ್ ರೋಫ್, ಫೆವಿಕಾಲ್, ಕಝಾರಿಯಾ, ಗ್ರೇಸ್ಬರ್ಗ್ ಹೀಗೆ ಖ್ಯಾತ ಕಂಪೆನಿಗಳ ಗಮ್‌ಗಳು ಸ್ಟಾರ್ ಟೈಲ್ಸ್ ಶೋರೂಂನಲ್ಲಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ದೊರೆಯಲಿದೆ. ಎಲ್ಲಾ ತರಹದ ಸಾನಿಟರಿ ಉಪಕರಣಗಳು, ಇಲೆಕ್ಟ್ರಿಕಲ್ ಐಟಂಗಳು ಲಭ್ಯವಿದೆ. ಬಾತ್ರೂಮ್ ಫಿಟ್ಟಿಂಗ್ಸ್, ಕಿಚನ್ ಸೆಟ್ಟಿಂಗ್ಸ್, ಕ್ಲೋಸೆಟ್, ಕೊಮ್ಮೊಡೊ, ವಾಶ್ ಬೇಸಿನ್, ಪೈಪ್‌ಗಳು, ಶವರ್, ಬಾತ್ ಟಬ್, ವಾರ್ಡ್ರೂಲ್ಸ್ ಹೀಗೆ ಎಲ್ಲಾ ತರಹದ ಸಾನಿಟರಿ, ಇಲೆಕ್ಟಿಕಲ್, ಪ್ಲಂಬಿಂಗ್ ಐಟಂಗಳು ಲಭ್ಯವಿದೆ. ಜಾಗ್ವಾರ್, ಕ್ಯಾರೊವಿಟ್(ಕಜಾರಿಯಾ), ಸೋಮಾನಿ ಮತ್ತಿತರ ಪ್ರಮುಖ ಕಂಪೆನಿಗಳ ಐಟಂಗಳನ್ನು ಸರಬರಾಜು ಮಾಡಲಾಗುತ್ತದೆ. ಫಿನೋಲೆಕ್ಸ್ ಪೈಪ್‌ಗಳು, ಪೈಪ್ ಸೆಟ್ಟಿಂಗ್‌ಗಳು, ಪಿವಿಸಿ, ಸಿಪಿವಿಸಿ, ಯುಪಿವಿಸಿ, ಎಲ್ಲಾ ತರಹದ ಪೈಪ್ ಗಳು, ಪೈಪ್ ಪಿಟ್ಟಿಂಗ್ಸ್ಗಳು ಲಭ್ಯವಿದೆ. ಇಲೆಕ್ಟಿçಕಲ್ ಐಟಂಗಳಲ್ಲಿ ಪಾಲಿಕ್ಯಾಬ್, ಅಪ್ಪರ್, ಸ್ಪಿಡ್ಡರ್, ಓರಿಯಂಡ್, ಹಾವೆಲ್ಸ್ ಮತ್ತಿತರ ಕಂಪೆನಿಗಳ ಐಟಂಗಳು ದೊರೆಯುತ್ತದೆ.

ಎರಡು ದಶಕಗಳ ಅನುಭವ : ಟೈಲ್ಸ್ ಸಾನಿಟರಿ, ಇಲೆಕ್ಟಿಕಲ್ ಐಟಂಗಳ ಉದ್ಯಮಗಳಲ್ಲಿ ಎರಡು ದಶಕಗಳ ಅನುಭವವನ್ನು ಹೊಂದಿದೆ. ಸ್ಟಾರ್ ಟೈಲ್ಸ್‌ನ ಮಾಲಕ ರಿಯಾಝ್ ಪಿ.ಬಿ ಅವರ ನೇತೃತ್ವದಲ್ಲಿ 2009ರಲ್ಲಿ ಚೆರ್ಕಳದಲ್ಲಿ ಆರಂಭಗೊಂಡಿತು. ಬಳಿಕ ಚೆರ್ಕಳದಲ್ಲಿ 2017ರಲ್ಲಿ ಸ್ಟಾರ್ ಜನರಲ್ ಟ್ರೇಡಿಂಗ್, 2021ರಲ್ಲಿ ಫ್ರೀಝನ್ ಎಲ್‌ಎಲ್‌ಸಿ, 2023ರಲ್ಲಿ ಸೀತಾಂಗೋಳಿಯಲ್ಲಿ ಸ್ಟಾರ್ ಎಲ್‌ಎಲ್‌ಸಿ ಆರಂಭಗೊಂಡಿತ್ತು. ಇದೀಗ ಸುಳ್ಯದಲ್ಲಿಯೂ ತಮ್ಮ ಉದ್ಯಮ ಕ್ಷೇತ್ರವನ್ನು ವಿಸ್ತರಿಸಿದೆ.

ಫ್ಯಾಕ್ಟರಿಯಿಂದ ನೇರ ಗ್ರಾಹಕರಿಗೆ : ಫ್ಯಾಕ್ಟರಿಯಿಂದ ನೇರವಾಗಿ ಸ್ಟಾರ್ ಟೈಲ್ಸ್ ಮಳಿಗೆ ಗ್ರಾಹಕರಿಗೆ ನೀಡುವುದು ಇವರ ವಿಶೇಷತೆ. ಸ್ಟಾರ್ ಶೋರೂಮ್ ಸೂಚಿಸಿದ ವಿನ್ಯಾಸ, ಬಣ್ಣ, ಗುಣಮಟ್ಟದ ಟೈಲ್ಸ್ ಗಳನ್ನು ಫ್ಯಾಕ್ಟರಿಗಳು ತಯಾರಿಸಿ ನೀಡುತ್ತವೆ. ಆಯಾ ಪ್ರದೇಶಕ್ಕೆ ಸೂಕ್ತವಾದ ಮತ್ತು ಆರೋಗ್ಯಕ್ಕೆ ಹಾನಿಕರವಲ್ಲದ ಟೈಲ್ಸ್‌ಗಳನ್ನು ನಾವೇ ಸೂಚಿಸಿ ತಯಾರಿಸಿ ನಮ್ಮ ಮಳಿಗೆಗಳ ಮೂಲಕ ಮಾರಾಟ ಮಾಡಲಾಗುತ್ತದೆ. ಆದುದರಿಂದಲೇ ಹೋಲ್ ಸೇಲ್ ದರದಲ್ಲಿ ಮಾರಾಟ ಮಾಡಲು ಸಾಧ್ಯವಾಗುತ್ತದೆ. ಎಲ್ಲಾ ತರಹದ ಗ್ರಾಹಕರಿಗೂ ಅತ್ಯಂತ ಮಿತ ದರದಲ್ಲಿ ಟೈಲ್ಸ್‌ಗಳನ್ನು ಮಾರಾಟ ಮಾಡುತ್ತೇವೆ. ಗ್ರಾಹಕರ ಸಂತೃಪ್ತಿಯೇ ನಮಗೆ ಮುಖ್ಯ ಎಂದು ಅವರು ಹೇಳುತ್ತಾರೆ. ಒಟ್ಟಿನಲ್ಲಿ ಸುಳ್ಯದ ಜನತೆಯ ಕನಸಿನ ಮನೆ, ಕಟ್ಟಡಗಳ ನಿರ್ಮಾದ ಸಾಕಾರ ಇನ್ನು ಸ್ಟಾರ್ ಟೈಲ್ಸ್ ಮೂಲಕ ಸಾಕಾರವಾಗಲಿದೆ.
ಕಳೆದ ಎರಡು ದಶಕಗಳಿಂದ ಟೈಲ್ಸ್ ಉದ್ಯಮ ಕ್ಷೇತ್ರದಲ್ಲಿ ಛಾಪು ಮೂಡಿಸಿ ಕೇರಳದಲ್ಲಿ ಮನೆ ಮಾತಾಗಿರುವ ಕಾಸರಗೋಡು ಚೆರ್ಕಳ ಮೂಲದ ಉದ್ಯಮಿ ರಿಯಾಝ್ ಪಿ.ಬಿ. ಮಾಲಕತ್ವದ ಸ್ಟಾರ್ ಟೈಲ್ಸ್ ಉದ್ಯಮ ಸುಳ್ಯಕ್ಕೆ ತಮ್ಮ ಉದ್ಯಮ ಕ್ಷೇತ್ರವನ್ನು ವಿಸ್ತರಿಸಿದೆ. “ಸುಳ್ಯ, ಪುತ್ತೂರು, ಮಡಿಕೇರಿ ಸೇರಿದಂತೆ ದಕ್ಷಿಣ ಕನ್ನಡ ಹಾಗೂ ಕೊಡಗಿನ ಭಾಗಗಳಿಂದ ಹಲವಾರು ಮಂದಿ ಗ್ರಾಹಕರು ಮನೆ, ಕಟ್ಟಡಗಳ ನಿರ್ಮಾಣ ಸಂದರ್ಭದಲ್ಲಿ ಟೈಲ್ಸ್ ಖರೀದಿಗಾಗಿ ಕಾಸರಗೋಡಿಗೆ ತೆರಳುತ್ತಾರೆ. ಗ್ರಾಹಕರ ಬೇಡಿಕೆಯನ್ನು ಮನಗಂಡು ಇದೀಗ ಕರ್ನಾಟಕದ ಗ್ರಾಹಕರ ಅನುಕೂಲಕ್ಕಾಗಿ ಸುಳ್ಯದಲ್ಲಿ ಅತ್ಯಂತ ವಿಶಾಲ ಮಳಿಗೆಯನ್ನು ತೆರೆಯಲಾಗಿದೆ. ಗ್ರಾಹಕರ ಆಯ್ಕೆಯ ಟೈಲ್ಸ್ ಗಳನ್ನು ಕ್ಲಪ್ತ ಸಮಯದಲ್ಲಿ ಸರಬರಾಜು ಮಾಡಲಾಗುವುದು” ಎಂದು ಸ್ಟಾರ್ ಟೈಲ್ಸ್ ಮಾಲಕ ರಿಯಾಝ್ ಹೇಳಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading