ಪ್ರೊಫೆಸರ್ ಹುದ್ದೆಗೆ ಪದೋನ್ನತಿ ಪಡೆದ ಡಾ. ಪುರುಷೋತ್ತಮ.ಕೆ.ವಿ ಕರಂಗಲ್ಲು

ಸುಳ್ಯ ತಾಲೂಕು ದೇವಚಳ್ಳ ಗ್ರಾಮದ ಕರಂಗಲ್ಲುವಿನ ಡಾ. ಪುರುಷೋತ್ತಮ.ಕೆ.ವಿ ರವರು ಪ್ರೊಫೆಸರ್ ಆಗಿ ಪದೋನ್ನತಿ ಹೊಂದಿದ್ದು, ಬೆಂಗಳೂರಿನ ಕಾಲೇಜು ಶಿಕ್ಷಣ ಇಲಾಖೆ ಇವರಿಗೆ ಪದೋನ್ನತಿ ನೀಡಿರುತ್ತದೆ. ಪ್ರಸ್ತುತ ಕಳೆದ ಆರು ವರ್ಷಗಳಿಂದ ಕಿನ್ನಿಗೋಳಿಯ ಐಕಳ ಪೋಂಪೈ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಕಳೆದ 30 ವರ್ಷಗಳಿಂದ ಅರ್ಥಶಾಸ್ತ್ರ ಉಪನ್ಯಾಸಕರಾಗಿದ್ದು, ಇದೀಗ ಪ್ರೊಫೆಸರ್ ಹುದ್ದೆಗೆ ಪದೋನ್ನತಿ ಹೊಂದುವ ಮೂಲಕ ತಮ್ಮ ವೃತ್ತಿ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರಿದ್ದಾರೆ. ಜೊತೆಗೆ ಅರೆಭಾಷೆ ಅಕಾಡೆಮಿಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಇವರು ಅಕಾಡೆಮಿಯ ಮಾಜಿ ಸದಸ್ಯರಾಗಿದ್ದಾರೆ. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading