ಮರ್ಕಂಜ : ಯುವತಿ ನಾಪತ್ತೆ – ಪೋಲೀಸ್ ದೂರು

ಮರ್ಕಂಜ ಗ್ರಾಮದ ಬಳ್ಳಕಾನ ನಿವಾಸಿ ಐತಪ್ಪ ನಾಯ್ಕ ಎಂಬುವವರ ಪುತ್ರಿ ಕೀರ್ತನ(17 ವರ್ಷ) ಮನೆಯಿಂದ ನಾಪತ್ತೆಯಾಗಿದ್ದು ಇವರ ಮಾಹಿತಿ ತಿಳಿದು ಬಂದಲ್ಲಿ ಸ್ಥಳೀಯ ಪೊಲೀಸ್‌ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ. ಮೇ 05 ರಂದು ಬೆಳಿಗ್ಗೆ 10:30ಕ್ಕೆ ಮನೆಯಿಂದ ಮಂಗಳೂರಿಗೆ ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೋಗಿದ್ದು ಈವರೆಗೆ ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ. ಇದೀಗ ಯುವತಿ ಮನೆಯವರು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ. 
ಸುಮಾರು 5 ಅಡಿ ಎತ್ತರ ಗೋಧಿ ಮೈಬಣ್ಣ, ಕನ್ನಡ ಮತ್ತು ತುಳು ಭಾಷೆಯಲ್ಲಿ ಮಾತನಾಡಬಲ್ಲವರಾಗಿದ್ದು, ಕಾಣೆಯಾಗುವ ಸಂದರ್ಭದಲ್ಲಿ ಹಳದಿ ಬಣ್ಣದ ಟಾಪ್ ಮತ್ತು ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading