Ad Widget

ಯುವಜನ ಸಂಯುಕ್ತ ಮಂಡಳಿ ನೇತೃತ್ವದಲ್ಲಿ ನಡೆದ ರಾಜ್ಯ ಯುವ ಸಂಭ್ರಮದ ಲೆಕ್ಕಪತ್ರ ಮಂಡನೆ

ಸುಳ್ಯದ ಯುವಜನ ಸಂಯುಕ್ತ ಮಂಡಳಿ ನೇತೃತ್ವದಲ್ಲಿ ನಡೆದ ರಾಜ್ಯ ಯುವ ಸಂಭ್ರಮ ಸಮಾರಂಭ ಅದ್ದೂರಿಯಾಗಿ ನಡೆದಿದ್ದು, ಇದರ ಲೆಕ್ಕಪತ್ರ ಮಂಡನೆ ಫೆ.27ರಂದು ನಡೆಯಿತು. ಯುವಜನ ಸಂಯುಕ್ತ ಮಂಡಳಿ ಇದರ ಅಧ್ಯಕ್ಷರಾದ ಪವನ್ ಪಲ್ಲತ್ತಡ್ಕ ಇವರ ಅಧ್ಯಕ್ಷತೆಯಲ್ಲಿ ಪಂಜದ ಲಯನ್ಸ್‌ ಕ್ಲಬ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್, ಯುವಜನ ಸಂಯುಕ್ತ ಮಂಡಳಿಯ ಪೂರ್ವಾಧ್ಯಕ್ಷರಾದ ವಿಶ್ವನಾಥ ಜಾಕೆ, ಯುವ ಸಂಭ್ರಮ ಕಾರ್ಯಕ್ರಮ ಸಂಘಟನಾ ಸಮಿತಿಯ ಕಾರ್ಯದರ್ಶಿಯಾದ ವಿಜೇಶ್ ಹಿರಿಯಡ್ಕ, ಯುವಜನ ಸಂಯುಕ್ತ ಮಂಡಳಿಯ ಕಾರ್ಯದರ್ಶಿ ಮುರಳಿ ನಳಿಯಾರು, ಕೋಶಾಧಿಕಾರಿ ಲೋಹಿತ್‌ ಬಾಳಿಕಳ ಉಪಸ್ಥಿತರಿದ್ದರು.

. . . . . . . . .

ಯುವ ಸಂಭ್ರಮದಲ್ಲಿ ರೂ. 16,58,673 ಸಂಗ್ರಹವಾಗಿದ್ದು, ರೂ .13,19,159 ಖರ್ಚಾಗಿದ್ದು, ರೂ. 3,39,514 ಉಳಿಕೆಯಾಗಿದೆ. ಈ ಉಳಿಕೆ ಮೊತ್ತದಲ್ಲಿ ರೂ. 25 ಸಾವಿರವನ್ನು ಪಂಜ ದೇವಸ್ಥಾನಕ್ಕೆ ನೀಡಲಾಗಿದ್ದು, ಮುಂದೆ ಸಂಸ್ಥೆಯ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗಿದ್ದು, ಉಳಿಕೆ ಹಣ ವಿನಿಯೋಗಿಸಲು ನಿರ್ಧರಿಸಲಾಗಿದೆ ಎಂದು ಯು.ಸಂ.ಮಂಡಳಿ ಅಧ್ಯಕ್ಷ ಪವನ್ ಪಲ್ಲತ್ತಡ್ಕ ತಿಳಿಸಿದ್ದಾರೆ

. . . . . . .

ಕಾರ್ಯಕ್ರಮದ ವರದಿಯನ್ನು ವಿಜೇಶ್ ಹಿರಿಯಡ್ಕ, ಲೆಕ್ಕಪತ್ರ ಮಂಡನೆಯನ್ನು ಲೋಹಿತ್ ಬಾಳಿಕಲ ನೆರವೇರಿಸಿದರು. ಯುವ ಸಂಭ್ರಮ ಕಾರ್ಯಕ್ರಮದ ಎಲ್ಲಾ ವಿಭಾಗದ ಸಂಚಾಲಕರು ವಿವಿಧ ಯುವಕ ಮಂಡಲಗಳ ಪದಾಧಿಕಾರಿಗಳು,ಪಂಜ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

ಜನಾರ್ದನ ನಾಗತೀರ್ಥ ಸ್ವಾಗತಿಸಿ, ಮುರಳಿ ನಳಿಯಾರು ವಂದಿಸಿದರು. ಪ್ರವೀಣ್ ಕುಮಾರ್ ಜಯನಗರ ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading