Ad Widget

ಜಮೀಯ್ಯತುಲ್ ಫಲಾಹ್ ಸುಳ್ಯ ತಾಲೂಕು ಘಟಕದ ವತಿಯಿಂದ ರಂಜಾನ್ ಕಿಟ್ ವಿತರಣೆ

ಕರ್ನಾಟಕ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತ ದ.ಕ ಮತ್ತು ಉಡುಪಿ ಜಿಲ್ಲೆ ಜಮೀಯ್ಯತುಲ್ ಫಲಾಹ್ ಸಂಸ್ಥೆಯ ಸುಳ್ಯ ತಾಲೂಕು ಘಟಕದ ವತಿಯಿಂದ ಸುಳ್ಯ ತಾಲೂಕಿನ ಅರ್ಹ ಫಲಾನುಭವಿ 100 ಕುಟುಂಬಗಳಿಗೆ ದಿನ ನಿತ್ಯ ಉಪಯೋಗದ ರೂ.2 ಲಕ್ಷ ಮೌಲ್ಯದ ಆಹಾರ ಸಾಮಾಗ್ರಿಗಳ ಕಿಟ್ ಅನ್ನು ಗಾಂಧಿನಗರ ಸಂಸ್ಥೆ ಯ ಕಚೇರಿ ವಠಾರದಲ್ಲಿ ವಿತರಿಸಲಾಯಿತು. 

. . . . . . . . .

ಅಧ್ಯಕ್ಷತೆಯನ್ನು ಜಮೀ ಯ್ಯತುಲ್ ಫಲಾಹ್ ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಅಡ್ವೋಕೇಟ್ ಮೂಸ ಕುಂಞ ಪೈoಬಚ್ಚಾಲ್ ವಹಿಸಿದ್ದರು. ಸಮಾರಂಭವನ್ನು ಕಿಟ್ ವಿತರಿಸುವ ಮೂಲಕ ಉದ್ಘಾಟಿಸಿದ ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ.ಎಂ.ಮುಸ್ತಫ ಮಾತನಾಡಿ “ಪವಿತ್ರ ರಂಜಾನ್ ತಿಂಗಳು ಬಡವನ ಹಸಿವಿನ ಅರಿವಾಗಲು ಎಲ್ಲರಿಗೂ ಕಡ್ಡಾಯ ಉಪವಾಸ ವೃತವನ್ನು ಇಸ್ಲಾಂ ಕಲ್ಪಿಸಿದೆ, ದಾನ ಧರ್ಮಗಳ ಮೂಲಕ ದೇವರ ಸಂಪ್ರೀತಿ ಯನ್ನು ಗಳಿಸಲು ಸಾಧ್ಯ” ಎಂದು ಮುಸ್ತಫ ತಿಳಿಸಿದರು 

. . . . . . .

ಈ ಸಂದರ್ಭದಲ್ಲಿ ಪದಾದಿಕಾರಿಗಳಾದ ಇಬ್ರಾಹಿಂ ಹಾಜಿ ಕತ್ತರ್ ಮಂಡೆಕೋಲು, ಇಕ್ಬಾಲ್ ಎಲಿಮಲೆ, ಹಸೈನಾರ್ ವಳಲoಬೆ, ಶಾಫಿ ಕುತ್ತಾಮೊಟ್ಟೆ, ಅಬ್ದುಲ್ ಖಾದರ್ ಸoಗಮ್, ಹಸೈನಾರ್ ಹಾಜಿ ಗೊರಡ್ಕ, ಅಬೂಬಕ್ಕರ್ ಪಾರೆಕ್ಕಲ್, ಅಮೀರ್ ಕುಕ್ಕುಂಬಳ,ಎಸ್.ಪಿ ಅಬೂಬಕ್ಕರ್, ಡಾ. ಮಹಮ್ಮದ್ ಕುಂಭಕ್ಕೊಡು, ಇಬ್ರಾಹಿಂ ನೀರಬಿದಿರೆ ದುಗ್ಗಲಡ್ಕ, ಹಂಝ ದುಗ್ಗಲಡ್ಕ, ಎಸ್.ಕೆ. ಹನೀಫ್ ಕಲ್ಲುಗುಂಡಿ ಮೊದಲಾದವರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading