Ad Widget

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ; ವಿವಿಧ ಕೊಡುಗೆಗಳ ಲೋಕಾರ್ಪಣೆ ಹಾಗೂ ಸಾಧಕರಿಗೆ ಸನ್ಮಾನ

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಗೆ ಜಿಲ್ಲಾ ಗವರ್ನರ್ ರೊ.ರಾಮಕೃಷ್ಣ ಪಿ.ಕೆ.ಯವರು ಫೆ.24 ರಂದು ಭೇಟಿ ನೀಡಿದರು. ರಾತ್ರಿ ಬೆಳ್ಳಾರೆಯ ದೇವಿ ಹೈಟ್ಸ್ ಸಭಾಂಗಣದಲ್ಲಿ ಸಭಾಕಾರ್ಯಕ್ರಮ ನಡೆಯಿತು. ಬೆಳ್ಳಾರೆ ರೋಟರಿ ಕ್ಲಬ್ ಅಧ್ಯಕ್ಷ ವಿಶ್ವನಾಥ.ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕಾರ್ಯದರ್ಶಿ ವೀರನಾಥ್ ವರದಿ ಮಂಡಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಇಬ್ಬರಿಗೆ ಸನ್ಮಾನ ನಡೆಯಿತು. ಬೆಳ್ಳಾರೆ ಜ್ಞಾನದೀಪ ಶಿಕ್ಷಣ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ, ಪಿಗ್ಮಿ ಸಂಗ್ರಾಹಕರಾಗಿ ಸೇವೆ ಸಲ್ಲಿಸುತ್ತಿರುವ ವಸಂತ ಬೋರ್ಕರ್ ಬೆಳ್ಳಾರೆಯವರನ್ನು 

. . . . . . . . .

 ಶಾಲು ಹೊದಿಸಿ, ಫಲ ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಸನ್ಮಾನ ಪತ್ರ ಮತ್ತು ಕೊಡುಗೆ ನೀಡಿದವರ ಪರಿಚಯವನ್ನು ರೊ.ಗಣೇಶ್ ಕುಕ್ಕುದಡಿ, ರೊ.ಪ್ರಶಾಂತ ತಂಟೆಪ್ಪಾಡಿ, ರೊ.ನಟರಾಜ್ ದರ್ಖಾಸ್ತುರವರು ನೀಡಿದರು.

. . . . . . .

ಅಂಗನವಾಡಿ,ಶಾಲೆ ಹಾಗೂ ಅಯ್ಯಪ್ಪ ಮಂದಿರಕ್ಕೆ ಕೊಡುಗೆ : ಕಲ್ಲೋಣಿ ಅಂಗನವಾಡಿ ಕೇಂದ್ರಕ್ಕೆ

ಪುಸ್ತಕ ಇಡುವ ರ್ಯಾಕ್, ಉಜ್ರೋಳಿ ಅಯ್ಯಪ್ಪ ಮಂದಿರಕ್ಕೆ ಚಯರ್, ಇಂದ್ರಾಜೆ ಶಾಲೆಗೆ ಎಲ್.ಇ.ಡಿ ಟಿವಿಯನ್ನು ಕೊಡುಗೆಯಾಗಿ ನೀಡಲಾಯಿತು. ವೇದಿಕೆಯಲ್ಲಿ ಅಸಿಸ್ಟೆಂಟ್ ಗವರ್ನರ್ ಪ್ರಮೋದ್ ಕುಮಾರ್, ಝೋನಲ್ ಲೆಫ್ಟಿನೆಂಟ್ ಶಶಿಧರ ಬಿ.ಕೆ, ಬೆಳ್ಳಾರೆ ರೋಟರಿ ಕ್ಲಬ್ ಕಾರ್ಯದರ್ಶಿ ವೀರನಾಥ.ಸಿ ಕೂಪ್, ಚಂದ್ರಶೇಖರ ರೈ ಬಜನಿ ಉಪಸ್ಥಿತರಿದ್ದರು. ರೊ.ಸತ್ಯನಾರಾಯಣ ಕೆ.ಪ್ರಾರ್ಥಿಸಿ, ವಿಶ್ವನಾಥ ಕೆ. ಸ್ವಾಗತಿಸಿ, ಚಂದ್ರಶೇಖರ ರೈ ಬಜನಿ ವಂದಿಸಿದರು. ರೊ.ಪ್ರಭಾಕರ ಆಳ್ವ ಕಾರ್ಯಕ್ರಮ ನಿರೂಪಿಸಿದರು.

ವಿವಿಧ ಕೊಡುಗೆಗಳ ಲೋಕಾರ್ಪಣೆ : ಬೆಳಿಗ್ಗೆ ವಿವಿಧ ಕೊಡುಗೆಗಳ ಲೋಕಾರ್ಪಣೆ ನಡೆಯಿತು. ಅಯ್ಯನಕಟ್ಟೆಯ ಚೆಲುವಮ್ಮ ಎಂಬವರ ಮನೆ ರಿಪೇರಿ ಕಾರ್ಯ ನಡೆಸಿದ್ದು, ಅದರ ಹಸ್ತಾಂತರ ಕಾರ್ಯ ನಡೆಯಿತು.

ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ಟೀಲ್ ಬೆಂಚುಗಳ ಕೊಡುಗೆಯನ್ನು ರೊ.ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆ.ಯವರು ಆರೋಗ್ಯ ಕೇಂದ್ರದ ಡಾ.ಮಧುರವರಿಗೆ ಬೆಂಚುಗಳನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಹಲವಾರು ಜನ ಗಣ್ಯರು, ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಹಾಗೂ ರೋಟರಿ ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading