Ad Widget

“ಸಾಮರಸ್ಯ ಮತ್ತು ಒಗಟ್ಟು ಬೆಳೆಯಲು ಭಜನೆ ಅತ್ಯವಶ್ಯಕ” : ಠಾಣಾಧಿಕಾರಿ ಆಂಜನೇಯ ರೆಡ್ಡಿ ಅಭಿಮತ ; ಕುಕ್ಕೆ ಸುಬ್ರಹ್ಮಣ್ಯ : ತಾಲೂಕು ಭಜನೋತ್ಸವದ ಸಮಾರೋಪ ಸಮಾರಂಭ ಹಾಗೂ ಭಜಕರಿಗೆ ಸನ್ಮಾನ

ಸುಬ್ರಹ್ಮಣ್ಯ : “ಭಜನೆಯಿಂದ ಜ್ಞಾನದೊಂದಿಗೆ ಏಕಾಗ್ರತೆ ಮತ್ತು ಮಾನಸಿಕ ನೆಮ್ಮದಿ ಅದ್ವಿತೀಯವಾಗುತ್ತದೆ. ಸಾಮರಸ್ಯತೆ ಮತ್ತು ಒಗ್ಗಟ್ಟು ಬೆಳೆಯಲು ಭಜನೆಯಂತಹ ಕಾರ್ಯಕ್ರಮಗಳು ಅತ್ಯಗತ್ಯ. ನಮ್ಮ ದೇಶದ ಆಧ್ಯಾತ್ಮಿಕ ಪರಂಪರೆಗಳಾದ ಯೋಗ, ಧ್ಯಾನಗಳು ವಿಶ್ವ ಮಾನ್ಯತೆಯನ್ನು ಪಡೆದಿದೆ. ಪ್ರತಿ ಮನೆಮನೆಗಳಲ್ಲಿ ಭಜನಾ ಸಂಸ್ಕೃತಿ ಬೆಳೆಯಬೇಕು. ಭಾರತೀಯ ಸಂಸ್ಕೃತಿಯ ಪ್ರತೀಕವಾದ ಭಜನೆಯನ್ನು ಯುವ ಜನಾಂಗ ಉಳಿಸಿ ಬೆಳೆಸುವತ್ತ ಪ್ರಯತ್ನಿಸಬೇಕು” ಎಂದು ಸುಬ್ರಹ್ಮಣ್ಯ ಠಾಣಾಧಿಕಾರಿ ಆಂಜನೇಯ ರೆಡ್ಡಿ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ.) ಸುಳ್ಯ ತಾಲೂಕು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸುಬ್ರಹ್ಮಣ್ಯ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್, ತಾಲೂಕು ಭಜನೋತ್ಸವ ಸಮಿತಿ ಸುಬ್ರಹ್ಮಣ್ಯ ಇದರ ಸಹಯೋಗದಲ್ಲಿ ಫೆ.08 ಆದಿತ್ಯವಾರದಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದ ತಾಲೂಕು ಭಜನೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಅವರು ಮಾತನಾಡಿದರು.

ತಾಲೂಕು ಭಜನೋತ್ಸವ ಸಮಿತಿ ಗೌರವಾಧ್ಯಕ್ಷ ಗಿರಿಧರ ಸ್ಕಂಧ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಭಜನಾ ಸಮಿತಿ ಅಧ್ಯಕ್ಷ
ಡಾ. ರವಿ ಕಕ್ಕೆಪದವು, ಯೋಜನೆಯ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ, ಧಾರ್ಮಿಕ ಮುಖಂಡ ವೆಂಕಟ್ ವಳಲಂಬೆ, ಸುಳ್ಯ ತಾಲೂಕು ಒಕ್ಕೂಟದ ಅಧ್ಯಕ್ಷ ಸುರೇಶ್ ಕಣೆಮರಡ್ಕ, ಭಜನಾ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಬಾಲಕೃಷ್ಣ ಪುತ್ಯ, ತಾಲೂಕು ಗೌರವಾಧ್ಯಕ್ಷ ಯತೀಶ್ ರೈ ದುಗ್ಗಲಡ್ಕ, ತಾಲೂಕು ಅಧ್ಯಕ್ಷ ಸೋಮಶೇಖರ್ ಪೈಕ, ವಲಯಾಧ್ಯಕ್ಷ ಚಂದ್ರಶೇಖರ ಕೊಂದಾಳ, ಕಾರ್ಯದರ್ಶಿ ಸತೀಶ್ ಟಿ.ಎನ್ ಕಲ್ಮಕಾರು, ಭಜನಾ ಪರಿಷತ್ ಸಮನ್ವಯಾಧಿಕಾರಿ ಸಂತೋಷ್ ಅಳಿಯೂರು, ಜನಜಾಗೃತಿ ವೇದಿಕೆ ವಲಯಾಧ್ಯಕ್ಷ ಮಾಧವ ಚಾಂತಾಳ, ಮಾಜಿ ಅಧ್ಯಕ್ಷರಾದ ರಾಧಾಕೃಷ್ಣ ಬೊಳ್ಳೂರು, ವಿಮಲಾ ರಂಗಯ್ಯ, ಒಕ್ಕೂಟದ ಸುಬ್ರಹ್ಮಣ್ಯ ವಲಯಾಧ್ಯಕ್ಷ ತೀರ್ಥರಾಮ ದೋಣಿಪಳ್ಳ, ಅನುಗ್ರಹ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಗಣೇಶ್ ಪ್ರಸಾದ್.ಎನ್ ಮುಖ್ಯ ಅತಿಥಿಗಳಾಗಿದ್ದರು.
ತಾಲೂಕು ಯೋಜನಾಧಿಕಾರಿ ಮಾಧವ ಗೌಡ, ಭಜನೋತ್ಸವ ಸಮಿತಿ ಉಪಾಧ್ಯಕ್ಷರಾದ ಗಿರೀಶ್ ಆಚಾರ್ಯ ಪೈಲಾಜೆ, ಚಂದ್ರಶೇಖರ ಬಸವನಮೂಲೆ, ಕಾರ್ಯದರ್ಶಿ ಬಾಲಕೃಷ್ಣ.ಕೆ ವೇದಿಕೆಯಲ್ಲಿದ್ದರು.

ಹಿರಿಯ ಭಜಕರಿಗೆ ಗೌರವಾರ್ಪಣೆ : ಕಾರ್ಯಕ್ರಮದಲ್ಲಿ ಹಿರಿಯ ಭಜಕಾರದ ಎ.ವೆಂಕಟ್ರಾಜ್ ಸುಬ್ರಹ್ಮಣ್ಯ, ಕಲಾವಿದ ಕೆ.ಯಜ್ಞೇಶ್ ಆಚಾರ್, ಹೊನ್ನಮ್ಮ ಹರಿಹರ, ದೇವಕಿ ಬಾಳುಗೋಡು, ನಾರಾಯಣ ಕೊಲ್ಲಮೊಗ್ರ, ಬಾಲಕೃಷ್ಣ ರೈ ಕಲ್ಮಕಾರು ಅವರನ್ನು ಸನ್ಮಾನಿಸಲಾಯಿತು.
ಬಳಿಕ ಭಜನಾ ತಂಡಗಳನ್ನು, ಕುಣಿತ ಭಜನೆ ಮತ್ತು ಭಜನೆ ನೆರವೇರಿಸಿದ ತಂಡಗಳನ್ನು, ಶೌರ್ಯ ವಿಪತ್ತು ಘಟಕವನ್ನು, ಕಾರ್ಯಕ್ರಮದ ಯಶಸ್ಸಿಗೆ ದುಡಿದವರನ್ನು ಗೌರವಿಸಲಾಯಿತು.

ಕಾರ್ಯಕ್ರಮದ ರುವಾರಿ ಯೋಜನಾಧಿಕಾರಿ ಮಾಧವ ಗೌಡ, ಭಜನೋತ್ಸವ ಸಮಿತಿ ಅಧ್ಯಕ್ಷ ಡಾ.ರವಿ ಕಕ್ಕೆಪದವು ಮತ್ತು ಗೌರವಾಧ್ಯಕ್ಷ ಗಿರಿಧರ ಸ್ಕಂಧ ಅವರನ್ನು ಸನ್ಮಾನಿಸಲಾಯಿತು.

ಗೌರವ ಸಲಹೆಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading