Ad Widget

ಹರಿಹರ ಪಳ್ಳತ್ತಡ್ಕ : ಬಾಳುಗೋಡಿನಲ್ಲಿ ನಡೆದ “ಬೃಹತ್ ಹಿಂದೂ ಸಂಗಮ ಹಾಗೂ ಶೋಭಾಯಾತ್ರೆ” – “ದೇಶದ ಉಳಿವು ಯುವಕರು ಮತ್ತು ಮಾತೆಯರ ಕೈಯಲ್ಲಿದೆ” : ಒಡಿಯೂರು ಶ್ರೀ ಗುರುದೇವಾನಂದ ಶ್ರೀಗಳು

ಹರಿಹರ ಪಳ್ಳತ್ತಡ್ಕ ಗ್ರಾಮದ ಬಾಳುಗೋಡು ಬೆಟ್ಟುಮಕ್ಕಿ ಮುಚ್ಚಾರ ದಿ.ತಮ್ಮಯ್ಯ ಗೌಡ ಕೂಜುಗೋಡು ಕಟ್ಟೆಮನೆ ಕ್ರೀಡಾಂಗಣದಲ್ಲಿ ಫೆ.02ರಂದು ಹಿಂದೂ ಸಂಗಮ ಆಯೋಜನಾ ಸಮಿತಿ ಸುಳ್ಯ ಹಾಗೂ ಹಿಂದೂ ಸಂಗಮ ಹರಿಹರ ಮಂಡಲ ಇದರ ವತಿಯಿಂದ ಹಿಂದೂ ಸಮಾಜದ ಏಕತೆ, ಸಾಮರಸ್ಯ, ಸಾಮಾಜಿಕ ಪರಿವರ್ತನೆ, ಧಾರ್ಮಿಕ ಮತ್ತು ರಾಷ್ಟ್ರೀಯ ಪ್ರಜ್ಞೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ “ಬೃಹತ್ ಹಿಂದೂ ಸಂಗಮ ಹಾಗೂ ಶೋಭಾಯಾತ್ರೆ” ನಡೆಯಿತು.
ಕಾರ್ಯಕ್ರಮದ ಆರಂಭದಲ್ಲಿ ಕಲ್ಮಕಾರು, ಕೊಲ್ಲಮೊಗ್ರು ಹಾಗೂ ಹರಿಹರ ಪಲ್ಲತ್ತಡ್ಕದಿಂದ ಬೈಕ್‌ ರ್ಯಾಲಿಯ ಮುಖಾಂತರ ಶೋಭಾಯಾತ್ರೆ ಹೊರಟು ಬಾಳುಗೋಡಿಗೆ ಬಂದು ಬಾಳುಗೋಡು ಅಂಚೆ ಕಛೇರಿ ಬಳಿ ಸೇರಿ ಅಲ್ಲಿಂದ ಶೋಭಾಯಾತ್ರೆಯಲ್ಲಿ ಬರಲಾಯಿತು.

ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಗುರುದೇವಾನಂದ ಶ್ರೀಗಳು “ಭಾರತ ದೇಶದಲ್ಲಿ ಭಾರತೀಯತೆ ಇದೆ, ಅದು ಸನಾತನ ಧರ್ಮದಲ್ಲಿದೆ. ಹಿಂದೂ ಧರ್ಮದ ಆಳ, ಅರಿವಿಲ್ಲದ ನಮ್ಮಲ್ಲಿ ಪರಿವರ್ತನೆ ಆಗದಿದ್ದರೆ ಸಾಧ್ಯವಿಲ್ಲ. ಧರ್ಮಕ್ಕೆ ಅಳಿವಿಲ್ಲ ಆದರೆ ಪರಿವರ್ತನೆ ಅವಶ್ಯ. ಸಮಾಜದಲ್ಲಿ ಅಸ್ಪೃಶ್ಯತೆ ನಾಶವಾಗಬೇಕು. ನಾವೆಲ್ಲರೂ ಹಿಂದೂ ಸಂರಕ್ಷಣೆಯ ಸೇನಾನಿಗಳಾಗಬೇಕು. ಸಂಘರ್ಷಕ್ಕೆ ಒಂದೇ ಉತ್ತರ ಅದು ಸಂಘಟನೆ. ದೇಶದ ಉಳಿವು ಯುವಕರು ಮತ್ತು ಮಾತೆಯರ ಕೈಯಲ್ಲಿದೆ. ಎಲ್ಲಾ ಯುಗದಲ್ಲಿ ರಾಕ್ಷಸ ಗುಣದವರು ಹಾಗೂ ದೇವ ಗುಣದವರು ಬೇರೆ ಬೇರೆಯಾಗಿದ್ದರು. ಆದರೆ ಈ ಕಲಿಯುಗದಲ್ಲಿ ರಾಕ್ಷಸ ಗುಣ ಹಾಗೂ ದೇವ ಗುಣ ಮನುಷ್ಯ ಒಬ್ಬನಲ್ಲೇ ಮಿಳಿತವಾಗಿದೆ. ಮನೆಯಲ್ಲಿ ದೇವರ ಕೋಣೆ ಹೇಗಿದೆಯೋ ಹಾಗೆ ಪ್ರಪಂಚಕ್ಕೆ ಭಾರತ ದೇಶ ಪವಿತ್ರ ದೇಶ ಎನ್ನುವ ಭಾವನೆ ಬರುವಂತಾಗಲಿ” ಎಂದು ನುಡಿದರು.

ದಿಕ್ಕೂಚಿ ಭಾಷಣ ಮಾಡಿದ ಅಖಿಲಾ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಪ್ರಮುಖ್ ಹಾಗೂ ಉಪನ್ಯಾಸಕರಾದ ಕೇಶವ ಬಂಗೇರ ಅವರು “ನಮ್ಮ ಕಾರ್ಯಕ್ರಮ ಇರುವುದು ಯಾರ ವಿರೋಧಕ್ಕಲ್ಲ, ನಾವೆಲ್ಲ ಒಂದು ಸೇರಬೇಕು ಎಂಬ ಒಂದು ಸಂಕಲ್ಪಕ್ಕಾಗಿ ನಾವು ಸೇರಬೇಕು. ನೂರು ವರ್ಷಗಳ ಹಿಂದೆ ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಹೆಡ್ಗೆವಾರ್ ರವರ ಸಂಕಲ್ಪ ಹಿಂದೂಗಳ ಒಂದುಗೂಡಿಸುವ ಸಂಕಲ್ಪ ಬಂದದ್ದು ಹಾಗೇ ಹುಟ್ಟಿಕೊಂಡ ಸಂಘ ನಮ್ಮದು. ಹಿಂದುತ್ವ ಅಂದರೆ ಭಾರತೀಯರ ವಿಶ್ವ ದೃಷ್ಟಿ, ಜೀವನ ದರ್ಶನ, ಭಾರತೀಯರ ನಡವಳಿಕೆ ಆಗಿದೆ. ಹಿಂದುತ್ವದಿಂದ ಭಾರತವನ್ನು ಬಿಡಿಸಿ ನೋಡಲು ಸಾಧ್ಯವಿಲ್ಲ. ಧರ್ಮ ಅಂದರೆ ಅನುಶಾಸನ, ಕರ್ತವ್ಯ, ಪಿತೃಧರ್ಮ, ಮಾತೃ ಧರ್ಮ, ಆಚಾರ್ಯ ಧರ್ಮ, ರಾಜ ಧರ್ಮ ಎಲ್ಲವೂ ಹಿಂದೂ ಸಮಾಜ ಸಮ್ಮಿಳಿತವಾಗಿದೆ. ಮಂಗಳೂರು ಭಾವುಟ ಗುಡ್ಡೆಯಲ್ಲಿ ಈ ಭಾಗದ ಹೋರಾಟಗಾರರು 13 ದಿನಗಳ ಚಕ್ರಾಧಿಪತ್ಯ ಸಾರಿದರೋ ಅದನ್ನು ನೆನಪಿಸಿಕೊಳ್ಳಿ. ನಮಗೂ ಕೆಚ್ಚೆದೆ ಬೇಕಾಗಿದೆ. ಬಾಳುಗೋಡು ವೇದಿಕೆಯಲ್ಲಿ ನಿಂತು ಹೇಳುತ್ತೇನೆ. ನನ್ನೂರಿನ ಕಾಲೋನಿಗೆ ಹೋಗಿ ಅವರೊಂದಿಗೆ ನಿವಾಗಲು ಸಾಧ್ಯವಿದ್ದರೆ ಅದು ಹಿಂದೂ ಸಂಕಲ್ಪವಾಗಲಿ. ಸಾಲು ಮರದ ತಿಮ್ಮಕ್ಕ ನಮಗೆ ಆದರ್ಶ ಆಗಲು ಸಾಧ್ಯವಿದ್ದಲಿ ಪಾಲಿಸಿ. ಅದನ್ನು ನಮ್ಮ ಶಿವಾಜಿ ಬೈಕ್ ಡೂಮ್, ಹಚ್ಚೆ ಬಿಟ್ಟು ಹೃದಯದಲ್ಲಿ ಶಿವಾಜಿ ಇರಲಿ ಹಿಂದೂ ಸಂಗಮದ ಮುಖಾಂತರ ನನ್ನೊಳಗಿನ ಜಾತಿಯತೇ ಬಿಡಬಹುದೆ” ಎಂದು ಅವರು ನುಡಿದರು.

ಸಭೆಯ ಅಧ್ಯಕ್ಷತೆಯನ್ನು ಬಿ.ಎಸ್.ಎನ್.ಎಲ್ ಮೈಸೂರು ಇದರ ನಿವೃತ್ತ ವಿಭಾಗೀಯ ಅಭಿಯಂತರಾದ ದೇವದಾಸ ಕಜೆಗದ್ದೆ ಬಾಳುಗೋಡು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯೋಪಾಧ್ಯಾಯರಾದ ಶಿವರಾಮ ಕುಂಞೇಟಿ, ನಿವೃತ್ತ ಉಪನ್ಯಾಸಕರಾದ ರಾಮಚಂದ್ರ ಗೌಡ ಪಳಂಗಾಯ, ಭೂ ಸೇನಾ ಯೋಧರಾದ ಯಶವಂತ ನಿಡುಬೆ-ಕಲ್ಮಕಾರು, ಶ್ರೀಮತಿ ದಮಯಂತಿ ಸುಧೀರ್ ಕಟ್ಟೆಮನೆ, ರಾಮಚಂದ್ರಪುರ ಮಠ ಮಾತೃ ಸಮಿತಿ ಮುಳ್ಳೇರಿಯ ಮಂಡಲ ಅಧ್ಯಕ್ಷರಾದ ಶ್ರೀಮತಿ ದೇವಕಿ ಭಟ್ ಪನ್ನೆ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಉಷಾ ಪ್ರಭಾಕರ ಕಿರಿಭಾಗ, ಪ್ರಗತಿಪರ ಕೃಷಿಕರಾದ ಸೀತಾರಾಮ ಗೌಡ ಬಿಳಿಮಲೆ, ನಾಟಿ ವೈದ್ಯರು ಮತ್ತು ಕೃಷಿ ಸಲಕರಣ ತಯಾರಕರು ಗಣಪತಿ ಭಟ್ ಬಿ ಎಸ್, ಪ್ರಶಸ್ತಿ ವಿಜೇತ ದೈವ ನರ್ತಕ ಬೊಳಿಯ ಬೆಂಡೋಡಿ, ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರಾದ ಲೋಕೇಶ್ ಮುಂಡೋಕಜೆ ಉಪಸ್ಥಿತರಿದ್ದರು.

ಅಜೇಯ ಪೊಯ್ಯೆಮಜಲು ಶಂಖನಾದಗೈದರು. ವಿನಯ್ ವೈಯ್ಯಕ್ತಿಕ ಗೀತೆ ಹಾಡಿದರು, ಚಂದ್ರಹಾಸ ಶಿವಾಲ ಸ್ವಾಗತಿಸಿದರು. ಸೋಮಶೇಖರ್ ಕಟ್ಟೆಮನೆ ಪ್ರಸ್ತಾವಿಕ ಮಾತುಗಳನ್ನಾಡಿದರು. ಸತೀಶ್ ಟಿ.ಎನ್ ವಂದಿಸಿದರು, ಲೊಹಿತ್‌ ಮುಚ್ಚಾರ ಕಾರ್ಯಕ್ರಮ ನಿರೂಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading