Ad Widget

ಮಾವಿನಕಟ್ಟೆ : ಬೆಂಕಿಯಿಂದ ಅರಣ್ಯ ಸಂಪತ್ತು, ವನ್ಯಜೀವಿಗಳನ್ನು ರಕ್ಷಿಸುವ ಬಗ್ಗೆ ಜನಜಾಗೃತಿ

ಅರಣ್ಯ ಸಂಪತ್ತು ಮತ್ತು ವನ್ಯ ಜೀವಿಗಳನ್ನು ಬೆಂಕಿಯಿಂದ ರಕ್ಷಿಸುವ ಬಗ್ಗೆ ಸುಬ್ರಹ್ಮಣ್ಯ ಉಪ ವಿಭಾಗ ಮಟ್ಟದ ಒಂದು ದಿನದ ಜನಜಾಗೃತಿ ಕಾರ್ಯಕ್ರಮ ಹಾಗೂ ಮಾಹಿತಿ ಕಾರ್ಯಾಗಾರವು ಈ ದಿನ ಮಾವಿನಕಟ್ಟೆ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಾಗಾರದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಪೈ ರವರು ವಹಿಸಿ ಅರಣ್ಯ ಬೆಂಕಿಯ ಸಂಧರ್ಭ ಗ್ರಾಮಸ್ಥರ ಸಹಕಾರ ಮತ್ತು ಸಿಬ್ಬಂದಿಗಳ ಕೆಲಸದ ಕುರಿತು ಮಾರ್ಗದರ್ಶನ ನೀಡಿದರು. ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ವಿಮಲ್ ಬಾಬು ರವರು ಕಾರ್ಯಾಗಾರದ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು.

. . . . . . . . .

ಅರಣ್ಯ ಬೆಂಕಿ ನಿರ್ವಹಣೆಯ ಕುರಿತು ಸುಳ್ಯದ ಅಗ್ನಿಶಾಮಕ ಠಾಣಾಧಿಕಾರಿಗಳಾದ ಶ್ರೀ ಕಿರಣ್ ಕುಮಾರ್ ಮತ್ತು ಸಿಬ್ಬಂದಿಗಳು ಮಾಹಿತಿಯನ್ನು ನೀಡಿದರು. ಅಗ್ನಿ ಅವಘಡದಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆಗಳಿಗೆ ಮಾಡಬೇಕಾದ ಹಾಗೂ ವಿಷಕಾರಿ ಹಾವುಗಳ ಕಡಿತದ ಸಂಧರ್ಭ ಮಾಡಬೇಕಾದ ಅಗತ್ಯ ಪ್ರಥಮ ಚಿಕಿಸ್ಥೆಯ ಮಾಹಿತಿಯನ್ನು ಸಂಪನ್ಮೂಲ ವ್ಯಕ್ತಿಗಳಾದ ಕೆವಿಜಿ ಆಯುರ್ವೇದ ಕಾಲೇಜಿನ ವೈದ್ಯರಾದ ಶ್ರೀ ಡಾ|ಅವಿನಾಶ್ ರವರು ನೀಡಿದರು. ಜೀವವೈವಿಧ್ಯತೆಗೆ ಹಾಗೂ ವನ್ಯ ಜೀವಿಗಳ ಸಂರಕ್ಷಣೆಗೆ ಬೆಂಕಿಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿಯನ್ನು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಭುವನೇಶ್ವರ ಕೈಕಂಬ ರವರು ಮಾಹಿತಿಯನ್ನು ನೀಡಿದರು.
ಸುಳ್ಯ ವಲಯದ ವಲಯ ಅರಣ್ಯಾಧಿಕಾರಿ ಮಂಜುನಾಥ ರವರು ಸಿಬ್ಬಂದಿಗಳಿಗೆ ಅರಣ್ಯ ಬೆಂಕಿಯ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಹಾಗೂ ನಿಯಂತ್ರಣದ ಕ್ರಮಗಳ ಬಗ್ಗೆ ಇಲಾಖಾ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಹಾಜರಿದ್ದ ಪರೀಕ್ಷಾರ್ಥ ಐ.ಎಫ್.ಎಸ್ ಅಧಿಕಾರಿಗಳಾದ  ಸಂಕೇತ್ ಅದಾವ್ ರವರ ಹಾಗೂ ಪಂಜ ವಲಯದ ವಲಯ ಅರಣ್ಯಾಧಿಕಾರಿಗಳಾದ ಶ್ರೀಮತಿ ಸಂಧ್ಯಾ ರವರು ಸಿಬ್ಬಂದಿಗಳಿಗೆ ಅಗತ್ಯ ಸಲಹೆ, ಸೂಚನೆಯನ್ನು ನೀಡಿದರು. ಕಾರ್ಯಕ್ರಮದ ವೇದಿಕೆಯಲ್ಲಿದ್ದ ಗುಡ್ಡೆ – ದೇವಚಳ್ಳ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷರಾದ  ಇಂದಿರೇಶ್ ಗುಡ್ಡೆ ರವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಾಗಾರದ ಕೊನೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ಅಗ್ನಿಶಾಮಕ ವಿಧಾನದ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.
ಸುಬ್ರಹ್ಮಣ್ಯ ವಲಯದ ಉಪ ವಲಯ ಅರಣ್ಯಾಧಿಕಾರಿ ಅಪೂರ್ವ ಅಚ್ರಪ್ಪಾಡಿ ಕಾರ್ಯಾಗಾರವನ್ನು ನಿರ್ವಹಿಸಿದರು ಹಾಗೂ ಪಂಜ ವಲಯದ ಉಪ ವಲಯ ಅರಣ್ಯಾಧಿಕಾರಿ ಪ್ರಕಾಶ್ ಅಗಸಿಮನಿ ಸ್ವಾಗತಿಸಿ , ಹರೀಶ್ ವಿ ಸವಣೂರ ರವರು ವಂದಿಸಿದರು. ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಉಪ ವಿಭಾಗ ಮಟ್ಟದ ಎಲ್ಲಾ ಸಿಬ್ಬಂದಿಗಳು ಹಾಗೂ ಮಾವಿನಕಟ್ಟೆ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading