Ad Widget

ಸುಬ್ರಹ್ಮಣ್ಯ : ಜ.25 ರಿಂದ 28 ರವರೆಗೆ ಶ್ರೀ ಮಠದಲ್ಲಿ ಗುರುಕುಲ ವಿದ್ಯಾರ್ಥಿಗಳ ಘಟಿಕೋತ್ಸವ – ವಿಶ್ವ ಸಂಭ್ರಮ ಕಾರ್ಯಕ್ರಮ

ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರ ಗುರುಗಳಾದ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಬೆಂಗಳೂರಿನಲ್ಲಿ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಗುರುಕುಲವನ್ನು ಸ್ಥಾಪಿಸಿದ್ದಾರೆ.
ಈ ಗುರುಕುಲದಲ್ಲಿ ಸಹಸ್ರಾರುಚ ವಿದ್ಯಾರ್ಥಿಗಳು ಶಾಸ್ತ್ರವನ್ನು ಅಭ್ಯಸಿಸುತ್ತಿದ್ದಾರೆ.
ಇಲ್ಲಿ 12 ವರ್ಷ ಅಧ್ಯಾಯನ ಪೂರ್ತಿಗೊಳಿಸಿದ ವಿದ್ಯಾಥಿಗಳಿಗೆ ಘಟಿಕೋತ್ಸವವನ್ನು ಬೇರೆ ಬೇರೆ ಕ್ಷೇತ್ರಗಳಲ್ಲಿ ನಡೆಸುತ್ತಾ ಬರಲಾಗಿದೆ.
ಈ ವರ್ಷ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸುಬ್ರಹ್ಮಣ್ಯ ಮಠದ ಆಶ್ರಯದಲ್ಲಿ ಘಟಿಕೋತ್ಸವ ಜ.25ರಿಂದ 28ರ ತನಕ ನಡೆಯಲಿದೆ.
ವಿವಿಧ ವೈದಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಸಮ್ಮಿಲನದಲ್ಲಿ ವಿಶ್ವ ಸಂಭ್ರಮ ಎಂಬ ಹೆಸರಿನಲ್ಲಿ ನಡೆಯಲಿದೆ ಎಂದು ಪ್ರಧಾನ ವ್ಯವಸ್ಥಾಪಕ ಡಾ.ಸಗ್ರಿ ಆನಂದ ತೀರ್ಥ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜ.25ರಂದು ಪ್ರಥಮ ದಿನ ಸಂಕೀರ್ತನೋತ್ಸವ ನಡೆಯಲಿದೆ. ಈ ದಿನ ಬೆಳಗಿನಿಂದ ಸಂಜೆ ತನಕ  ಭಜನಾ ಕಮ್ಮಟ ನಡೆಯಲಿದೆ. ಭಜನೆ, ಕುಣಿತ ಭಜನೆ, ಹರಿದಾಸ ಸಾಹಿತ್ಯದ ಬಗ್ಗೆ ಗೋಷ್ಠಿ, ತರಬೇತಿ, ಕೀರ್ತನಾಕಾರ ಮೈಸೂರು ರಾಮಚಂದ್ರಾಚಾರ್ಯರಿಂದ ಭಜನೆ ಮತ್ತು ಭಜನಾ ತರಬೇತಿ ನೆರವೇರಲಿದೆ.
ಸಂಜೆ ಅಗ್ರಹಾರದ ಅನಿರುದ್ಧ ತೀರ್ಥರ ಬೃಂದಾವನ ದಿಂದ ಹರಿ ಸಂಕೀರ್ತನೆಯೊಂದಿಗೆ ಪಾದಯಾತ್ರೆ, ಬಳಿಕ ಕಾಶಿಕಟ್ಟೆಯಿಂದ ಬೃಹತ್ ಶೋಭಾಯಾತ್ರೆ ನಡೆಯಲಿದೆ ಎಂದು ವಿದ್ವಾಂಸ ಕಿರಣ್ ಆಚಾರ್ಯ ತಿಳಿಸಿದರು.

ಬಳಿಕ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ಸ್ವಾಮೀಜಿ, ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಧರ್ಮ ಸಭೆ ನಡೆಯಲಿದೆ. ಶಾರದಾ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಎಂ.ಬಿ.ಪುರಾಣಿಕ್,
ಕುಕ್ಕೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್.ಎಸ್.ಇಂಜಾಡಿ,
ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಪೇಜಾವರ ಮಠದ ಸುಬ್ರಹ್ಮಣ್ಯ ಭಟ್ ಮುಖ್ಯ ಅತಿಥಿಗಳಾಗಿದ್ದಾರೆ‌.

ಜ.26ರಂದು ರಾಷ್ಟ್ರೀಯ ವಿದ್ವತ್ ಸಮ್ಮೇಳನ ನಡೆಯಲಿದೆ.
ಸಮ್ಮೇಳನವನ್ನು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿಗಳು ಉದ್ಘಾಟಿಸಿ ಅಧ್ಯಕ್ಷತೆ ವಹಿಸಲಿದ್ದಾರೆ.
ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳು, ಭೀಮನಕಟ್ಟೆಯ ಶ್ರೀ ರಘವರೇಂದ್ರ ತೀರ್ಥ ಸ್ವಾಮೀಜಿಗಳು ಉಪಸ್ಥಿತರಿರುತ್ತಾರೆ.
ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಂಶುಪಾಲ ಎಚ್.ಸತ್ಯನಾರಾಯಣ ಆಚಾರ್ಯ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ವಿದ್ವಾಂಸ ಪ್ರೊ.ನಾಗರಾಜ್ ಪಾತೂರಿ ಮುಖ್ಯ ಅತಿಥಿಗಳಾಗಿದ್ದಾರೆ.
ಬೆಳಗ್ಗೆ 10:00 ರಿಂದ ಶ್ರೀ ಮಧ್ವಸಿದ್ಧಾಂತದ ಅಸಾಧಾರಣ ಕೊಡುಗೆಗಳು ಎಂಬ ವಿಷಯದ ಬಗ್ಗೆ ಸಮ್ಮೇಳನ ನಡೆಯಲಿದೆ.
ಡಾ. ಮಾಹುಲಿ ವಿದ್ಯಾಸಿಂಹಾಚಾರ್ಯ ಅಧ್ಯಕ್ಷತೆ ವಹಿಸಲಿದ್ದಾರೆ.
ಮಧ್ವಸಿದ್ಧಾಂತದಲ್ಲಿ ತಂತ್ರಶಾಸ್ತ್ರ ವಿಷಯದ ಬಗ್ಗೆ   ಅವಧಾನಿ ಸುಬ್ರಹ್ಮಣ್ಯ ಭಟ್ ಗುಂಡಿಬೈಲು,
ಮಧ್ವಸಿದ್ಧಾಂತದಲ್ಲಿ ಅಷ್ಟಾಂಗಯೋಗದ ನಿರೂಪಣೆ ಡಾ.ವಂಶೀ ಕೃಷ್ಣ ಆಚಾರ್ಯ, ಮಧ್ವಸಿದ್ಧಾಂತದಲ್ಲಿ ‘ಉಪಾಸನೆ’ ವಿದ್ವಾನ್ ಕಿರಣ ಆಚಾರ್ಯ ಉಪನ್ಯಾಸ ನೀಡಲಿದ್ದಾರೆ.
ಮಧ್ಯಾಹ್ನ 2:00 ರಿಂದ 4:45
ಸಮ್ಮೇಳನ-2 ನಾಗಾರಾಧನೆ ವಿಷಯದಲ್ಲಿ ನಡೆಯಲಿದೆ.
ಅಧ್ಯಕ್ಷತೆಯನ್ನು ಡಾ. ಸತ್ಯನಾರಾಯಣ ಆಚಾರ್ಯ ವಹಿಸಲಿದ್ದಾರೆ.
ಸರ್ಪಸಂಸ್ಕಾರ ವಿದ್ವಾನ್ ಮಹೇಂದ್ರ ಸೋಮಯಾಜಿ,
ಆಶ್ಲೇಷಾ ಬಲಿ – ವಿದ್ವಾನ್ ಕೃಷ್ಣಕುಮಾರ ಆಚಾರ್ಯ,
ಸುಬ್ರಹ್ಮಣ್ಯ ಹಾಗೂ ನಾಗ – ವಿದ್ವಾನ್ ರವೀಂದ್ರ ಭಟ್ ಹೆರ್ಗ ಉಪನ್ಯಾಸ ನೀಡಲಿದ್ದಾರೆ.
ಬಳಿಕ ಶ್ರೀಮನ್ನಾಯಸುಧಾಮಂಗಳೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಸುಧಾ ವಿದ್ಯಾರ್ಥಿಗಳಿಂದ ಶ್ರೀಮನ್ನಾಯಸುಧಾ
ಅನುವಾದ ಹಾಗೂ ಶ್ರೀ ವೇದವ್ಯಾಸ ಸಂಶೋಧನ ಕೇಂದ್ರದ ವಿದ್ಯಾರ್ಥಿಗಳಿಂದ ಶಾಸ್ತಾನುವಾದ ನಡೆಯಲಿದೆ. ನಂತರ
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದ ಉಪಸ್ಥಿತಿಯಲ್ಲಿ ಧರ್ಮ ಸಭೆ ನಡೆಯಲಿದೆ.
ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು, ಶ್ರೀ ರಘುವರೇಂದ್ರ ತೀರ್ಥ ಶ್ರೀಪಾದರು ಉಪಸ್ಥಿತರಿರಲಿದ್ದಾರೆ.

ಉಪಕುಲಪತಿಗಳು ದೆಹಲಿಯ  ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ, ಶಾಸಕಿ ಭಾಗೀರಥಿ ಮುರುಳ್ಯ, ಅಂಕಣಕಾರ
ಪ್ರೊ.ಗುರುರಾಜ ಖರ್ಜಗಿ, ಖ್ಯಾತ ಹರಿದಾಸ ಭಟ್, ಮುಂಬಯಿ
ಮುಖ್ಯ ಅತಿಥಿಗಳಾಗಿದ್ದಾರೆ.

ಸಭೆಯಲ್ಲಿ ಪೇಜಾವರ ಮಠದಿಂದ
ಡಾ. ಹೆಚ್.ಪಿ ನಾಗರಾಜ ಆಚಾರ್ಯರಿಗೆ ಶ್ರೀ ವಿಜಯಧ್ವಜ ಪ್ರಶಸ್ತಿ, ಶ್ರೀ ಸುಬ್ರಹ್ಮಣ್ಯ ಮಠದಿಂದ
ಪ್ರೊ ಗುರುರಾಜ ಕರ್ಜಗಿ,   ಸೀತಾರಾಮ ತೋಲ್ಪಾಡಿತ್ತಾಯರಿಗೆ ಶ್ರೀ ನರಸಿಂಹಾನುಗ್ರಹ ಪ್ರಶಸ್ತಿ
ಶ್ರೀ ರಾಮದಾಸ ಆಚಾರ್ಯ, ಪೆರ್ಡೂರು ಶ್ರೀ ನರಸಿಂಹಾನುಗ್ರಹ ಪ್ರಶಸ್ತಿ ಪ್ರದಾನ ನಡೆಯಲಿದೆ. ಹಾಗೂ ವೇದವ್ಯಾಸ ಸಂಶೋಧನ ಕೇಂದ್ರದಿಂದ ಪ್ರಕಟಗೊಂಡ ಎರಡು ಪುಸ್ತಕಗಳ ಬಿಡುಗಡೆಯಾಗಲಿದೆ. ನಂತರ
ಭರತನಾಟ್ಯ ನೃತ್ಯ ಪ್ರದರ್ಶನ  ನೆರವೇರಲಿದೆ.

ಸುದ್ದಿಗೋಷ್ಠಿಯಲ್ಲಿ ಸುಬ್ರಹ್ಮಣ್ಯ ಮಠದ ದಿವಾನ ಸುದರ್ಶನ ಜೋಯಿಸರು, ಕಲಾವಿದ ಕೆ.ಯಜ್ಞೇಶ್ ಆಚಾರ್ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading