Ad Widget

ಗುತ್ತಿಗಾರು : ಫೆ.08 ರಂದು “ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ” ಹಾಗೂ “9ನೇ ರಕ್ತದಾನ ಶಿಬಿರ”

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್(ರಿ.) ಗುತ್ತಿಗಾರು ಹಾಗೂ ಅಮರ ಯೋಗ ಕೇಂದ್ರ ಗುತ್ತಿಗಾರು ಇದರ 5ನೇ ವರ್ಷಾಚರಣೆ ಅಂಗವಾಗಿ ಜೆ.ಸಿ.ಐ ಪಂಜ ಪಂಚಶ್ರೀ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಂಗಳೂರು ಹಾಗೂ ಸುಳ್ಯ ತಾಲೂಕು ಇವರುಗಳ ಸಹಯೋಗದೊಂದಿಗೆ ಫೆ.08 ಆದಿತ್ಯವಾರದಂದು ಬೆಳಿಗ್ಗೆ 9:00 ಗಂಟೆಯಿಂದ ಸುಳ್ಯ ತಾಲೂಕಿನ ಗುತ್ತಿಗಾರು ಮುಖ್ಯ ರಸ್ತೆಯಲ್ಲಿರುವ ಚಿಕ್ಮುಳಿ ಸಭಾಭವನದಲ್ಲಿ “ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ” ಹಾಗೂ “9ನೇ ರಕ್ತದಾನ ಶಿಬಿರ, ಗೌರವ ಸಮರ್ಪಣೆ” ಕಾರ್ಯಕ್ರಮ ನೆರವೇರಲಿದ್ದು, ಯೋಗಾಸನ ಸ್ಪರ್ಧೆಯು 1 ರಿಂದ 2ನೇ ತರಗತಿ, 3 ರಿಂದ 4ನೇ ತರಗತಿ, 5 ರಿಂದ 6ನೇ ತರಗತಿ, 7 ರಿಂದ 8ನೇ ತರಗತಿ, 9 ರಿಂದ 10ನೇ ತರಗತಿ, 11 ರಿಂದ 12ನೇ ತರಗತಿ ಹೀಗೆ ವಿವಿಧ ವಿಭಾಗಗಳಲ್ಲಿ ನಡೆಯಲಿದ್ದು, ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ, ಚತುರ್ಥ ಹಾಗೂ ಪಂಚಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಶಾಶ್ವತ ಫಲಕ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಪ್ರಮಾಣ ಪತ್ರ ಹಾಗೂ ಪದಕ ನೀಡಿ ಗೌರವಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದು, ಸರ್ವಾಂಗಾಸನ, ಹಲಾಸನ, ವೀರಭದ್ರಾಸನ, ಮತ್ಸ್ಯಾಸನ, ಉಷ್ಟ್ರಾಸನ ಹಾಗೂ ಪಶ್ಚಿಮೋತ್ತಾಸನ ಇವುಗಳು ಎಲ್ಲಾ ವಿಭಾಗಗಳ ಕಡ್ಡಾಯ ಆಸನಗಳಾಗಿದ್ದು, ಸ್ಪರ್ಧೆಯ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿಗಾಗಿ 9741134931 ಸಂಪರ್ಕಿಸಬಹುದಾಗಿದೆ ಎಂದು ಸ್ಪರ್ಧೆಯ ಆಯೋಜಕರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading