Ad Widget

ವಿಜೃಂಭಣೆಯಿಂದ ನಡೆದ ಪೆರುವಾಜೆ ಬ್ರಹ್ಮರಥೋತ್ಸವ – ಆಕರ್ಷಕ ಬೆಡಿ ಪ್ರದರ್ಶನ

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಜ.16 ರಿಂದ ಆರಂಭಗೊಂಡಿದ್ದು, ಜ.19 ರಂದು ಬ್ರಹ್ಮರಥೋತ್ಸವ ಹಾಗೂ ಬೆಡಿ ಪ್ರದರ್ಶನ ನಡೆಯಿತು‌.

ಜ.19 ರಂದು ಬೆಳಗ್ಗೆ ಶ್ರೀ ದೇವರ ಬಲಿ ಹೊರಟು ಉತ್ಸವ, ಮಧ್ಯಾಹ್ನ ಶ್ರೀ ದೇವರಿಗೆ ಕಲಶಾಭಿಷೇಕ, ಪಲ್ಲಕ್ಕಿ ಉತ್ಸವ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ರಾತ್ರಿ ಶ್ರೀ ದೇವರ ಬಲಿ ಹೊರಟು ಉತ್ಸವ, ವಸಂತ ಕಟ್ಟೆ ಪೂಜೆ, ವ್ಯಾಘ್ರಚಾಮುಂಡಿ ದೈವ(ಪಿಲಿಭೂತ)ದ ಭಂಡಾರ ಬರುವುದು, ಅನಂತರ ಬ್ರಹ್ಮರಥೋತ್ಸವ ಹಾಗೂ ಪೆರುವಾಜೆ ಬೆಡಿ ಪ್ರದರ್ಶನ ನಡೆಯಿತು. 
ಆ ಬಳಿಕ ಮಹಾಪೂಜೆ, ಶಯನೋತ್ಸವ, ಕವಾಟ ಬಂಧನ ನಡೆಯಿತು.

ಜ.20 ರಂದು ಬೆಳಗ್ಗೆ 7:00ಕ್ಕೆ ಕವಾಟೋದ್ಘಾಟನೆ, ಶ್ರೀ ದೇವರಿಗೆ ತೈಲಾಭಿಷೇಕ, ಪಂಚಾಮೃತಾಭಿಷೇಕ, ಸೀಯಾಳಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ ತುಲಾಭಾರ ಸೇವೆ, ಯಾತ್ರಾ ಹೋಮ, ಪ್ರಸಾದ ವಿತರಣೆ ನಡೆಯಲಿದೆ.
ರಾತ್ರಿ ಶ್ರೀ ದೇವರ ಬಲಿ ಹೊರಟು ಕಟ್ಟೆಪೂಜೆ, ಅವಭೃತ ಸ್ನಾನ ಧ್ವಜಾವರೋಹಣ, ಮಹಾಪೂಜೆ, ಪ್ರಸಾದ ವಿತರಣೆ ನಂತರ ಉಳ್ಳಾಕುಲು, ಮೈಷಂತಾಯ, ಶ್ರೀ ವ್ಯಾಘ್ರಚಾಮುಂಡಿ ದೈವದ ಭಂಡಾರ ತೆಗೆಯುವ ಕಾರ್ಯಕ್ರಮ ನಡೆಯಲಿದೆ.

ಜ.21ರಂದು ಬೆಳಿಗ್ಗೆ ಮಹಾಗಣಪತಿ ಹೋಮ,ಕಲಶ ಪೂಜೆ, ಶ್ರೀ ಉಳ್ಳಾಕುಲು ಮತ್ತು ಮೈಷಂತಾಯ ದೈವಗಳ ನೇಮೋತ್ಸವ, ಪ್ರಸಾದ ವಿತರಣೆ ನಡೆಯಲಿರುವುದು.
ಮದ್ಯಾಹ್ನ ಶ್ರೀ ದೇವರಿಗೆ ಸಂಪ್ರೋಕ್ಷಣೆ, ಕಲಶಾಭಿಷೇಕ, ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಯಲಿರುವುದು. ಮಧ್ಯಾಹ್ನ ಶ್ರೀ ವ್ಯಾಘ್ರಚಾಮುಂಡಿ ದೈವದ ನೇಮೋತ್ಸವ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 7:00ಕ್ಕೆ ಶ್ರೀ ಕಲ್ಲುರ್ಟಿ-ಕಲ್ಕುಡ ದೈವದ ನೇಮೋತ್ಸವ ನಡೆಯಲಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading