Ad Widget

ಅಜ್ಜಾವರ : ಮೇದಿನಡ್ಕದಲ್ಲಿ ಪೊಂಗಲ್ ಹಬ್ಬ ಆಚರಣೆ

ಅಜ್ಜಾವರ : ಮೇದಿನಡ್ಕದಲ್ಲಿ ಪೂರ್ವ ಸಂಪ್ರದಾಯದಂತೆ ನಡೆದುಕೊಂಡು ಬಂದ ಪೊಂಗಲ್ ಆಚರಣೆಯು ಶ್ರೀ ರಾಮ ಭಜನಾ ಮಂದಿರದಲ್ಲಿ ಜ.15 ರಂದು ಪೊಂಗಲ್ ಆಚರಣೆಯೊಂದಿಗೆ ವಿಜ್ರಂಭಣೆಯಿಂದ ಸಮಾಪನಗೊಂಡಿತು.
ಬೆಳಗ್ಗೆ 8:30ಕ್ಕೆ ಶ್ರೀ ರಾಮಚಂದ್ರನಿಗೆ ವಿಶೇಷ ಅಲಂಕಾರ ಪೂಜೆ, ಪ್ರಸಾದ ವಿತರಣೆ ನಡೆಯಿತು.
ತದ ನಂತರ ಮನೆ ಮನೆ ಭಜನಾ ಸಂಕೀರ್ತನೆ, ತ್ರಿಶೂಲ ದೀಪದೊಂದಿಗೆ ಶ್ರೀ ರಾಮ ದೇವರ ಪಲ್ಲಕ್ಕಿ ಉತ್ಸವ ನಡೆಯಿತು.
ಮಧ್ಯಾಹ್ನ ಮಹಾಪೂಜೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಸ್ಥಳೀಯ ಶ್ರೀ ಕೃಷ್ಣಾ ಭಜನಾ ಮಂದಿರ ಮೇನಾಲ ವತಿಯಿಂದ ನೃತ್ಯಭಜನೆ ವಿಶೇಷವಾಗಿತ್ತು.
ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನ ಆಡಳಿತ ಸಮಿತಿ ಸೇರಿದಂತೆ ಮೇದಿನಡ್ಕ ಮತ್ತು ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading