Ad Widget

ಕನಕಮಜಲು : ಯುವಜನ ವಿಕಾಸ ಕೇಂದ್ರ ಯುವಕ ಮಂಡಲದ ವಾರ್ಷಿಕ ಮಹಾಸಭೆ ಮತ್ತು ಪದಗ್ರಹಣ

ಯುವಜನ ವಿಕಾಸ ಕೇಂದ್ರ ಯುವಕ ಮಂಡಲ(ರಿ.) ಕನಕಮಜಲು ಇದರ ವಾರ್ಷಿಕ ಸಭೆಯು 11 ಜನವರಿ 2026ನೇ ಆದಿತ್ಯವಾರದಂದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ವಾರ್ಷಿಕ ಮಹಾಸಭೆಯ ಸಭಾಧ್ಯಕ್ಷರಾಗಿ ಯುವಕ ಮಂಡಲ(ರಿ.) ಕನಕಮಜಲು ಇದರ ಅಧ್ಯಕ್ಷರಾದ ಹರ್ಷಿತ್ ಉಗ್ಗಮೂಲೆ ವಹಿಸಿದ್ದರು. ವೇದಿಕೆಯಲ್ಲಿ ಗೌರವಾಧ್ಯಕ್ಷರಾದ ರಕ್ಷಿತ್ ಅಕ್ಕಿಮಲೆ, ಕಾರ್ಯದರ್ಶಿ ಅಶ್ವಥ್ ಅಡ್ಕಾರ್ ಉಪಸ್ಥಿತರಿದ್ದರು.
ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಅಶ್ವಥ್ ಅಡ್ಕಾರ್ ವಾಚಿಸಿದರು.
ವಾರ್ಷಿಕ ಲೆಕ್ಕಪತ್ರ ಮಂಡನೆಯನ್ನು ಅಧ್ಯಕ್ಷರಾದ ಹರ್ಷಿತ್ ಉಗ್ಗಮೂಲೆ ಮಂಡಿಸಿದರು.
2026- 27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಗೌರವಾಧ್ಯಕ್ಷರಾದ ರಕ್ಷಿತ್ ಅಕ್ಕಿಮಲೆ ನಡೆಸಿಕೊಟ್ಟರು. ಪ್ರಖ್ಯಾತ್ ಕೊಡ್ತಿಲು ಸ್ವಾಗತಿಸಿ, ಅಶ್ವಥ್ ಅಡ್ಕಾರ್ ವಂದಿಸಿದರು.
ಚಂದ್ರಶೇಖರ್ ನೆಡಿಲು ಕಾರ್ಯಕ್ರಮ ನಿರೂಪಿಸಿದರು.

ಪದಗ್ರಹಣ : ಪದಗ್ರಹಣ ಸಮಾರಂಭದ ಸಭಾಧ್ಯಕ್ಷತೆಯನ್ನು ಹರ್ಷಿತ್ ಉಗ್ಗಮೂಲೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮನೋಜ್ ನರಿಯೂರು ಉದ್ಯಮಿಗಳು ಮತ್ತು ಪ್ರಗತಿಪರ ಕೃಷಿಕರು, ಪ್ರಸಾದ್ ಕಾಟೂರು ನಿರ್ದೇಶಕರು ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ, ಮುರಳಿ ನಳಿಯಾರು ಪ್ರಧಾನ ಕಾರ್ಯದರ್ಶಿ ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ, ನೂತನ ಅಧ್ಯಕ್ಷರಾದ ಅಶ್ವಥ್ ಅಡ್ಕಾರ್, ನೂತನ ಕಾರ್ಯದರ್ಶಿ ಚೇತನ್ ಡಿ.ಕೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ  ಮನೋಜ್ ನರಿಯೂರು ಇವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಯುವಕ ಮಂಡಲದ ಪೂರ್ವಾಧ್ಯಕ್ಷರಾದ ನೇತ್ರಕುಮಾರ್ ಪೆರೋಳಿ ಸನ್ಮಾನಿಸಿದರು.

2026-27ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಯುವಜನ ಸಂಯುಕ್ತ ಮಂಡಳಿ ನಿರ್ದೇಶಕ ಪ್ರಸಾದ್ ಕಾಟೂರು ಪ್ರಮಾಣ ವಚನ ಬೋಧಿಸಿದರು.
ಗೌರವಾಧ್ಯಕ್ಷರಾಗಿ ಹರ್ಷಿತ್ ಉಗ್ಗಮೂಲೆ, ಅಧ್ಯಕ್ಷರಾಗಿ ಅಶ್ವಥ್ ಅಡ್ಕಾರ್,  ಉಪಾಧ್ಯಕ್ಷರಾಗಿ ಸ್ವಸ್ತಿಕ್ ಕುತ್ಯಾಳ, ಕಾರ್ಯದರ್ಶಿಯಾಗಿ ಚೇತನ್ ಡಿ.ಕೆ, ಜೊತೆ ಕಾರ್ಯದರ್ಶಿಯಾಗಿ ಪುನೀತ್ ಸಾಂತ್ಯಡ್ಕ, ಕೋಶಾಧಿಕಾರಿಯಾಗಿ ಪ್ರಖ್ಯಾತ್ ಕೊಡ್ತಿಲು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರತನ್ ಕೊಲ್ಲಂತ್ತಡ್ಕ, ಕ್ರೀಡಾ ಕಾರ್ಯದರ್ಶಿಯಾಗಿ ಜಗದೀಶ್ ಮಾಣಿಕೋಡಿ, ಪತ್ರಿಕಾ ಪ್ರತಿನಿಧಿಯಾಗಿ ಇಂದಿರೇಶ  ಕೊರ್ಬಂಡ್ಕ, ನಿರ್ದೇಶಕರುಗಳಾಗಿ ಸುನಿಲ್ ಅಕ್ಕಿಮಲೆ, ರವಿಚಂದ್ರ ಕನ್ನಡ್ಕಮೂಲೆ, ಅವಿನ್ ಮಳಿ, ಸ್ವಸ್ತಿಕ್ ಕಾಳಪ್ಪಜ್ಜನಮನೆ, ವರುಣ್ ಕಲ್ಲಾಜೆ, ದಿನೇಶ್ ಅರ್ನೋಜಿ, ವಿನ್ಯಾಸ್ ಕಣಜಾಲು, ಜಗನ್ನಾಥ ಮಾಣಿಮಜಲು ಆಯ್ಕೆಯಾದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading