Ad Widget

ಅಲೆಟ್ಟಿ ವಾಲ್ಮೀಕಿ ವಸತಿ ಶಾಲೆಯಲ್ಲಿ ಕಲಿಕಾ ಹಬ್ಬ

ಜ‌.13ರಂದು ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆ ಆಲೆಟ್ಟಿಯಲ್ಲಿ ಕಲಿಕಾ ಹಬ್ಬವನ್ನು ಆಚರಿಸಲಾಯಿತು.
ಆಲೆಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವೀಣಾ ವಸಂತ್ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಕಾವ್ಯ.ಎಂ ಶಿಕ್ಷಕ ವೃಂದ, ಪೋಷಕರು,ಅಡುಗೆ ಸಿಬ್ಬಂದಿಗಳು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಆ ಪ್ರಯುಕ್ತ ಮಕ್ಕಳಿಗೆ ಗಟ್ಟಿ ಓದು, ಸ್ಮರಣ ಶಕ್ತಿ, ರಸಪ್ರಶ್ನೆ, ಅಂದವಾದ ಬರವಣಿಗೆ  ಅಲ್ಲದೆ ಪೋಷಕರಿಗೆ ಮನೋರಂಜನೆಯ ಸ್ಪರ್ಧೆ ಗಳನ್ನು ಹಮ್ಮಿಕೊಳ್ಳಲಾಗಿತ್ತು.
ಈ ವಿಶೇಷ ಕಾರ್ಯಕ್ರಮದಲ್ಲಿ ಕಲಿಕೆಯ ವಿವಿಧ ವಿಧಾನಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳು ವಿವರಿಸಿದರು. ಅಲ್ಲದೇ ಮಕ್ಕಳು ಸಂಗ್ರಹಸಿದ ಪ್ರಾಚೀನ ವಸ್ತುಗಳು, ಗಿಡಮೂಲಿಕೆಗಳು ಹಾಗೂ ಪ್ರಕೃತಿ ಮೂಲದಿಂದ ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶನ ನಡೆಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading