Ad Widget

ಜ.04- ಚೆಂಬು ಅನ್ಯಾಳ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಬೈಲುಕೋಲ – ಇಂದು ಗೊನೆ ಮುಹೂರ್ತ

ಚೆಂಬು ಗ್ರಾಮದ ಅನ್ಯಾಳದಲ್ಲಿರುವ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಜ.04 ರಂದು ಬೈಲುಕೋಲ ನಡೆಯಲಿದೆ.
ಇದರ ಅಂಗವಾಗಿ ಡಿ 27 ರಂದು ಬೆಳಿಗ್ಗೆ ಗಣಹೋಮ, ನಂತರ ಗೊನೆ ಮುಹೂರ್ತ ನೆರವೇರಿತು. ಈ ಸಂದರ್ಭದಲ್ಲಿ ಆಡಳಿತ ಸಮಿತಿಯ ಅಧ್ಯಕ್ಷ ಬಾಲಂಬಿ ಸೋಮಣ್ಣ, ಕಾರ್ಯದರ್ಶಿ ಹೊಸೂರು ಕಿರಣ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪರಿವಾರ ಸೋಮಣ್ಣ, ಕಾರ್ಯದರ್ಶಿ ಕಾಚೇಲು ಸೋಮಣ್ಣ ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

. . . . . . . . .

ಜ.03 ರಂದು ರಾತ್ರಿ ಗಂಟೆ 9-00ಕ್ಕೆ ತೊಡಙಲ್ ನಂತರ ಅನ್ನಸಂತರ್ಪಣೆ ನಡೆಯಲಿದೆ. ಜ.04 ರಂದು ಪೂರ್ವಾಹ್ನ ಗಂಟೆ 10 ರಿಂದ ಶ್ರೀ ಮಹಾವಿಷ್ಣುಮೂರ್ತಿ ದೈವದ ಬೈಲುಕೋಲ, ಹರಕೆ ಮತ್ತು ಪ್ರಸಾದ ವಿತರಣೆ, ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading