Ad Widget

ಸುಳ್ಯದ ಬಾಲ ಪ್ರತಿಭೆ ಅಶ್ವಿಜ್ ಅತ್ರೇಯ ಮಡಿಲಿಗೆ “ಕಾರಂತ ಬಾಲ ಪುರಸ್ಕಾರ”

ಡಾ. ಶಿವರಾಮ ಕಾರಂತ ಬಾಲ ಪುರಸ್ಕಾರವನ್ನು ಸುಳ್ಯದ ಬಹುಮುಖ ಪ್ರತಿಭೆ ಅಶ್ವಿಜ್ ಅತ್ರೇಯ ಸುಳ್ಯ  ಪಡೆದುಕೊಂಡಿದ್ದಾರೆ.

ಇದೇ ನವಂಬರ್ 30 ರಂದು ನಡೆದ
ಕೋಟ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನದ ವತಿಯಿಂದ ನೀಡುವ ಐದನೇ ವರ್ಷದ ಡಾ. “ಶಿವರಾಮ ಕಾರಂತ ಬಾಲ ಪುರಸ್ಕಾರ”ವನ್ನು ಸುಳ್ಯದ ಬಹುಮುಖ ಪ್ರತಿಭೆಯಾದ ಬಾಲನಟ ಬಾಲ ಗಾಯಕ ಅಶ್ವಿಜ್ ಅತ್ರೇಯ ಸುಳ್ಯ ಇವರು ಪಡೆದುಕೊಂಡಿದ್ದಾರೆ.

ಪ್ರೌಢಶಾಲಾ ವಿಭಾಗದಲ್ಲಿ ಆಯ್ಕೆಯಾದ ಇವರು ಪ್ರಭು ಬುಕ್ ಸೆಂಟರ್ ನ ಮಾಲಕರಾದ ಶ್ರೀಮತಿ ಉಷಾ ರಾಮಚಂದ್ರ ಇವರ ಸುಪುತ್ರ ನಾಗಿದ್ದು ಸುಳ್ಯ ಸೈಂಟ್ ಜೋಸೆಫ್ ಶಾಲೆಯ
8ನೇ ತರಗತಿ ವಿದ್ಯಾರ್ಥಿ.
ಇವರು ನಟನೆ, ಗಾಯನ, ಸಂಗೀತ ಹಾಗೂ ಮಾಡೆಲಿಂಗ್   ಕ್ಷೇತ್ರದಲ್ಲಿ ಟೀನ್ ಇಂಡಿಯಾ-2024 ಫಿನಾಲೆ ಹಂತಕ್ಕೆ ಡೆಲ್ಲಿಗೆ ಆಯ್ಕೆ ಆಗಿದ್ದರು ಹಾಗೂ ಕಿಡ್ಸ್ ಫ್ಯಾಷನ್ ಫೈನಲ್ ಶೋ ನೀಡಿರುತ್ತಾರೆ       ಮಿಮಿಕ್ರಿಯಲ್ಲಿ ಪ್ರತಿಭಾ ಕಾರಂಜಿಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದರು. ಹೀಗೆ ಹಲವಾರು ಬಹುಮುಖ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಇವರು ಎಳವೆಯಲ್ಲಿಯೇ ಪ್ರಖ್ಯಾತ ಟಿ.ವಿ.ಚಾನೆಲ್ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ ಮೌನರಾಗ ಧಾರಾವಾಹಿಯಲ್ಲಿ ಮುಖ್ಯ ನಾಯಕನ ಪಾತ್ರದಲ್ಲಿ ಅಧ್ಭುತ ನಟನೆಯಿಂದ ರಾಜ್ಯದಾದ್ಯಂತ ಗುರುತಿಸಿಕೊಂಡ ಬಾಲಕ. ಇತ್ತೀಚೆಗೆ ಬಿಡುಗಡೆಯಾದ ರವಿಕೆ ಪ್ರಸಂಗ ಚಲನಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಬೆಳ್ಳಿತೆರೆಯಲ್ಲಿ ತನ್ನ ಅಮೋಘ ಅಭಿನಯದಿಂದ ಪ್ರಖ್ಯಾತಿ ಪಡೆದ ಇವರು ಈಗ ಎಡಿಟಿಂಗ್ ಹಂತದಲ್ಲಿರುವ ನಂಬರ್ ಪ್ಲೇಟ್ ಚಲನಚಿತ್ರದಲ್ಲಿ ಮುಖ್ಯ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಆಲ್ಲದೆ ಡ್ರಾಮಾ ಜೂನಿಯರ್,  ಜೀ ಸರಿಗಮ ರಿಯಾಲಿಟಿ  ಶೋ ಆಡಿಷನ್ ನಲ್ಲಿ ಬೆಂಗಳೂರಿನಲ್ಲಿ ಮೂರನೇ ಹಂತದವರೆಗೆ ಆಯ್ಕೆ ಯಾಗಿದ್ದರು. ಹಾಗೆಯೇ ಗಾಯನ ಕ್ಷೇತ್ರದಲ್ಲಿ ಅಮೋಘ ಸಾಧನೆಯ ಹಾದಿಯಲ್ಲಿ ತಾಲೂಕು, ಜಿಲ್ಲೆ ರಾಜ್ಯ ಅಂತಾರಾಜ್ಯದಲ್ಲೂ ಹೆಜ್ಜೆ ಗುರುತು ಮೂಡಿಸಿರುವ ಇವರು ತಮಿಳುನಾಡಿನ ಚೆನೈ,
ಬೆಂಗಳೂರು, ಹುಬ್ಬಳ್ಳಿ, ಧಾರವಾಡದ, ಚಿತ್ರದುರ್ಗ ಸೇರಿದಂತೆ ಉತ್ತರ ಕರ್ನಾಟಕದ ಕಲಬುರಗಿಯಲ್ಲಿ ಅದ್ಭುತ ಗಾಯನ ಪ್ರದರ್ಶನ ನೀಡಿರುತ್ತಾರೆ. ಸುಮಾರು 660 ಅಧಿಕ ವೇದಿಕೆಗಳಲ್ಲಿ ಗಾಯನ ಸಂಗೀತ ರಸದೌತಣ ನೀಡುವ ಜೊತೆಗೆ ಅಂತರಾಷ್ಟ್ರೀಯ ಮಟ್ಟದ ಯೂನಿವರ್ಸಲ್ ಐಡಲ್ ಸ್ಪರ್ಧೆಯಲ್ಲಿ ಭಾರತದಲ್ಲಿ 7th ರಾಂಕ್ ಪಡೆದು ದುಬೈ ಸ್ಟುಡಿಯೋ  ರೌಂಡ್ ಗೆ ಅರ್ಹತೆ ಪಡೆದಿರುತ್ತಾರೆ. ಕಲ್ಯಾಣ ಕರ್ನಾಟಕ ಕೋಗಿಲೆ ಗ್ರಾಂಡ್ ಫಿನಾಲೆಯಲ್ಲಿ ಅದ್ಭುತ ಪ್ರದರ್ಶನ ಪ್ರಖ್ಯಾತ ಹಿನ್ನಲೆ ಗಾಯಕಿ ಇಂದು ನಾಗರಾಜ್
ಮತ್ತು ಸೆಲೆಬ್ರಿಟಿ ನಟ ತ್ರಿವಿಕ್ರಮ್ ಇವರಿಂದ ಪ್ರಸಂಶೆ ಪಡೆದು ರಾಜ್ಯದೆಲ್ಲೆಡೆ ಗುರುತಿಸಿ ಕೊಂಡಿದ್ದಾರೆ.
ಅಲ್ಲದೇ ನೂರಾರು ಗಾಯನ ಸ್ಪರ್ಧೆಗಳಲ್ಲಿ ಪ್ರತಿಷ್ಠಿತ ಸಂಗೀತ ವಿದ್ವಾಂಸರ ಮೆಚ್ಚುಗೆ ಪಡೆದು ಬಹುಮಾನಗಳನ್ವು ಪಡೆದಿರುತ್ತಾರೆ. ಜೊತೆಗೆ ಯಕ್ಷಗಾನ ಭಾಗವತಿಕೆ ನೃತ್ಯ ಅಬ್ಯಾಸ ಮಾಡುತಿದ್ದು, ಸುಗಮ ಸಂಗೀತವನ್ನು ಡಾ.ಕಿರಣ್ ಕುಮಾರ್  ಗಾನಸಿರಿ, ಜೀ ಸರಿಗಮಪ ಖ್ಯಾತಿಯ ಶ್ರೀ ಹರ್ಷ ಮೈಸೂರು, ಶ್ರೀ ಲಕ್ಷ್ಮೀ ಪುತ್ತೂರು, ಅಶ್ವಿನಿ ಟಿ.ಎನ್
ಹಾಗೂ ಕರ್ನಾಟಿಕ್ ಸಂಗೀತವನ್ನು ಕಾಂಚನ ಈಶ್ವರ ಭಟ್ ಇವರಲ್ಲಿ ಹಾಗೂ ರಂಗಾಭಿನಯವನ್ನು ಜೀವನ್ ರಾಮ್ ಸುಳ್ಯ,
ಕೃಷ್ಣಪ್ಪ ಬಂಬಿಲ ಇಲ್ಲಿ
ಕಲಿಯುತಿದ್ದು, ಇವರು ಬಿರುದು ಸನ್ಮಾನಗಳಿಗೆ ಭಾಜನರಾಗಿದ್ದಾರೆ

ಅಮ್ಮ ಸೇವಾ ಟ್ರಸ್ಟ್ ಸನ್ಮಾನ, ಚಗಡಿನಾಡ ರಾಜ್ಯೋತ್ಸವ  
ಸನ್ಮಾನ, ಕಾಸರಗೋಡು ದಸರಾ ಸಾಧಕ, ಚಂದನ ಸಾಹಿತ್ಯ ವೇದಿಕೆಯಿಂದ ಕನ್ನಡ ಸಾಂಸ್ಕೃತಿಕ ರತ್ನ ಪುರಸ್ಕಾರ, ಗಡಿನಾಡ ಗಂಧರ್ವ ಗಾಯನ ಪುರಸ್ಕಾರ, ಕೆ.ವಿ.ಜಿ ಸುಳ್ಯ ಹಬ್ಬ ಸಾಧಕ ಸನ್ಮಾನ, ಕಯ್ಯಾರ ಕೋಗಿಲೆ ಬಿರುದು ಬಹುಮಾನ, ಪ್ರಸ್ತುತ 2025 ರಲ್ಲಿ ಕರ್ನಾಟಕದ ಉನ್ನತ ಪುರಸ್ಕಾರ ಶಿವರಾಮ ಕಾರಂತ ಬಾಲ ಪ್ರಶಸ್ತಿ ಪಡೆದಿರುತ್ತಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading