Ad Widget

ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಡಿ.16 ರಂದು “ಕೃಷಿ ಅಧ್ಯಯನ ಪ್ರವಾಸ”

ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಡಿ.16 ರಂದು “ಕೃಷಿ ಅಧ್ಯಯನ” ಪ್ರವಾಸ ಹೋಗಲಿದ್ದು, ಬೆಳಿಗ್ಗೆ 7:30ಕ್ಕೆ ಮಡಪ್ಪಾಡಿಯಿಂದ ಹೊರಟು ಮೊದಲು ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 12:00 ಗಂಟೆಯವರೆಗೆ ಪ್ರಗತಿಪರ ಕಾಳುಮೆಣಸು ಕೃಷಿಕರಾದ ಸುರೇಶ್ ಬಲ್ನಾಡು ರವರ ತೋಟವನ್ನು ಭೇಟಿ ಮಾಡಲಿದ್ದು, ಮದ್ಯಾಹ್ನ 1:00 ರಿಂದ 1:30ರ ಭೋಜನ ಅವಧಿ ಮುಗಿದ ನಂತರ ಬಂಟ್ವಾಳ ಮದ್ಯಾಹ್ನ 1:30 ರಿಂದ 2:30ರವರೆಗೆ ಬಂಟ್ವಾಳ ಶಾಸಕರು ಹಾಗೂ ಸಮಗ್ರ ಕೃಷಿ ತಂತ್ರಜ್ಞಾನ ಆಧಾರಿತ ಕೃಷಿಕರಾದ ರಾಜೇಶ್ ನಾಯಕ್ ರವರ ತೋಟಕ್ಕೆ ಭೇಟಿ ನೀಡಲಾಗುವುದು. ನಂತರ ಸಂಜೆ 3:30 ರಿಂದ 4:30 ರವರೆಗೆ ಕಾಫಿ ಹಾಗೂ ಕಾಳುಮೆಣಸು ಕೃಷಿಕರಾದ ಅಜಿತ್ ಪ್ರಸಾದ್ ರೈ ಅವರ ತೋಟಕ್ಕೆ ಭೇಟಿ ನೀಡಲಾಗುವುದು ಎಂದು ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದ್ದು, ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವ್ಯಾಪ್ತಿಯ ಆಸಕ್ತ ಕೃಷಿಕರು ತೆರಳಬಹುದಾಗಿದೆ‌.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading