Ad Widget

ಬಿಳಿನೆಲೆ : ಜಂಟಿ ಸರ್ವೇ ಕಾರ್ಯ ಆರಂಭ – ಗ್ರಾಮಸ್ಥರ ಬಹುದಿನದ ಬೇಡಿಕೆ ಈಡೇರಿಕೆ – ರೈತರ ಹೋರಾಟಕ್ಕೆ ಸಂದ ಜಯ – ಸುಧೀರ್ ಕುಮಾರ್ ಶೆಟ್ಟಿ

ಅರಣ್ಯ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗ್ರಾಮಸ್ಥರ ಬೇಡಿಕೆಯಂತೆ ಅರಣ್ಯ-ಕಂದಾಯ ಜಮೀನಿನ ಜಂಟಿ ಸರ್ವೇ ಕಾರ್ಯ ಕಡಬ ತಾಲೂಕಿನಲ್ಲಿ ಮತ್ತೆ ವೇಗ ಪಡೆದಿದ್ದು, ಇದೀಗ ಎರಡು, ಗ್ರಾಮ ಪಂಚಾಯತ್ ಸರ್ವೇ ಕಾರ್ಯ ನಡೆಯುತ್ತಿದೆ. ವ್ಯಾಪ್ತಿಯಲ್ಲಿ

. . . . . . . . .

ಅರಣ್ಯ-ಕಂದಾಯ ಜಂಟಿ ಸರ್ವೇ ನಡೆಸಿ, ಗಡಿ ಗುರುತು ಪ್ರಕ್ರಿಯೆಯನ್ನು ಸಮರ್ಪಕವಾಗಿ ನಡೆಸದೆ ಕಡಬ ತಾಲೂಕು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಉಪ ವಿಭಾಗ ವ್ಯಾಪ್ತಿಯಲ್ಲಿ ಸರಕಾರದ ಯೋಜನೆಯಡಿ ಹಕ್ಕುಪತ್ರ ವಿತರಣೆಗೆ ಅಡ್ಡಿಯಾಗಿತ್ತು, ಹಕ್ಕುಪತ್ರ ವಿತರಿಸಿದ್ದರೂ ಅದು ಕೂಡ ಕೈತಪ್ಪುವ ಆತಂಕ ಉಂಟಾಗಿದೆ. ಈ ಹಿನ್ನಲೆಯಲ್ಲಿ ಜಂಟಿ ಸರ್ವೇ ನಡೆಸಿ ಗಡಿ ಗುರುತು ಮಾಡಬೇಕೆಂಬ ಬೇಡಿಕೆಯನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದರು.

. . . . . . .

ಅದರಂತೆ ಕಳೆದ ಜೂನ್‌ನಲ್ಲಿ ಜಂಟಿ ಸರ್ವೇ ಕಾರ್ಯ ಆರಂಭಗೊಂಡಿದ್ದು, ಮಳೆ ಹಿನ್ನಲೆಯಲ್ಲಿ ಸ್ಥಗಿತಗೊಂಡಿದ್ದ ಜಂಟಿ ಸರ್ವೇ ಕಾರ್ಯ ಇದೀಗ ಕಡಬ ತಾಲೂಕಿನ ನೂಜಿಬಾಳ್ತಿಲ ಹಾಗೂ ಬಿಳಿನೆಲೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುತ್ತಿದೆ. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಕಾರ್ಯಯೋಜನೆ ಮತ್ತು ಮೋಜಿಣಿ ಶಿವಮೊಗ್ಗ ತಂಡದ ನೇತೃತ್ವದಲ್ಲಿ ಕಂದಾಯ, ಅರಣ್ಯ, ಸರ್ವೇ ಇಲಾಖೆ ಸಿಬ್ಬಂದಿಗಳ ಸಹಕಾರದಲ್ಲಿ ಜಂಟಿ ಸರ್ವೇ ಕಾರ್ಯ ನಡೆಯುತ್ತಿದೆ.

ಬಿಳಿನೆಲೆ ಗ್ರಾಮದ ಬಹುಕಾಲದ ಬೇಡಿಕೆಯಾಗಿದ್ದ ಜಂಟಿ ಸರ್ವೆಗೆ ಸರಕಾರ ಆದೇಶ ನೀಡಿ 11-10-2025 ರಿಂದ ಅರಣ್ಯ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಬಿಳಿನೆಲೆಯಲ್ಲಿ ಜಂಟಿ ಸರ್ವೆ ಪ್ರಾರಂಬಿಸಿರುತ್ತಾರೆ. ಜಂಟಿ ಸರ್ವೆ ನಡೆಯುತ್ತಿರುವ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ ಯವರು ಮಾತನಾಡಿ ಹಲವಾರು ವರ್ಷಗಳ ರೈತರ ಹೋರಾಟಕ್ಕೆ ಸಂದ ಜಯ ಎಂದು ಹೇಳಿದರು ನಂತರ ಮಾತನಾಡಿ ಅರಣ್ಯ ಹಾಗೂ ಕಂದಾಯ ಸಚಿವರಿಗೆ, ಕಂದಾಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಂಟಿ ಸರ್ವೆ ಹೋರಾಟ ಸಮಿತಿ ಅಧ್ಯಕ್ಷರಾದ ಪ್ರದೀಪ್ ಕಳಿಗೆ, ಗ್ರಾಮ ಪಂಚಾಯತಿ ಸದಸ್ಯರಾದ ಸತೀಶ್ ಕಳಿಗೆ ವಿನೀಷ್ ಬಿಳಿನೆಲೆ, ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಹರಿಶ್ಚಂದ್ರ ಕಳಿಗೆ, ಅರಣ್ಯ ಇಲಾಖೆ ಅಧಿಕಾರಿಗಳಾದ ಅಪೂರ್ವ ಅಚ್ರಪ್ಪಾಡಿ, ಕಂದಾಯ ಇಲಾಖೆಯ ಅಧಿಕಾರಿಗಳಾದ ಸರ್ವೇಯರ್ ಸಂತೋಷ್, ಗ್ರಾಮ ಕರಣಿಕ ಸಂತೋಷ್, ಗ್ರಾಮ ಸಹಾಯಕ ಶ್ರೀನಿವಾಸ್ ಹಾಗೂ ಸರ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.

ಬಿಳಿನೆಲೆಯ 175 ಸರ್ವೇ ನಂಬರ್ ಹಾಗೂ ನೂಜಿಬಾಳ್ತಿಲ ಗ್ರಾ.ಪಂ. ವ್ಯಾಪ್ತಿಯ 71 ಮತ್ತು 72 ಸರ್ವೇ ನಂಬರ್‌ಗಳ ಜಂಟಿ ಸರ್ವೇ ನಡೆಯುತ್ತಿದೆ. ಅರಣ್ಯದ ಗುಪ್ಪೆ ಕಲ್ಲನ್ನು ಅರಣ್ಯ ಇಲಾಖೆ ವತಿಯಿಂದ

ಪತ್ತೆ ಹಚ್ಚಿ ಗುರುತಿಸುವ ಹಾಗೂ ವರ್ಗ ಜಾಗದ ಗಡಿಯನ್ನು ಕಂದಾಯ/ಸರ್ವೇ ಸಿಬ್ಬಂದಿಗಳ ಸಹಕಾರದಲ್ಲಿ ಪತ್ತೆ ಹಚ್ಚಿ ಗುರುತಿಸುವ ಕಾರ್ಯ ಮಾಡುತ್ತಿದ್ದಾರೆ. ಬಳಿಕ ಜಂಟಿ ಸರ್ವೇಯ ಮುಂದಿನ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಐನೆಕಿದು, ಸುಬ್ರಹ್ಮಣ್ಯ, ಬಿಳಿನೆಲೆ, ಸಿರಿಬಾಗಿಲು, ಕೊಂಬಾರು, ಕೊಣಾಜೆ, ಐತ್ತೂರು, ನೂಜಿಬಾಳ್ತಿಲ, ರೆಂಜಿಲಾಡಿ, ಶಿರಾಡಿ ಮೊದಲಾದ 10 ಗ್ರಾಮಗಳಲ್ಲಿ ಜಂಟಿ ಸರ್ವೇ ನಡೆಸಲಾಗುತ್ತದೆ. ಪಟ್ಟಿಯಲ್ಲಿನ ಗ್ರಾಮಗಳ ಬಿಟ್ಟು ಹೋದ ಸರ್ವೇ ನಂಬರ್ ಗಳನ್ನೂ ಸೇರಿಸಿ ಜಂಟಿ ಸರ್ವೇ ನಡೆಸಲು ಆದೇಶಿಸಲಾಗಿದೆ. ಹಂತ ಹಂತವಾಗಿ ಗ್ರಾಮಗಳಲ್ಲಿ ಜಂಟಿ ಸರ್ವೇ ಕಾರ್ಯ ನಡೆಯಲಿದೆ ಎಂದು ತಂಡದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading