Ad Widget

ಕೊಯಿಲ ಪಶು ವೈದ್ಯಕೀಯ ಕಾಲೇಜು, ಪಶುಸಂವರ್ಧನ ಕೇಂದ್ರ, 33Kv ಸಬ್ ಸ್ಟೇಷನ್  ಕಾಮಗಾರಿಗಳ ವೀಕ್ಷಿಸಿದ ಶಾಸಕಿ ಭಾಗೀರಥಿ ಮುರುಳ್ಯ – ಅಧಿಕಾರಿಗಳ ಸಭೆ

ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯರವರು ಕೊಯಿಲ ಪಶು ವೈದ್ಯಕೀಯ ಕಾಲೇಜು, ಪಶುಸಂವರ್ಧನ ಕೇಂದ್ರ, 33Kv ಸಬ್ ಸ್ಟೇಷನ್  ಕಾಮಗಾರಿಗಳ ವೀಕ್ಷಿಸಿ, ಅಧಿಕಾರಿಗಳ ಸಭೆ ನಡೆಸಿದರು.
ಈ ಸಭೆಯಲ್ಲಿ ಕಾಲೇಜು ಪ್ರಾರಂಭಕ್ಕೆ ಮೂಲಭೂತ ಸೌಕರ್ಯಕ್ಕೆ ಕನಿಷ್ಠ ರೂ.23 ಕೋಟಿಯ ಅಗತ್ಯವಿದ್ದು,  ಈಗಾಗಲೇ ಸಚಿವರಿಗೆ 2 ಬಾರಿ ಬೇಡಿಕೆ ಸಲ್ಲಿಸಲಾಗಿದೆ, ಸಚಿವರಿಂದ ಭರವಸೆ ಸಿಕ್ಕಿದೆ. ಅದರೆ ಅನುದಾನ ಕೇವಲ 5 ಕೋಟಿ ರೂ ಬಿಡುಗಡೆಗೊಳಿಸಿದೆ ಇನ್ನು ಉಳಿದ 18ಕೋಟಿ ರೂಗಳಿಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುತ್ತೇನೆ” ಎಂದು ಶಾಸಕರು ಹೇಳಿದರು.
“ಇಲಾಖೆಯ ಜಾನುವಾರು ಸಂವರ್ಧನಾ ಕೇಂದ್ರದ ಭಾರತೀಯ ಪಶುವೈದ್ಯಕೀಯ ಪರಿಷತ್ತು ನಿಗದಿ ಪಡಿಸಿರುವಷ್ಟು ಜಾನುವಾರುಗಳ ಫಾರಂಗಳನ್ನು ಕಾಲೇಜಿಗೆ
ಹಸ್ತಾಂತರಿಸಲು ಮನವಿ ಸಲ್ಲಿಸಲಾಗಿದೆ. 25 ಬೋಧಕರ ನೇಮಕಾತಿಗೆ ಸಮಾಜಕಲ್ಯಾಣ ಇಲಾಖೆಯ ಆಯ್ತುಕರ ಕಛೇರಿಯು ಅನುಮತಿ ನೀಡಿ ಪ್ರಕ್ರಿಯೆ ಮುಗಿಸಲು ಸೂಚಿಸಿದ್ದು, ಅದಷ್ಟು ಬೇಗ ನೇಮಕಾತಿ ಮಾಡುವಂತೆ  ಸಂಬಂಧಿಸಿದ ಇಲಾಖೆಯನ್ನು ಭೇಟಿಯಾಗಿ ಪ್ರಕ್ರಿಯೆ ಮುಗಿಸುವಂತೆ ಮನವಿ ಸಲ್ಲಿಸುವುದು. ಅವರಣದ ವಿದ್ಯವೀಕರಣ ಹಾಗೂ ಶೈಕ್ಷಣಿಕ ಫಾರಂಗಳ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಅದಕ್ಕೂ ಕೆಲಸದ ಆದೇಶ
ಹೊರಡಿಸಲಾಗುವುದು. ಮೊದಲನೇ ಹಂತದಲ್ಲಿ 32 ಬೋಧಕೇತರ ನೌಕರರ ಹುದ್ದೆ ನೇಮಕಾತಿಗೆ ನಿಯಾಮನುಸಾರ ಭರ್ತಿ ಮಾಡಿಕೊಳ್ಳಲು ಆರ್ಥಿಕ ಇಲಾಖೆ ಅದೇಶ ಹೊರಡಿಸಿದೆ. ಈಗಾಗಲೇ ಏಜೆನ್ಸಿಗಳಿಗೆ ಟೆಂಡರ್ ನೀಡಲು ಪ್ರಕ್ರಿಯೆಗೆ ಸಿದ್ದಗೊಂಡಿದ್ದು ಕೆಲವೇ ತಿಂಗಳಲ್ಲಿ ಈ ಟೆಂಡರ್ ಪೂರ್ಣಗೊಳಿಸುವ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಸ್ಥಳೀಯರಿಗೆ ಉದ್ಯೋಗ  ನೀಡುವಂತೆ ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಶಾಸಕರು ಯಾರು ಹೊರ  ಗುತ್ತಿಗೆಯನ್ನು ಯಾರು ಪಡೆಯುತ್ತಾರೆ ಅವರಿಗೆ ಸ್ಥಳೀಯರನ್ನು ನೇಮಕ ಮಾಡಿಕೊಳ್ಳುವಂತೆ ಆದೇಶ ಮಾಡುವುದಾಗಿ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಪಶುವೈದ್ಯಕೀಯ ಮಹಾ ವಿದ್ಯಾಲಯ ಕೊಯಿಲ ಇದರ ಡೀನ್ ಡಾ. ಶಿವಕುಮಾರ್, ಜಾನುವಾರು ಸಂವರ್ಧನ ಕೇಂದ್ರ ಕೊಯಿಲ ಇದರ ಉಪನಿರ್ದೆಶಕರಾದ ಡಾ.ಚಿದಾನಂದ ಕೆ.ಬಿ, ಡಾ.ಪುನೀತ್, ಡಾ.ಅಜಿತ್, ಎಇಇ ಸಹನಾ, ಎಇ ಪ್ರಮೋದ್, ಎಇಇ ರಾಹುಲ್, ಗ್ರಾಮಪಂಚಾಯತ್ ಅಧ್ಯಕ್ಷೆ ಪುಷ್ಪಸುಭಾಷ್ ಶೆಟ್ಟಿ, ಪಕ್ಷದ ಪ್ರಮುಖರಾದ ರವಿಪ್ರಸಾದ್ ಶೆಟ್ಟಿ, ಹೇಮ ಮೋಹನ್‌ದಾಸ್, ಆಶೊಕ್ ಕೊಯ್ಲ, ಪ್ರಕಾಶ್ ಕೆ.ರ್,ಲಕ್ಷೀನಾರಾಯಣ ರಾವ್, ಬಾಲಕೃಷ್ಣ ಗೌಡ, ವಸಂತ, ಪ್ರಸಾದ್ ಕಾಟೂರು  ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading