Ad Widget

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಡಾ| ರೇಣುಕಾ ಪ್ರಸಾದ್.ಕೆ.ವಿ ಹಾಗೂ ಮನೆಯವರಿಂದ ಶಾಸ್ತ್ರೋಕ್ತವಾಗಿ ಬೆಳ್ಳಿರಥ ಸಮರ್ಪಣೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಡಾ| ರೇಣುಕಾ ಪ್ರಸಾದ್ ಕೆ.ವಿ ಹಾಗೂ ಮನೆಯವರಿಂದ ಸುಮಾರು ಒಂದು ಕೋಟಿ ರೂಪಾಯಿ ಮೌಲ್ಯದ ಬೆಳ್ಳಿರಥ ಸಮರ್ಪಣೆ ನ.10 ರಂದು ನಡೆಯಿತು.
ರಥ ಶಿಲ್ಪಿ ಜಕಣಾಚಾರಿ ಪ್ರಶಸ್ತಿ ಪುರಸ್ಕೃತರಾದ ಕೋಟೇಶ್ವರ ಬಿ.ಲಕ್ಷ್ಮೀನಾರಾಯಣ ಆಚಾರ್ಯರು ಮತ್ತು ಪುತ್ರ ಶ್ರೀ ರಾಜಗೋಪಾಲ ಆಚಾರ್ಯರು ಬೆಳ್ಳಿರಥವನ್ನು ನಿರ್ಮಿಸಿದ್ದಾರೆ. ನ.03 ರಂದು ಗುತ್ತಿಪೂಜೆ ಮತ್ತು ನ.04ರಂದು ಬೆಳ್ಳಿ ರಥಯಾತ್ರೆಯ ಮೂಲಕ  ಸುಳ್ಯಕ್ಕೆ ಆಗಮಿಸಿತ್ತು.
ಪೈಚಾರಿನಿಂದ ಪೂರ್ಣಕುಂಭದ  ಸ್ವಾಗತದೊಂದಿಗೆ ಸಿಂಗಾರಿಮೇಳ, ಭಜನಾ ತಂಡ ಹಾಗೂ ವಿವಿಧ ಸಾಂಸ್ಕೃತಿಕ ಮೆರವಣಿಗೆಯೊಂದಿಗೆ ಶ್ರೀ ಚೆನ್ನಕೇಶವ ದೇವಸ್ಥಾನದ ಬಳಿಗೆ ರಥ ಆಗಮಿಸಿ ನಂತರ ಕಾಂತಮಂಗಲ ಶ್ರೀ ಕ್ಷೇತ್ರ ಗುತ್ಯಮ್ಮನ ಸನ್ನಿಧಿಯವರೆಗೆ ಮೆರವಣಿಗೆಯಲ್ಲಿ ಆಗಮಿಸಿತ್ತು.
ನ.05 ರಂದು ಕೆ.ವಿ.ಜಿ ಪುತ್ಥಳಿ ಬಳಿಯಿಂದ ಬೆಳ್ಳಿರಥ ಯಾತ್ರೆ ವಿವಿಧ ವೈಧಿಕ ಮತ್ತು ಸಾಂಸ್ಕೃತಿಕ ವೈಭವದೊಂದಿಗೆ ಭವ್ಯವಾದ ಮೆರವಣಿಗೆ ಮೂಲಕ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬೆಳ್ಳಿರಥ ಹಾದು ಹೋಗುವ ವಿವಿಧ ಧಾರ್ಮಿಕ ಕ್ಷೇತ್ರಗಳ ಹಾಗೂ ವಿವಿಧ ಗ್ರಾಮಗಳ ಭಕ್ತರ ಸ್ವಾಗತದೊಂದಿಗೆ ವೈಭವದ ಬೆಳ್ಳಿರಥ ಯಾತ್ರೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತಲುಪಿತ್ತು. ನ.09ರಂದು ಶುದ್ದಿಕಲಶ, ವಾಸ್ತುಪೂಜೆ, ವಾಸ್ತು ಬಲಿ ಮತ್ತು ರಕ್ಷೋಘ್ನ ಹೋಮ ನಡೆಯಿತು. ನ.10 ರಂದು ಬೆಳಿಗ್ಗೆ ಗಣಪತಿ ಹವನ, ಸುಬ್ರಹ್ಮಣ್ಯ ಹೋಮ, ಪವಮಾನ ಹೋಮ ಪೂರ್ಣಾಹುತಿಗೊಂಡು, ಪೂರ್ವಾಹ್ನ ಗಂಟೆ 11.00ಕ್ಕೆ ಬೆಳ್ಳಿ ರಥ ಸಮರ್ಪಣೆಗೊಂಡಿತು. 
ಡಾ| ರೇಣುಕಾ ಪ್ರಸಾದ್ ಕೆ.ವಿ, ಡಾ| ಜ್ಯೋತಿ.ಆರ್ ಪ್ರಸಾದ್, ಮೌರ್ಯ.ಆರ್ ಪ್ರಸಾದ್ ಕುರುಂಜಿ, ಡಾ.ಅಭಿಜ್ಞಾ ಗೋಕುಲ್, ಗೋಕುಲ್, ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ, ಮಾಜಿ ಶಾಸಕ ಸಂಜೀವ ಮಠಂದೂರು, ಮಾಜಿ ಸ್ಪೀಕರ್ ಬೋಪಯ್ಯ, ಎಂ.ಎಲ್.ಸಿ. ಭೋಜೆಗೌಡ, ಪ್ರಭಾಕರ ಭಟ್ ಕಲ್ಲಡ್ಕ, ವಿನಯ್ ಗುರೂಜಿ, ನಿತ್ಯಾನಂದ ಮುಂಡೋಡಿ,  ಮೋಹನ್ ರಾಮ್ ಸುಳ್ಳಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಹರೀಶ್ ಇಂಜಾಡಿ, ಇ.ಓ ಅರವಿಂದ ಅಯ್ಯಪ್ಪ ಸುತಗುಂಡಿ, ಆಡಳಿತಾಧಿಕಾರಿ ಭವಾನಿಶಂಕರ ಅಡ್ತಲೆ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಕೆಂಚಪ್ಪ ಗೌಡ, ಪ್ರಧಾನ ಕಾರ್ಯದರ್ಶಿ ಕೋನಪ್ಪ ರೆಡ್ಡಿ ಹಾಗೂ ಕೆವಿಜಿ ಶಿಕ್ಷಣ ಸಂಸ್ಥೆಗಳ ಪ್ರಮುಖರು ಸೇರಿದಂತೆ ಪ್ರಮುಖರು ಹಾಗೂ ಮುಂತಾದವರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading