Ad Widget

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಡಾ| ರೇಣುಕಾ ಪ್ರಸಾದ್.ಕೆ.ವಿ ಹಾಗೂ ಮನೆಯವರಿಂದ ಸಮರ್ಪಣೆಯಾಗಲಿರುವ ಬೆಳ್ಳಿರಥ – ಸುಳ್ಯದಿಂದ ಸುಬ್ರಹ್ಮಣ್ಯದವರೆಗೆ ರಥ ಸಾಗಿ ಬರುವ ದಾರಿ ಹಾಗೂ ಸಮಯ ಇಲ್ಲಿದೆ…

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಡಾ| ರೇಣುಕಾ ಪ್ರಸಾದ್.ಕೆ.ವಿ ಹಾಗೂ ಮನೆಯವರಿಂದ ಸಮರ್ಪಣೆಯಾಗಲಿರುವ ಬೆಳ್ಳಿ ರಥಕ್ಕೆ ಕೋಟೇಶ್ವರದಲ್ಲಿ ಪೂಜೆ ನಡೆದು ಭವ್ಯ ಮೆರವಣಿಗೆಯಲ್ಲಿ ನಿನ್ನೆ(ನ.04) ಸುಳ್ಯಕ್ಕೆ ಆಗಮಿ‌‌ಸಿದೆ.
ಇಂದು(ನ.05) ಸುಳ್ಯದಿಂದ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ರಥ ತೆರಳಲಿದ್ದು, ಸುಳ್ಯದಿಂದ ಸುಬ್ರಹ್ಮಣ್ಯದವರೆಗೆ ರಥ ಸಾಗಿ ಬರುವ ದಾರಿ ಹಾಗೂ ಸಮಯ ಈ ಕೆಳಗಿನಂತಿದೆ…
ಇಂದು(ನ.05) ಬೆಳಿಗ್ಗೆ 6:30 ರಿಂದ 7:00 ರವರೆಗೆ ಗುತ್ಯಮ್ಮ ದೇವಿ ಪೂಜೆ ನಡೆದು ಬೆಳಿಗ್ಗೆ 7:30ಕ್ಕೆ ಗುತ್ಯಮ್ಮ ದೇವಿ ದೇವಸ್ಥಾನದಿಂದ ಬೆಳ್ಳಿ ರಥ ಹೊರಟಿದ್ದು, ಕಾಂತಮಂಗಲ ಮೂಲಕ ವಿವೇಕಾನಂದ ಸರ್ಕಲ್ ಗೆ ಬಂದು ಬೆಳಿಗ್ಗೆ 8:15ಕ್ಕೆ ಕೆ.ವಿ.ಜಿ ವೃತ್ತದಲ್ಲಿ ಕೆ.ವಿ.ಜಿ ಪುತ್ಥಳಿಗೆ ಪುಷ್ಪಾರ್ಚನೆ ನಡೆದು ಮೆರವಣಿಗೆಗೆ ಚಾಲನೆ ದೊರೆಯಿತು.
ಬೆಳಿಗ್ಗೆ 8:30ಕ್ಕೆ ಕೆ.ವಿ.ಜಿ ವೃತ್ತದಿಂದ ಹೊರಟ ರಥ ಚೆನ್ನಕೇಶವ ದೇವಸ್ಥಾನ, ರಥಬೀದಿ, ದೇವಸ್ಥಾನದ ಕಟ್ಟೆ, ಶ್ರೀರಾಮ ಭಜನಾ ಮಂದಿರ, ಜ್ಯೋತಿ ಸರ್ಕಲ್, ಪೆಟ್ರೋಲ್ ಪಂಪ್, ಹಳೆಗೇಟು ಮೂಲಕವಾಗಿ ಬೆಳಿಗ್ಗೆ 10:00 ಗಂಟೆಗೆ ಜ್ಯೋತಿ ಸರ್ಕಲ್ ತಲುಪಿ ಬೆಳಿಗ್ಗೆ 10:30ಕ್ಕೆ ಪೈಚಾರ್, 11:00 ಗಂಟೆಗೆ ಸೋಣಂಗೇರಿ, 11:40ಕ್ಕೆ ದುಗ್ಗಲಡ್ಕ, ಮದ್ಯಾಹ್ನ 12:30ಕ್ಕೆ ದೊಡ್ಡತೋಟ, ಮದ್ಯಾಹ್ನ 1:00 ಗಂಟೆಗೆ ನಾರ್ಣಕಜೆ, ಮದ್ಯಾಹ್ನ 1:15ಕ್ಕೆ ಎಲಿಮಲೆ, ಮದ್ಯಾಹ್ನ 2:00 ಗಂಟೆಗೆ ಗ್ರಾಮ ಪಂಚಾಯತ್ ದೇವಚಳ್ಳ, ಮದ್ಯಾಹ್ನ 2:20ಕ್ಕೆ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ, ಸಂಜೆ 3:45ಕ್ಕೆ ಗುತ್ತಿಗಾರು, ಸಂಜೆ 4:30ಕ್ಕೆ ನಡುಗಲ್ಲು, ಸಂಜೆ 5:00 ಗಂಟೆಗೆ ಮರಕತ, ಸಂಜೆ 5:15ಕ್ಕೆ ಸುಬ್ರಹ್ಮಣ್ಯ ತಲುಪಿ ಸಂಜೆ 5:30ಕ್ಕೆ ಕಾಶಿಕಟ್ಟೆಯಿಂದ ಸುಬ್ರಹ್ಮಣ್ಯ ದೇವಸ್ಥಾನದವರೆಗೆ ಮೆರವಣಿಗೆ ಸಾಗಲಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading