Ad Widget

ಸುಬ್ರಹ್ಮಣ್ಯ : ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ “ರೈತ ಜಾಗೃತಿ ಜಾಥಾ” – ಜಾಥಾಕ್ಕೆ ಚಾಲನೆ ನೀಡಿದ ರವೀಂದ್ರ ಕುಮಾರ್ ರುದ್ರಪಾದ

ಅರಣ್ಯ ಇಲಾಖೆಯಿಂದ ಕೃಷಿಕರಿಗೆ ಹಾಗೂ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಗಳು ಹಾಗೂ ಸಮಸ್ಯೆಗಳ ವಿರುದ್ಧ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟದ ಭಾಗವಾಗಿ ಇಂದು(ನ.04) ಸುಬ್ರಹ್ಮಣ್ಯದಿಂದ ಬಲ್ಯದವರೆಗೆ “ರೈತ ಜಾಗೃತಿ ಜಾಥಾ” ನಡೆಯುತ್ತಿದ್ದು, ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾದ ರವೀಂದ್ರ ಕುಮಾರ್ ರುದ್ರಪಾದ ರವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜಾಥಾಕ್ಕೆ ಚಾಲನೆ ನೀಡಿದರು.
ನಂತರ ಕುಲ್ಕುಂದ, ಕೈಕಂಬ, ಬಿಳಿನೆಲೆ, ಸುಂಕದಕಟ್ಟೆ, ಬೊಳ್ನಡ್ಕ, ಕೆಂಜಾಳ, ಗುಂಡ್ಯ, ನೆಲ್ಯಾಡಿ, ಗೋಳಿತೋಟ್ಟು, ಅಲಂಗಾರು ಮಾರ್ಗವಾಗಿ ಬಲ್ಯ ಉಮಾಮಹೇಶ್ವರಿ ದೇವಸ್ಥಾನದವರೆಗೆ ಬೈಕ್ ಜಾಥಾ ನಡೆಯಿತು.
ಈ ಸಂದರ್ಭದಲ್ಲಿ ಅಶೋಕ್ ಕುಮಾರ್ ಮೂಲೆಮಜಲು, ಜಯಪ್ರಕಾಶ್ ಕೂಜುಗೋಡು, ವೆಂಕಟ್ ವಳಲಂಬೆ, ರಮಾನಂದ ಎಣ್ಣೆಮಜಲು, ಮನೀಶ್ ಪದೇಲ, ಮೀರಾ ಸಾಹೆಬ್, ಅಚ್ಚುತ ಗೌಡ, ದಿನೇಶ್ ಸಂಪ್ಯಾಡಿ ಹಾಗೂ ಗಿರೀಶ್ ಆಚಾರ್ಯ ಪೈಲಾಜೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading