Ad Widget

ಮಂಡೆಕೋಲು ಗ್ರಾಮ ಪಂಚಾಯತ್ ಅರಿವು ಕೇಂದ್ರದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿವಿಧ ಸ್ಪರ್ಧೆಗಳು

ಮಂಡೆಕೋಲು ಗ್ರಾಮ ಪಂಚಾಯತ್ ಅರಿವು ಕೇಂದ್ರದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಮಕ್ಕಳಿಗೂ ಹಾಗೂ ಪೋಷಕರಿಗೂ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ದೀಪಗಳ ಹಬ್ಬವನ್ನು ದೀಪ ಬೆಳಗಿಸಿ ಆಚರಿಸಲಾಯಿತು.
ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಪೋಷಕರು ಸೇರಿದರು. ವಿಶೇಷವಾಗಿ ಕಾರ್ಯಕ್ರಮದಲ್ಲಿ  ನಕ್ಷತ್ರ ಕಡ್ಡಿಗಳನ್ನು ಹಚ್ಚಲಾಯಿತು.
ಶ್ರೀಮತಿ ಲಕ್ಷ್ಮಿ ಟೀಚರ್ ಬರೆಮೇಲು, ಶ್ರೀಮತಿ ಭಾರತಿ ಉಗ್ರಾಣಿಮನೆ, ಭವ್ಯ ಬೈಲು ಅಶ್ವಧಿ ಶಿವಾಜಿನಗರ,  ಸೃಷ್ಠಿ, ನಿಶ್ಮಿತಾ, ಚೖತ್ರ ಮಂಡೆಕೋಲು,  ದಯಾಮಣಿ ಉಗ್ರಾಣಿಮನೆ, ಸ್ವಾತಿ ಉಗ್ರಾಣಿಮನೆ, ಲತಾ ಕೋರನ್, ಪ್ರತೀಕ್ಷಾ, ಪುಷ್ಪಾ ಕಣೆಮರಡ್ಕ, ಪುಷ್ಪ ಮಂಡೆಕೋಲು, ಸ್ವಿತಾ ಕಣೆಮರಡ್ಕ, ಮುರಳೀಧರ ರೈ ಕಣೆಮರಡ್ಕ, ಸುರೇಶ್ ಕಣೆಮರಡ್ಕ ಹಾಗೂ ಪುಟಾಣಿ ಮಕ್ಕಳು ಭಾಗವಹಿಸಿದ್ದರು.
ಕಾರ್ಯಕ್ರಮದ ಸಂಪೂರ್ಣ ಖರ್ಚುವೆಚ್ಚವನ್ನು ಲಕ್ಷ್ಮಿ ಟೀಚರ್ ನೀಡಿದರು.
ತೃಪ್ತಿ ನಾರಾಯಣ ಅಡೂರುರವರ ಜನುಮದಿನದ ಪ್ರಯುಕ್ತ ಎಲ್ಲಾ ಮಕ್ಕಳಿಗೆ ಸಿಹಿತಿಂಡಿ ನೀಡಲಾಯಿತು.
ದೀಪಾವಳಿಯ ಮಹತ್ವವನ್ನು ಲಕ್ಷ್ಮಿ ತಿಳಿಸಿದರು.
ಸಾವಿತ್ರಿ ಕಣೆಮರಡ್ಕ ಸ್ವಾಗತಿಸಿ ಧನ್ಯವಾದ ಸಮರ್ಪಿಸಿದರು.
ವಿವಿಧ ಆಟಗಳನ್ನು ಮಕ್ಕಳಿಗೆ ಹಾಗೂ ಪೋಷಕರಿಗೆ ನಡೆಸಿ ಬಹುಮಾನ ವಿತರಣೆ ಮಾಡಲಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading