Ad Widget

ಸುಳ್ಯ ಎನ್.ಎಂ.ಪಿ.ಯು.ಸಿ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ

ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಮತ್ತು ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನ ಸಹಯೋಗದಲ್ಲಿ ಶ್ರೀ ಚೆನ್ನಕೇಶವ ದೇವಾಲಯದ ಮುಂಭಾಗ ಶ್ರೀ ಶಾರದಾಂಬ ವೇದಿಕೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ.ಪೂ ವಿಭಾಗದ ಮ್ಯಾಟ್ ಕಬಡ್ಡಿ ಪಂದ್ಯಾಟದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎ.ಓ.ಎಲ್.ಇ(ರಿ.)ಪ್ರಧಾನ ಕಾರ್ಯದರ್ಶಿ ಆರ್ಕಿ ಟೆಕ್ಟ್ ಅಕ್ಷಯ್ ಕೆ.ಸಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶ್ರೀ ಶಾರದಾಂಬ ಸೇವಾ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ, ಕಾಲೇಜಿನ ಆಡಳಿತ ಅಧಿಕಾರಿ ಶ್ರೀ ಚಂದ್ರಶೇಖರ ಪೇರಾಲು, ಎನ್ನೆಂಸಿಯ  ಪ್ರಾಚಾರ್ಯರಾದ ಡಾ ರುದ್ರ ಕುಮಾರ್ ಎಂ.ಎಂ, ಕ್ರೀಡಾ ವೀಕ್ಷಕರಾದ ಶಶಿಧರ ಮಾಣಿ, ಉದ್ಘಾಟಕರಾದ ಜಿಲ್ಲಾ ಕ್ರೀಡಾ ಸಂಯೋಜಕರು ಪ್ರೇಮನಾಥ್ ಶೆಟ್ಟಿ,ಎನ್.ಎಂ.ಪಿ.ಯು.ಸಿ ಪ್ರಾಚಾರ್ಯರಾದ ಮಿಥಾಲಿ ಪಿ ರೈ, ಉಪಸ್ಥಿರಿದ್ದು ಬಹುಮಾನ ವಿತರಿಸಿದರು.
ಸುಳ್ಯ ಎನ್.ಎಂ.ಪಿ.ಯು.ಸಿ ಯ ಕಬಡ್ಡಿ ಕೋಚ್ ನಾಗರಾಜ್ ನಾಯ್ಕ್ ಭಟ್ಕಳ ಸಹಕರಿಸಿದರು.
ವಿದ್ಯಾರ್ಥಿ ಕ್ಷೇಮಾಧಿಕಾರಿ ಬೇಬಿ ವಿದ್ಯಾ ಪಿ ಬಿ ಸ್ವಾಗತಿಸಿ ನಿರೂಪಿಸಿದರು.
ವೀಕ್ಷಕ ವಿವರಣೆಯನ್ನು ಹಾಗೂ ವಿಜೇತರ ಪಟ್ಟಿಯನ್ನು ಮೆಡಿಕಲ್ ಕಾಲೇಜು ಉದ್ಯೋಗಿ ತೀರ್ತೆಶ್ ಯಾದವ್ ನಡೆಸಿಕೊಟ್ಟರು.
ವಿಜಯ್ ಅತ್ತಾಜೆ ವೀಕ್ಷಕ ವಿವರಣೆ ನೀಡಿದರು.
ಸುಳ್ಯ ಎನ್.ಎಂ.ಪಿ.ಯು.ಸಿ ಉಪನ್ಯಾಸಕಿ ಸುಚೇತ ಎಂ ವಂದಿಸಿದರು.
ಹುಡುಗರ ವಿಭಾಗದಲ್ಲಿ   ಬೆಳ್ತಂಗಡಿಯ ಎಸ್.ಡಿ.ಎಂ ಉಜಿರೆ(ಪ್ರ), ಮಂಗಳೂರು ಮಿಲಾಗ್ರಿಸ್ ಕಾಲೇಜು(ದ್ವಿ) ಹಾಗೂ ಹುಡುಗಿಯರ ವಿಭಾಗದಲ್ಲಿ ಮೂಡಬಿದಿರೆ ಆಳ್ವಾಸ್ ಕಾಲೇಜು(ಪ್ರ), ಮಂಗಳೂರು ಕೆನರಾ ಕಾಲೇಜು(ದ್ವಿ)ಸ್ಥಾನ ಪಡೆದುಕೊಂಡವು.
ಸರ್ವಾಂಗೀಣ ಆಟಗಾರರಾಗಿ  ಮುಸ್ತಾಫ(ಮಿಲಾಗ್ರಿಸ್), ಹಂಶಿಕ(ಆಳ್ವಾಸ್) ಮತ್ತು ಉತ್ತಮ ದಾಳಿಗಾರರಾಗಿ   ಕಾರ್ತಿಕ್(ಎಸ್‌.ಡಿ.ಎಂ ), ಆತ್ಮಿಕಾ ವಿ ಶೆಟ್ಟಿ(ಕೆನರಾ) ಉತ್ತಮ ಹಿಡಿತಗಾರರಾಗಿ ಸತ್ಯ(ಎಸ್.ಡಿ.ಎಂ), ಚೈತಿಕ(ಆಳ್ವಾಸ್) ವೈಯಕ್ತಿಕ ಬಹುಮಾನ ಪಡೆದುಕೊಂಡರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading