Ad Widget

ಮಡಪ್ಪಾಡಿ ಯುವಕ ಮಂಡಲದ ವತಿಯಿಂದ “ಪಂಚಸಪ್ತತಿ” ಸ್ವಚ್ಛತಾ ಅಭಿಯಾನ

ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಹಾಗೂ ಯುವಕ ಮಂಡಲ(ರಿ.) ಮಡಪ್ಪಾಡಿ ಇದರ ಆಶ್ರಯದಲ್ಲಿ ಪಂಚಸಪ್ತತಿ  ಸ್ವಚ್ಛತಾ ಅಭಿಯಾನ-2025(75 ದಿನಗಳ ಸ್ವಚ್ಛತಾ ಅಭಿಯಾನ) ಇದರ ಎರಡನೇಯ ಕಾರ್ಯಕ್ರಮ ದಿನಾಂಕ ಅ.12 ಆದಿತ್ಯವಾರದಂದು ಬೆಳಿಗ್ಗೆ 7.30ಕ್ಕೆ ನಡೆಯಿತು.
ಮಡಪ್ಪಾಡಿ ಯುವಕ ಮಂಡಲದ ಶೌಚಾಲಯ ಹಾಗೂ ಸ್ನಾನಗೃಹ ಹಾಗೂ ಇದರ ಸುತ್ತಮುತ್ತ ಸ್ವಚ್ಛತೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಡಪ್ಪಾಡಿ ಯುವಕ ಮಂಡಲದ ಅಧ್ಯಕ್ಷರಾದ ಕಿರಣ್ ಶೀರಡ್ಕ, ಕಾರ್ಯದರ್ಶಿ ರಕ್ಷೀತ್ ಶೀರಡ್ಕ, ಮಡಪ್ಪಾಡಿ ಯುವಕ ಮಂಡಲದ ಪೂರ್ವದ್ಯಕ್ಷರಾದ ಕರುಣಾಕರ ಪಾರೆಪ್ಪಾಡಿ, ಧನ್ಯಕುಮಾರ್ ದೇರುಮಜಲು, ಯುವಕ ಮಂಡಲದ ಸದಸ್ಯರಾದ ವಿನ್ಯಾಸ್ ಪಾರೆಮಜಲು,ಷರಂಜಿತ್ ಬೊಮ್ಮೆಟ್ಟಿ, ವಿಪಿನ್ ಮಡಪ್ಪಾಡಿ, ತನುರಾಜ್ ಅಂಬೆಕಲ್ಲು, ಸುಮಂತ್ ಶೀರಡ್ಕ, ಶ್ರೀಶಾಂತ್, ಮಾನಸ್ ಮುಳುಗಾಡು, ಯುವಜನ ಸಂಯುಕ್ತ ಮಂಡಳಿಯ ಕೋಶಾಧಿಕಾರಿಯಾದ ಲೋಹಿತ್ ಬಾಳಿಕಳ ಹಾಗೂ ಯುವಕ ಮಂಡಲದ ಎಲ್ಲಾ ಸದಸ್ಯರು, ಗ್ರಾಮಸ್ಥರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading