Ad Widget

ಕಲ್ಲುಗುಂಡಿ : ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ರಕ್ತದಾನ ಶಿಬಿರ

ಸಂಪಾಜೆ ಗ್ರಾಮ ಪಂಚಾಯತ್(ದ.ಕ), ಚಟ್ಟೆಕಲ್ಲು ಫ್ರೆಂಡ್ಸ್ ಕ್ಲಬ್(ರಿ.) ಕಲ್ಲುಗುಂಡಿ, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ.) ಜಂಟಿ ಆಶ್ರಯದಲ್ಲಿ
ರೋಟರಿ ಬ್ಲಡ್ ಬ್ಯಾಂಕ್ ಪುತ್ತೂರು ಇದರ ಸಹಯೋಗದೊಂದಿಗೆ ರಕ್ತದಾನ ಶಿಬಿರ ಹಾಗೂ ಸನ್ಮಾನ ಅ.11 ಗ್ರಾಮ ಪಂಚಾಯತ್ ಸಭಾಂಗಣ ಕಲ್ಲುಗುಂಡಿಯಲ್ಲಿ ನಡೆಯಿತು
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಮತಿ ಶಕ್ತಿವೇಲು ವಹಿಸಿದರು,  ಉಧ್ಘಾಟನೆಯನ್ನು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಜಿ ಕೆ ಹಮೀದ್ ನೆರವೇರಿಸಿದರು
ವೇದಿಕೆಯಲ್ಲಿ
ಸೀತಾರಾಮ್ ಭಟ್,  ರಾಮಕೃಷ್ಣ ರಾವ್, ಉಮ್ಮರ್ ಗುಲ್ಮಕಜೆ,  ಅಬ್ಬಾಸ್ ಹಾಜಿ ಸಂಟ್ಯಾರ್,  ಮೊಹಮ್ಮದ್ ಇರ್ಷಾದ್ ಬದ್ರಿಯಾ, ಕೆ ಆರ್ ಜಗದೀಶ್ ರೈ,  ಸುಂದರಿ ಮುಂಡಡ್ಕ ,ಶರತ್ ಅರಂತೋಡು ಉಪಸ್ಥಿತರಿದ್ದರು
ಸನ್ಮಾನ ಕಾರ್ಯಕ್ರಮ
36 ವರ್ಷ ಕಿರಿಯ ಆರೋಗ್ಯ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸಿದ ರತ್ನವತಿ ಕಳಮೆ,  ಸಂಪಾಜೆ ಗ್ರಾಮದ ಆಂಬುಲೆನ್ಸ್ ಚಾಲಕರಾದ ತಾಜುದ್ದೀನ್ ಟರ್ಲಿ,  ಸಿದ್ದಿಕ್ ಗೂನಡ್ಕ,  ಚಿದಾನಂದ ಮೂಡಣಕಜೆ,  ಇವರಿಗೆ ಸಿ ಎಫ್ ಸಿ ವತಿಯಿಂದ ಸನ್ಮಾನ ಮಾಡಲಾಯಿತು
ರಕ್ತದಾನ ಶಿಬಿರದಲ್ಲಿ 30 ಮಂದಿ ಜೀವದಾನಿಗಳು ರಕ್ತದಾನ ಮಾಡಿದರು
ಕಾರ್ಯಕ್ರಮದಲ್ಲಿ ಅಲಿ ಪರ್ಲಡ್ಕ ಮತ್ತು ಝುಬೈರ್, ಸಿ ಎಫ್ ಸಿ (ರಿ.) ಸದಸ್ಯರು ಸಹಕರಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading