Ad Widget

ಗುತ್ತಿಗಾರು : ನವೆಂಬರ್ ನಲ್ಲಿ ವಳಲಂಬೆಯಲ್ಲಿ “ಪಂಜ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ” – ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ ಹಾಗೂ ಸಂಶೋಧಕರಾದ ಎ.ಕೆ ಹಿಮಕರ

ಗುತ್ತಿಗಾರು ಗ್ರಾಮದ ವಳಲಂಬೆಯಲ್ಲಿ ನವೆಂಬರ್ ತಿಂಗಳಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಪಂಜ ಹೋಬಳಿ ಘಟಕ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ “ಪಂಜ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ” ನಡೆಯಲಿದ್ದು, ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ ಹಾಗೂ ಸಂಶೋಧಕರಾದ ಎ.ಕೆ ಹಿಮಕರ ಅವರನ್ನು ಆಯ್ಕೆ ಮಾಡಿರುವುದಾಗಿ ತಿಳಿದುಬಂದಿದೆ.
ಅ.09 ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪಂಜ ಹೋಬಳಿ ಸಾಹಿತ್ಯ ಸಮ್ಮೇಳನದ ಸಂಘಟನಾ ಸಮಿತಿ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿರುವುದಾಗಿ ತಿಳಿದುಬಂದಿದೆ.
ಪಂಜ ಹೋಬಳಿ ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಾಬು ಗೌಡ ಅಚ್ರಪ್ಪಾಡಿ ರವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ನವೆಂಬರ್ ತಿಂಗಳ 16 ರಂದು “ಪಂಜ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ”ವನ್ನು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಸುವುದಾಗಿ ತೀರ್ಮಾನಿಸಲಾಯಿತು. ಅ.16 ರಂದು ಮುಂದಿನ ಸಭೆ ನಡೆಸುವುದಾಗಿ ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತಡ್ಕ, ರಾಮಚಂದ್ರ ಪಳಂಗಾಯ, ಪ್ರಭಾಕರ ಕಿರಿಭಾಗ, ವೆಂಕಟ್ ವಳಲಂಬೆ, ತಾಲೂಕು ಸಾಹಿತ್ಯ ಪರಿಷತ್ತಿನ ಸದಸ್ಯರಾದ ಯೋಗೀಶ್ ಹೊಸೊಳಿಕೆ, ಕೇಶವ ಹೊಸೊಳಿಕೆ, ವಿಜಯ ಕುಮಾರ್.ಎಂ.ಡಿ, ಶಿವರಾಮ್ ಶಾಸ್ತ್ರೀ, ಕುಶಾಲಪ್ಪ ತುಂಬತ್ತಾಜೆ, ಗಂಗಾಧರ ದಂಬೆಕೋಡಿ, ಮಾಧವ ಮೂಕಮಲೆ, ರಮೇಶ್ ಮೆಟ್ಟಿನಡ್ಕ, ರಂಜಿತ್ ಅಂಬೆಕಲ್ಲು, ಕಿಶೋರ್ ಕುಮಾರ್ ಬೊಮ್ಮದೆರೆ ಪೈಕ, ವೆಂಕಪ್ಪ ಕೇನಾಜೆ, ಲೋಕೇಶ್ವರ.ಡಿ.ಆರ್, ವಿಜೇಶ್ ಹಿರಿಯಡ್ಕ, ದಿವಾಕರ ಮುಂಡೋಡಿ, ಪ್ರವೀಣ್ ಮುಂಡೋಡಿ, ದುಗ್ಗಪ್ಪ ಗೌಡ ಕೊರತ್ತೋಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading