Ad Widget

ಸುಳ್ಯ ಶಾರದೋತ್ಸವ ಶೋಭಾಯಾತ್ರೆ ಪ್ರಯುಕ್ತ ಪೊಲೀಸ್‌ ಇಲಾಖೆಯಿಂದ ಮಾರ್ಗ ಬದಲಾವಣೆ ಪ್ರಕಟಣೆ

ಸುಳ್ಯ ಶ್ರೀ ಶಾರದಾಂಭ ಸೇವಾ ಸಮಿತಿ ವತಿಯಿಂದ ಇಂದು(ಅ.07) ಮಧ್ಯಾಹ್ನ 3:00 ಗಂಟೆಯಿಂದ ಶ್ರೀ ಶಾರದಾದೇವಿ ಮೂರ್ತಿಯ ಶೋಭಾಯಾತ್ರೆಯು 12 ಸ್ತಬ್ಧಚಿತ್ರಗಳೊಂದಿಗೆ ಶ್ರೀ ಚೆನ್ನಕೇಶವ ದೇವಸ್ಥಾನ ಬಳಿಯಿಂದ ಹೊರಟು ಕೆ ವಿಜಿ ಜಂಕ್ಷನ್-ವಿವೇಕಾನಂದ ಸರ್ಕಲ್-ಶ್ರೀರಾಮಪೇಟೆ ಜ್ಯೋತಿ ಸರ್ಕಲ್-ಮೊಗರ್ಪಣೆ ಹಳೇಗೇಟು ತಲುಪಿ ವಾಪಾಸ್ಸು ಶ್ರೀರಾಮಪೇಟೆ-ಕೆ.ಎಸ್.ಆರ್.ಟಿ.ಸಿ ಜಂಕ್ಷನ್-ಗಾಂಧಿನಗರ-ವಿಷ್ಣು ಸರ್ಕಲ್ ತಲುಪಿ ಪುನಃ ವಾಪಾಸ್ಸು ಕಟ್ಟೆ ಜಂಕ್ಷನ್-ರಥಬೀದಿ ಮಾರ್ಗವಾಗಿ ಅಜ್ಜಾವರ ಗ್ರಾಮದ ಕಾಂತಮಂಗಲ ಪಯಸ್ವಿನಿ ಹೂಳೆಯಲ್ಲಿ ವಿಸರ್ಜನೆ ನಡೆಯಲಿದ್ದು, ಈ ಸಮಯ ಸುಮಾರು 5 ಸಾವಿರ ಜನರು ಸೇರುವ ನಿರೀಕ್ಷೆಯಿದ್ದು, ಸುಳ್ಯ ಪೇಟೆಯಲ್ಲಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಹಾದು ಹೋಗಿದ್ದು, ಶೋಭಾಯಾತ್ರೆ ಸಮಯದಲ್ಲಿ ಸುಳ್ಯ ಪೇಟೆಯಲ್ಲಿ ವಾಹನ ದಟ್ಟಣೆ ಉಂಟಾಗಿ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆ ಇರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಬದಲಿ ಮಾರ್ಗವನ್ನು ಉಪಯೋಗಿಸುವ ಅವಶ್ಯಕತೆ ಇರುತ್ತದೆ. ಹಾಗಾಗಿ ಮಡಿಕೇರಿಯಿಂದ ಸುಳ್ಯ-ಪುತ್ತೂರು-ಮಂಗಳೂರಿಗೆ ತೆರಳುವ ವಾಹನಗಳು ಪರಿವಾರಕಾನ-ಉಬರಡ್ಕಮಿತ್ತೂರು-ಕಂದಡ್ಕ-ಜಾಲ್ಸೂರು ಮಾರ್ಗವಾಗಿ ಪುತ್ತೂರು-ಮಂಗಳೂರು ತೆರಳುವಂತೆ ಹಾಗೂ ಮಂಗಳೂರಿನಿಂದ ಸುಳ್ಯ-ಮಡಿಕೇರಿ ಮಾರ್ಗವಾಗಿ ತೆರಳುವ ವಾಹನಗಳು ಜಾಲ್ಸೂರು ಗ್ರಾಮದ ಅಡ್ಕಾರು-ಪೇರಾಲು-ಅಜ್ಜಾವರ-ಕಾಂತಮಂಗಲ-ಕಟ್ಟೆ ಜಂಕ್ಷನ್ ಮಾರ್ಗವಾಗಿ ಮಡಿಕೇರಿ ಭಾಗಕ್ಕೆ ತೆರಳುವಂತೆ ಅ.07ರ ಮಧ್ಯಾಹ್ನ 2:00 ಗಂಟೆಯಿಂದ ಅ.08ರ ಬೆಳಿಗ್ಗೆ 6:00 ಗಂಟೆಯವರೆಗೆ ವಾಹನ ಸಂಚಾರದ ಬಗ್ಗೆ, ಈ ಬದಲಿ ಮಾರ್ಗವಾಗಿ ಚಲಿಸುವಂತೆ ಸೂಚನೆಯನ್ನು ನೀಡಲಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading