Ad Widget

ಮಡಪ್ಪಾಡಿಯಲ್ಲಿ ಬೃಹತ್ ರಕ್ತದಾನ ಶಿಬಿರ

ಯುವಕ ಮಂಡಲ(ರಿ.) ಮಡಪ್ಪಾಡಿ ಹಾಗೂ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದಕ್ಷಿಣ ಕನ್ನಡ, ಬ್ಲಡ್ ಕಲೆಕ್ಷನ್ ಸೆಂಟರ್ ಲೇಡಿಗೋಷನ್ ಹಾಸ್ಪಿಟಲ್ ಮಂಗಳೂರು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಸ್ವಯಂಪ್ರೇರಿತ ಬೃಹತ್ ರಕ್ತದಾನ ಶಿಬಿರವು ಯುವಕ ಮಂಡಲ ಸಭಾಭವನ ಮಡಪ್ಪಾಡಿ ಇಲ್ಲಿ ನಡೆಯಿತು.
ಬೆಳಿಗ್ಗೆ ಶಿವರಾಮ ಮಡಪ್ಪಾಡಿ ಕೃಷಿ ಪ್ರಶಸ್ತಿ ವಿಜೇತರು ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿರಣ್ ಶೀರಡ್ಕ ಅಧ್ಯಕ್ಷರು ಯುವಕ ಮಂಡಲ ಮಡಪ್ಪಾಡಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಉಷಾ ಜಯರಾಮ ಅಧ್ಯಕ್ಷರು ಗ್ರಾಮ ಪಂಚಾಯತ್ ಮಡಪ್ಪಾಡಿ, ವಿನಯಕುಮಾರ್ ಮುಳುಗಾಡು ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮಡಪ್ಪಾಡಿ, ಲೋಹಿತ್ ಬಾಳಿಕಳ ಕೋಶಾಧಿಕಾರಿಗಳು, ಯುವಜನ ಸಂಯುಕ್ತ ಮಂಡಳಿ ಸುಳ್ಯ ಇವರು ಉಪಸ್ಥಿತರಿದ್ದರು.
ಯುವಕ ಮಂಡಲ ಮಡಪ್ಪಾಡಿ ಸಹಯೋಗದಲ್ಲಿ ನಡೆದ ಈ ರಕ್ತದಾನ ಶಿಬಿರದಲ್ಲಿ ಒಟ್ಟು 40 ಯುನಿಟ್ ರಕ್ತ ಸಂಗ್ರಹವಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading