Ad Widget

ಸುಬ್ರಹ್ಮಣ್ಯದ ಅಂಚೆ ಕಚೇರಿ ಹಾಗೂ ಕೆ.ಎಸ್.ಎಸ್ ಕಾಲೇಜು ಪರಿಸರದಲ್ಲಿ ಸ್ವಚ್ಛತಾ ಕಾರ್ಯ

ಸುಬ್ರಹ್ಮಣ್ಯ ಸೆಪ್ಟೆಂಬರ್ 28 : “ಸ್ವಚ್ಛತಾ  ಹೀ ಸೇವಾ ಸ್ವಚ್ಛತೆ ಪಾಕ್ಷಿಕ-2025 ” ಅಭಿಯಾನ ಕಾರ್ಯಕ್ರಮದಡಿಯಲ್ಲಿ 12ನೇ ದಿನವಾದ ಸೆ.28 ರಂದು ಸುಬ್ರಹ್ಮಣ್ಯದ ಅಂಚೆ ಕಚೇರಿ ಪರಿಸರ ಹಾಗೂ ಕೆ.ಎಸ್‌.ಎಸ್ ಕಾಲೇಜು ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು.
ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಂಚೆ ಇಲಾಖೆ ಹಾಗೂ ಕೆ.ಎಸ್.ಎಸ್ ಕಾಲೇಜು ಶಿಕ್ಷಕ ರಕ್ಷಕ ಸಂಘ ಮತ್ತು ಕುಕ್ಕೆ ಶ್ರೀ ಸೀನಿಯರ್ ಚೇಂಬರ್ ಸುಬ್ರಹ್ಮಣ್ಯ ಲಿಜನ್ ಹಾಗೂ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್  ಜಂಟಿಯಾಗಿ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಸಂಸ್ಥಾಪಕ ಹಾಗೂ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಡಾ.ರವಿ ಕಕ್ಕೆಪದವು, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಕಾರ್ಯದರ್ಶಿ ಮೋನಪ್ಪ ಡಿ, ಸುಬ್ರಹ್ಮಣ್ಯ ಅಂಚೆ ಕಚೇರಿಯ ಉಪ ಅಂಚೆ ಪಾಲಕರು, ಸೀನಿಯರ್ ಚೇಂಬರ್ ಪದಾಧಿಕಾರಿಗಳು, ಶಿಕ್ಷಕರ ರಕ್ಷಕ ಸಂಘದ ಪದಾಧಿಕಾರಿಗಳು ಹಾಗೂ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನ ಸ್ವಯಂಸೇವಕರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading