Ad Widget

ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ರಂಜಿಸಲಿದ್ದಾರೆ ಮಂಡೆಕೋಲು ಬಾಲಕಲಾವಿದರು – ಸೆ.23 ರಂದು ಅರಿವು ಕೇಂದ್ರದ ರಂಜಿನಿ ಮಕ್ಕಳ ಯಕ್ಷಗಾನ ಕಲಾ ತಂಡದಿಂದ ಮಹಿಷ ಮರ್ಧಿನಿ ಯಕ್ಷಗಾನ ಪ್ರದರ್ಶನ

ವಿಶ್ವ ವಿಖ್ಯಾತ ಮೈಸೂರು ದಸರಾ ಸಾಂಸ್ಕೃತಿಕ ವೇದಿಕೆಯಲ್ಲಿ ಮಂಡೆಕೋಲು ಗ್ರಂಥಾಲಯದ ಅರಿವು ಕೇಂದ್ರದ ರಂಜಿನಿ ಮಕ್ಕಳ ಯಕ್ಷಗಾನ ಕಲಾ ತಂಡದ ಬಾಲ ಕಲಾವಿದರಿಂದ ಮಹಿಷ ಮರ್ಧಿನಿ ಎಂಬ ಯಕ್ಷಗಾನ ಸೆ.23 ರಂದು ಪ್ರದರ್ಶನಗೊಳ್ಳಲಿದೆ.

. . . . . . . . .

ದೇಶ ಹಾಗೂ ವಿದೇಶಗಳಲ್ಲಿ ಪ್ರಸಿದ್ಧಿ ಪಡೆಚ ವಿಶ್ವವಿಖ್ಯಾತ ದಸರಾ ಕಾರ್ಯಕ್ರಮದಲ್ಲಿ ಬಾಲ ಕಲಾವಿದರಿಂದ ಯಕ್ಷಗಾನ ಪ್ರದರ್ಶಗೊಳ್ಳುತ್ತಿರುವುದು ಮಂಡೆಕೋಲು ಗ್ರಾಮಕ್ಕೂ ಸುಳ್ಯಕ್ಕೂ ಹೆಮ್ಮೆಯ ವಿಷಯವೇ ಆಗಿದೆ. ಹಳ್ಳಿಯ ವಿದ್ಯಾರ್ಥಿಗಳ ಪ್ರತಿಭೆಗೆ ದೊಡ್ಡ ವೇದಿಕೆ ಸಿಕ್ಕಿರುವುದು ಮಕ್ಕಳು ಹಾಗೂ ಪೋಷಕರ ಅದೃಷ್ಟವೇ ಆಗಿದೆ. ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದ್ದೇ ತಡ ಬಾಲ ಕಲಾವಿದರಿಗೆ ಹುಮ್ಮನಸ್ಸು ಹೆಚ್ಚಾಗಿದ್ದು ನಿರಂತರ ಅಭ್ಯಾಸದಲ್ಲಿ ತೊಡಗಿದ್ದಾರೆ. ಯಕ್ಷಗಾನ ತರಬೇತಿಯ ಸದ್ದು ಊರಿನಲ್ಲಿ ಹಬ್ಬದ ಸಂಭ್ರಮ ಮೂಡಿದೆ.

. . . . . . .

ಈ ರಂಜಿನಿ ಮಕ್ಕಳ ಯಕ್ಷಗಾನ ತಂಡಕ್ಕೆ ಯೋಗೀಶ್ ಶರ್ಮ ಅಳದಂಗಡಿ ನಿರಂತರ ತರಬೇತಿ ನೀಡಿ ಪ್ರತಿಭೆಯನ್ನು ಹೊರಹೊಮ್ಮಿಸಿದ್ದಾರೆ. ಈ ಎಲ್ಲಾ ಸಾಧನೆಯ ಹಿಂದೆ ಮಕ್ಕಳಿಗೆ ಬೆನ್ನೆಲುಬು ಆಗಿ ನಿಂತವರು ಮಂಡೆಕೋಲು ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿ ಕಣೆಮರಡ್ಕ.‌ ಗ್ರಂಥಾಲಯವನ್ನು ಬರೀ ಪುಸ್ತಕ ಭಂಡಾರವಾಗಿಸದೇ ಹಳ್ಳಿಯ ಮಕ್ಕಳನ್ನು ಗ್ರಂಥಾಲಯದೆಡೆಗೆ ಆಕರ್ಷಿಸಿ, ಆಟ ಪಾಠದ ಜತೆಗೆ ಅವರ ಪ್ರತಿಭೆಗಳನ್ನು ಹೆಕ್ಕಿ ತೆಗೆದು ಸೂಕ್ತ ತರಬೇತಿ ಹಾಗೂ ವೇದಿಕೆ ಒದಗಿಸಿದ್ದಾರೆ. ಗ್ರಂಥಾಲಯದ ಮುಖಾಂತರ ಇಂತಹ ಸಾಧನೆ ಮಾಡಬಹುದು ಎಂದು ತೋರಿಸಿಕೊಟ್ಟು ರಾಜ್ಯಕ್ಕೆ ಮಂಡೆಕೋಲು ಮಾದರಿಯಾಗಿದೆ.

ಈ ಯಕ್ಷಗಾನ ಸುಮಾರು ಒಂದುವರೆ ಗಂಟೆ ಪ್ರದರ್ಶನ ಕಾಣಲಿದ್ದು, ಒಟ್ಟು 24 ಪಾತ್ರದಾರಿಗಳು ಅಭಿನಯಿಸಲಿದ್ದಾರೆ. ಭಾಗವಹಿಸಲಿರುವ ಬಾಲಪ್ರತಿಭೆಗಳ ವಿವರ ಇಲ್ಲಿದೆ.

ತೋಟಪ್ಪಾಡಿ ಪ್ರಕಾಶ್ ಮತ್ತು ನಳಿನಿ ಇವರ ಪುತ್ರ ಪ್ರಣೀತ್ (ದೇವೇಂದ್ರ), ಇನ್ನೋರ್ವ ಪುತ್ರ ಪ್ರಖ್ಯಾತ್ (ಮಾಲಿನಿ ದೂತ) ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಣೆಮರಡ್ಕ ಸೀತಾರಾಮ ಯಂ ಕೆ. ಮತ್ತು ಸಾವಿತ್ರಿ ಕಣೆಮರಡ್ಕ ಇವರ ಪುತ್ರ ಪವನ್ ಕೃಷ್ಣ ಕೆ. ಎಸ್ ಯಮನ ಪಾತ್ರದಲ್ಲಿ. ಮಂಡೆಕೋಲು ಶಾಲಾ ಬಳಿ ನಿವಾಸಿ ಶಿವರಾಮ.ಯಂ ಮತ್ತು ಪಿ.ಎನ್‌. ಸತ್ಯಲತಾ
ಅವರ ಪುತ್ರ ಉಜ್ವಲ್.ಯಂ (ಬಿಡಲಾಸುರ), ಗುರುಪ್ರಸಾದ್ ರೈ ಪೇರಾಲುಗುತ್ತು ಮತ್ತು ಸುರೇಖಾ ರೈ ಅವರ ಪುತ್ರ ಲಕ್ಷ್ಯಜಿತ್ ಜಿ ರೈ ಮಹಿಷನ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಅಡೂರು ಬೈತನಡ್ಕ ಬಸವರಾಜ್ ಮತ್ತು ದಿವ್ಯ.ಎ. ಅವರ ಪುತ್ರ ಭರತ್.ಕೆ.ಬಿ. (ಸಿಂಹ,ಚಿಕ್ಷಾರಸುರ‌‌) ಪೇರಾಲುಗುತ್ತು ಮುರಳೀಧರ ರೈ ಮತ್ತು ಭವ್ಯಲತಾ ಅವರ ಪುತ್ರ ತನ್ವಿತ್ ಎಂ. ರೈ (ಬಂದಾಸುರ), ಇನ್ನೋರ್ವ ಪುತ್ರಿ ವೈಭವಿ (ವಸಂತ) ಪಾತ್ರದಲ್ಲಿ, ಕಣೆಮರಡ್ಕ ರವಿ ಹಾಗೂ ಸುಜಾತ ರವರ ಪುತ್ರಿ ಶ್ರದ್ಧ. ಎಂ. ( ದೇವಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮಿತಿಲ ಮನೆ ಜನಾರ್ಧನ ಎಂ ಜೆ. ಹಾಗೂ ಯಶೋದ ಎಂ. ದಂಪತಿಗಳ ಪುತ್ರಿ ಸಿಂಚನ ಎಂ ಜೆ. (ವರುಣ ಮತ್ತು ದಿತಿದೇವಿ), ಕನ್ಯಾನ ಮಿತ್ತಿಲ ಮನೆ ಕೃಷ್ಣ .ಕೆ .ಎಂ. ಹಾಗೂ ಕಮಲಾಕ್ಷಿ ಯವರ ಪುತ್ರ ತಶ್ವಿತ್. ಕೆ. (ವಿದ್ಯುನ್ಮಾಲಿ), ಮಂಡೆಕೋಲಿನ ದಾಮೋದರ ಕೆ. ಮತ್ತು ಗೀತಾ ದಂಪತಿಗಳ ಪುತ್ರಿ ಶ್ರಾವಣಿ ಕೆ (ಸುಲೋಚನ), ಕಣೆಮರಡ್ಕ ಸುಂದರ ಎಂ. ಮತ್ತು ರಾಜೇಶ್ವರಿ ಪಿ.ಕೆ.‌ ದಂಪತಿಗಳ ಪುತ್ರಿ ದ್ರುತಿಕಾ ಎಂ. ಎಸ್ (ವಿಷ್ಣು ), ಅಡೂರು ನಾರಾಯಣ ಸಿ. ಮತ್ತು ಪುಷ್ಪಾವತಿ ಬಿ. ಅವರ ಪುತ್ರಿ ತೃಪ್ತಿ ಅಡೂರು (ಮಾಲಿನಿ), ಸುರೇಶ್ ಕಣೆಮರಡ್ಕ ಮತ್ತು ಪ್ರಿಯಾ ಎ. ವಿ. ದಂಪತಿಗಳ ಪುತ್ರಿ ವೃಷಾಲಿ ಕೆ ಎಸ್. ಬ್ರಹ್ಮ ನ ಪಾತ್ರದಲ್ಲಿ, ಕಣೆಮರಡ್ಕ ರಾಮಕೃಷ್ಣ ಮತ್ತು ಸುನೀತಾ ರವರ ಪುತ್ರ ಭವನ್ ಕೆ ಆರ್. ( ದುರ್ಗಾಸುರ), ಇನ್ನೋರ್ವ ಪುತ್ರ ಭವಿಷ್ ಕೆ.ಆರ್. (ಶಂಖಾಸುರ) ಪಾತ್ರದಲ್ಲಿ ನಟಿಸಲಿದ್ದಾರೆ.

ಮಂಡೆಕೋಲು ಬೈಲು ಜೀವನ್ ಕುಮಾರ್ ಎಂ. ಹಾಗೂ ಭವ್ಯ ಕೆ. ದಂಪತಿಗಳ ಪುತ್ರಿ ಖುಷಿ ಎಂ. (ಶ್ರುತಸೇನ), ಉಗ್ರಾಣಿಮನೆ ಸುಧೀರ್ ಯು. ಎಂ. ಹಾಗೂ ದಯಾಮಣಿ ಅವರ ಪುತ್ರ ರಿಶಾನಿ ಗೌಡ ಯು.ಎಸ್.‌ (ಅಗ್ನಿ), ಮಾವಂಜಿ ಪಡ್ಪು ಧನಂಜಯ ಹಾಗೂ ಜಯಶ್ರೀ ದಂಪತಿಗಳ ಹವಿಷ್ ಪಿ.ಡಿ. ( ಚಿತ್ರಕೇತ) ಕನ್ಯಾನ ಶಿವಣ್ಣ ಗೌಡ ಮತ್ರು ಕಮಲ ದಂಪತಿಗಳ ಪುತ್ರ ಮನ್ವಿತ್ ಕೆ. ಎಸ್. (ಯಕ್ಷ, ಸುಪಾರ್ಶಕ), ಕಣೆಮರಡ್ಕ ಚಂದ್ರ ಶೇಖರ ಹಾಗೂ ಪುಷ್ಪಾವತಿ ಅವರ ಪುತ್ರಿ ಆದಿರ ಕೆ.ಸಿ.‌ (ನಿರುತಿ), ಕಣೆಮರಡ್ಕ ಚಂದ್ರಶೇಖರ ಹಾಗೂ ಪುಷ್ಪಾವತಿ ಯವರ ಪುತ್ರ ಆಶಿಕ್ ಜಯಂತನ ಪಾತ್ರದಲ್ಲಿ, ತೋಟಪ್ಪಾಡಿ ಮೋಹನ್ ಹಾಗೂ ಜಯಶ್ರೀ ದಂಪತಿಗಳ ಪುತ್ರ ವಂಶಿಕ್ ಟಿ. ವಾಯು ಪಾತ್ರದಲ್ಲಿ, ಮಾವಜಿ ಪಡ್ಪು ದಿನಕರ ಮತ್ತು ಭವಾನಿ ಪಿ.ವಿ. ರವರ ಪುತ್ರಿ ಜನನಿ ಪಿ.ಡಿ. ಈಶ್ವರ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading