Ad Widget

ಸುಳ್ಯ ನಗರದ ಕಸಕ್ಕೆ ಮುಕ್ತಿ – ನಗರ ಪಂಚಾಯತ್ ಆವರಣದಲ್ಲಿ ರಾಶಿ ಬಿದ್ದಿದ್ದ ಕಸ ಈಗ ಖಾಲಿ ಖಾಲಿ –  ಕಸ ರಾಜಕೀಯಕ್ಕೆ ತೆರೆ ಎಳೆದ ನ.ಪಂ.ಅಧ್ಯಕ್ಷೆ ಶಶಿಕಲಾ ನೀರಬಿದ್ರೆ

ಸುಳ್ಯ ನಗರ ಪಂಚಾಯತ್ ಮುಂಭಾಗದಲ್ಲಿರುವ ಶೆಡ್ ನಲ್ಲಿ ಹಲವಾರು ವರ್ಷಗಳಿಂದ ರಾಶಿ ಬಿದ್ದಿದ್ದ ಕಸಕ್ಕೆ ಕೊನೆಗೂ ಮುಕ್ತಿ ದೊರೆತಿದೆ. ನಗರ ಪಂಚಾಯತ್ ಈಗಿನ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಪ್ರಯತ್ನದಿಂದ ಮೊದಲ ಬಾರಿಗೆ ಕಸ ಸಂಪೂರ್ಣ ಖಾಲಿಯಾಗಿದೆ.

. . . . . . . . .

ಶಶಿಕಲಾ ನೀರಬಿದಿರೆ ಅಧ್ಯಕ್ಷರಾದ ಕೂಡಲೇ ಸುಳ್ಯದ ಕಸದ ಸಮಸ್ಯೆ ಪರಿಹಾರಕ್ಕೆ ಸಂಸದರು, ಶಾಸಕರು, ಮಂಡಲ ಅಧ್ಯಕ್ಷರು ಹಾಗೂ ಅಧಿಕಾರಿಗಳ ಮುಖಾಂತರ ಪ್ರಯತ್ನಿಸಿ ಯಶಸ್ವಿಯಾಗಿದ್ದಾರೆ.  ರಾಶಿ ಬಿದ್ದಿದ್ದ ಕಸದ ಬಗ್ಗೆ ನಿರಂತರ ಟೀಕೆ, ರಾಜಕೀಯ ಕೆಸರೆರೆಚಾಟ ತೆರೆ ಬಿದ್ದಿದೆ. ಗ್ರೀನ್ ಸ್ಪೇಸ್ ಸೊಲ್ಯೂಷನ್ ಮಂಗಳೂರು ಈ ಕಂಪೆನಿ ಮುಖಾಂತರ ಕಸ ಸಾಗಾಟ ಮುಂದುವರಿಯುವ ವ್ಯವಸ್ಥೆ ಮಾಡಿದ್ದಾರೆ.

. . . . . . .

ಅಧ್ಯಕ್ಷೆ ಶಶಿಕಲಾ ನೀರಬಿದಿರೆಯವರ ಅಧಿಕಾರ ಅವಧಿ ನವೆಂಬರ್ ಮೊದಲ ವಾರದಲ್ಲಿ ಕೊನೆಗೊಳ್ಳಲಿದ್ದು, ಕೊನೆಯ ಅವಧಿಯಲ್ಲಾದರೂ ಕಸದ ಸಮಸ್ಯೆಗೆ ಮುಕ್ತಿ ನೀಡುವ ಕೆಲಸ ಮಾಡಿದ್ದಾರೆ. ಇನ್ನು ಮುಂದೆ ಈ ಸ್ಥಳದಲ್ಲಿ ಕಸದ ರಾಶಿ ತುಂಬದ ಹಾಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕಾಗಿದೆ.‌


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading