Ad Widget

ನಾಲ್ಕೂರು : ಕಾಡಿನಲ್ಲಿ ಹಣ್ಣಿನ ಗಿಡಗಳ ನಾಟಿ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ.) ಸುಳ್ಯ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಗುತ್ತಿಗಾರು ವಲಯ, ಶೌರ್ಯ ವಿಪತ್ತು ನಿರ್ವಹಣಾ ಘಟಕ ನಾಲ್ಕೂರು ಹಾಗೂ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸದಸ್ಯರುಗಳಿಂದ ಸೆ.18 ರಂದು “ಕಾಡಿನಲ್ಲಿ ಹಣ್ಣಿನ ಗಿಡಗಳ ನಾಟಿ ಕಾರ್ಯಕ್ರಮ” ನಡೆಯಿತು.
ಮುಖ್ಯ ಅತಿಥಿಗಳಾಗಿ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಮಿತ್ರದೇವ ಮಡಪ್ಪಾಡಿ ರವರು ಮಾತನಾಡಿ “ಪ್ರಕೃತಿಯಿಂದ ನಾವುಗಳು ಅದೆಷ್ಟೋ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದೇವೆ. ಅದಕ್ಕಾಗಿ ಒಂದಷ್ಟು ಹಣ್ಣಿನ ಗಿಡಗಳನ್ನು ನೆಡುವ ಮುಖಾಂತರ ಕಾಡಿನ ಪ್ರಾಣಿಗಳಿಗೆ ಆಹಾರ ದೊರಕುವಂತಾಗಲಿ” ಎಂದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಇನ್ನೋರ್ವ ಅತಿಥಿಗಳಾದ ಜನಜಾಗೃತಿ ವೇದಿಕೆಯ ಸದಸ್ಯರು ಹಾಗೂ ಗುತ್ತಿಗಾರು ಗ್ರಾಮ ಪಂಚಾಯತ್ ಸದಸ್ಯರಾದ ವಿಜಯ ಕುಮಾರ್ ಚಾರ್ಮತ ರವರು ಮಾತನಾಡಿ “ಶೌರ್ಯ ಘಟಕದ ಸ್ವಯಂಸೇವಕರು ನಾಲ್ಕೂರು ಗ್ರಾಮದಲ್ಲಿ ಜನೋಪಯೋಗಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಇದೀಗ ಕಾಡುಪ್ರಾಣಿಗಳ ಹಾಗೂ ಪಕ್ಷಿಗಳ ಉಪಯೋಗಕ್ಕಾಗಿ ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಇನ್ನಷ್ಟು ಸೇವೆ ಸಲ್ಲಿಸುತ್ತಿದ್ದಾರೆ. ಘಟಕದ ಎಲ್ಲಾ ಸದಸ್ಯರುಗಳಿಗೆ ಇನ್ನಷ್ಟು ಸೇವೆ ಮಾಡುವ ಶಕ್ತಿಯನ್ನು ಭಗವಂತ ನೀಡಲಿ” ಎಂದು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಅರಣ್ಯ ರಕ್ಷಕರಾದ ಬಸಪ್ಪ ರವರು ಉಪಸ್ಥಿತರಿದ್ದು ಶುಭಹಾರೈಸಿದರು.
ಒಕ್ಕೂಟಗಳ ಅಧ್ಯಕ್ಷರಾದ ಲೋಹಿತ್ ಚೆಮ್ನೂರು, ಕೇಶಿರಾಜ್ ಹೊಸೊಳಿಕೆ, ತಾಲೂಕು ಶೌರ್ಯ ಘಟಕದ ಕ್ಯಾಪ್ಟನ್ ಸತೀಶ್ ಬಂಬುಳಿ, ತಾಲೂಕು ಕೃಷಿ ಅಧಿಕಾರಿ ರಮೇಶ್, ಗುತ್ತಿಗಾರು ವಲಯ ಮೇಲ್ವಿಚಾರಕರಾದ ರಾಜೇಶ್ ಹಾಗೂ ಒಕ್ಕೂಟಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಬಳಿಕ ಕುಂಟುಮಾಯ ಅರಣ್ಯ ಪ್ರದೇಶದಲ್ಲಿ ನೇರಳೆ, ರಂಬೂಟಾನ್, ನೆಲ್ಲಿ, ಬಟರ್ ಫ್ರೂಟ್, ಮಾವು, ಹಲಸು ಹಾಗೂ ಪುನರ್ಪುಳಿ ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಹಣ್ಣಿನ ಗಿಡಗಳನ್ನು ನಾಟಿ ಮಾಡಲಾಯಿತು.
ನಾಲ್ಕೂರು ಸೇವಾಪ್ರತಿನಿಧಿ ಹರಿಶ್ಚಂದ್ರ ಕುಳ್ಳಂಪಾಡಿ ಕಾರ್ಯಕ್ರಮ ನಿರ್ವಹಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading