Ad Widget

ಗುತ್ತಿಗಾರು : ಬಿಜೆಪಿ ಮಹಾಶಕ್ತಿ ಕೇಂದ್ರದ ಅಭ್ಯಾಸ ವರ್ಗ – “ಪಕ್ಷ ಸಂಘಟನೆ ಹಾಗೂ ಗ್ರಾಮದ ಅಭಿವೃದ್ಧಿಗೆ ಯುವಕರ ಸಹಕಾರ ಅಗತ್ಯ” – ಬಿ.ಕೆ.ಬೆಳ್ಯಪ್ಪ

ಗುತ್ತಿಗಾರು : ಬಿಜೆಪಿ ಗುತ್ತಿಗಾರು ಮಹಾಶಕ್ತಿ ಕೇಂದ್ರದ ಗುತ್ತಿಗಾರು ಮತ್ತು ನಾಲ್ಕೂರು ಶಕ್ತಿ ಕೇಂದ್ರದ ಅಭ್ಯಾಸವರ್ಗವು ಗುತ್ತಿಗಾರಿನ ದೀನ್ ದಯಾಳ್ ರೈತ ಸಭಾ ಭವನದಲ್ಲಿ ನಡೆಯಿತು.
ಪ್ರಶಿಕ್ಷಣ ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಕಾರ್ಯಕರ್ತ ಬಿ.ಕೆ.ಬೆಳ್ಯಪ್ಪ ಗೌಡ ದೀಪ ಪ್ರಜ್ವಲನೆಯೊಂದಿಗೆ ಭಾರತಮಾತೆ, ದೀನ್ ದಯಾಳ್ ಉಪಾಧ್ಯಾಯ ಮತ್ತು ಶ್ಯಾಂ ಪ್ರಸಾದ್ ಮುಖರ್ಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. “ಪಕ್ಷ ಸಂಘಟನೆ ಹಾಗೂ ಗ್ರಾಮದ ಅಭಿವೃದ್ಧಿಗೆ ಯುವಕರು ಸಹಕಾರ ನೀಡಬೇಕು” ಎಂದರು.
ಗುತ್ತಿಗಾರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕೃಷ್ಣಯ್ಯ ಮೂಲೆತೋಟ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಭ್ಯಾಸವರ್ಗದ ಪ್ರಥಮ ಅವಧಿಯಲ್ಲಿ ನಮ್ಮ ವೈಚಾರಿಕತೆ ಮತ್ತು ಪಂಚ ಪರಿವರ್ತನೆಗಳ ಬಗ್ಗೆ ಆರ್.ಕೆ. ಭಟ್ ಮಾತಾಡಿದರು, “ಸಶಕ್ತ ಬೂತ್ ಸರ್ವವ್ಯಾಪ್ತಿ ಮತ್ತು ಸರ್ವ ಸ್ಪರ್ಶಿ” ಎಂಬ ಬಗ್ಗೆ ಕುಸುಮಾಧರ ಎ.ಟಿ ವಿಷಯ ಮಂಡಿಸಿದರು.‌
“ಮೂರನೇ ಅವಧಿಯಲ್ಲಿ ವಿಕಸಿತ ಭಾರತದ ಅಮೃತಕಾಲ ನಮ್ಮ ಸಕ್ರೀಯತೆ ಎಂಬ ವಿಷಯದಲ್ಲಿ ವಿಕಸಿತ ಭಾರತ” ಬಗ್ಗೆ ಜಿಲ್ಲಾ ಸಂಚಾಲಕ ಹರೀಶ್ ಕಂಜಿಪಿಲಿ ಮಾತನಾಡಿದರು.
ಅಭ್ಯಾಸವರ್ಗದ ಸಮಾರೋಪ ಕಾರ್ಯಕ್ರಮದಲ್ಲಿ ಸುಳ್ಯ ಮಂಡಲ ಅಧ್ಯಕ್ಷರಾದ ವೆಂಕಟ್ ವಳಲಂಬೆ ಮಾತನಾಡಿ “ಪಕ್ಷ ಸಂಘಟನೆ ಹಾಗೂ ಕೇಂದ್ರದ ಹಲವಾರು ಯೋಜನೆಯ ಬಗ್ಗೆ ಅಂಕಿ ಅಂಶದೊಂದಿಗೆ ಫಲಾನುಭವಿಗಳಿಗೆ ತಲುಪಿಸುವಂತಹ ಕೆಲಸ ಕಾರ್ಯಗಳು ನಿಮ್ಮಿಂದ ನಡೆಯಬೇಕು ಮತ್ತು ಎಲ್ಲಾ ಕಾರ್ಯಕರ್ತರು ಹೊಂದಾಣಿಕೆಯಿಂದ ಇರಬೇಕು” ಎಂದು ತಿಳಿಸಿದರು.
ಚಂದ್ರಶೇಖರ ಬಾಳುಗೋಡು  ಸ್ವಾಗತಿಸಿ, ಪಿ.ಆರ್.ಕಿಶೋರ್ ಕುಮಾರ್ ವಂದಿಸಿದರು.‌ ಲೋಕೇಶ್ವರ.ಡಿ.ಆರ್ ನಿರೂಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading