Ad Widget

ಸುಬ್ರಹ್ಮಣ್ಯದಲ್ಲಿ ಸಾಮಾನ್ಯ ಜನ ಸೇವಾ ಕೇಂದ್ರ ಆರಂಭ

ಸುಬ್ರಹ್ಮಣ್ಯ ಆಗಸ್ಟ್ 26 : ಸುಬ್ರಹ್ಮಣ್ಯದ ಕಾಶಿ ಕಟ್ಟೆ ಬಳಿ ಇರುವ ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಶ್ರಯದಲ್ಲಿ ಮಂಗಳವಾರ ಸೊಸೈಟಿ ಕಟ್ಟಡದಲ್ಲಿ ಸಾಮಾನ್ಯ ಜನ ಸೇವಾ ಕೇಂದ್ರ ಆರಂಭಗೊಂಡಿತು.
ಕೇಂದ್ರ ಸರ್ಕಾರದ ಯೋಜನೆಯಡಿ ರಾಜ್ಯದ 5,491 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸುವ ಗುರಿಯನ್ವಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಕಾಮನ್ ಸರ್ವಿಸ್ ಸೆಂಟರ್ ಗಳಾಗಿ ಕಾರ್ಯನಿರ್ವಹಿಸಿದ್ದಲ್ಲಿ ಗ್ರಾಮೀಣ ಭಾಗದ ನಾಗರಿಕರಿಗೆ 300 ವಿವಿಧ ಬಗೆಯ ಈ ಸೇವೆಗಳನ್ನು (ಉದಾ : ಬ್ಯಾಂಕಿಂಗ್, ವಿಮೆ, ಆಧಾರ್ ಸೇವೆಗಳು, ಆರೋಗ್ಯ ಸೇವೆಗಳು, ಕಾನೂನು ಸೇವೆಗಳು, ಪಾನ್ ಕಾರ್ಡ್, ರೈಲ್ವೆ, ಬಸ್, ವಿಮಾನ ಟಿಕೆಟ್ ಇತ್ಯಾದಿ) ನೀಡುವುದಲ್ಲದೆ ಸಂಘದ ಆದಾಯ ಹೆಚ್ಚಿಸಲು  ಕೂಡ ಸಹಕಾರಿಯಾಗುವುದು.
ಈ ನಿಟ್ಟಿನಲ್ಲಿ ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಟ್ಟಡದ ನೆಲ ಅಂತಸ್ತಿನಲ್ಲಿ ಸೇವಾ ಕೇಂದ್ರವನ್ನು  ಪ್ರಾರಂಭಿಸಲಾಯಿತು.
ಬೆಳಿಗ್ಗೆ ಪುರೋಹಿತರಿಂದ ಗಣಹೋಮ ವಿಧಿ-ವಿಧಾನಗಳು ನಡೆದು, ತದನಂತರ ಸುಬ್ರಹ್ಮಣ್ಯ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ವೆಂಕಟೇಶ್.ಹೆಚ್.ಎಲ್, ಉಪಾಧ್ಯಕ್ಷರಾದ ದುಗ್ಗಪ್ಪ.ಹೆಚ್, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರಕಾಶ್ ಕೆ.ಎಸ್ ಹಾಗೂ  ನಿರ್ದೇಶಕರುಗಳಾದ ಜಯಪ್ರಕಾಶ್ ಕೂಜುಗೋಡು, ಮಾಧವ ದೇವರಗದ್ದೆ, ಮೋಹನ್ ದಾಸ್ ರೈ, ಯಶೋದ ಕೃಷ್ಣ, ಗಿರೀಶ್ ಆಚಾರ್ಯ ಪೈಲಾಜೆ, ಸೋಮಶೇಖರ ಕಟ್ಟೆಮನೆ, ಭಾರತಿ.ಡಿ.ಬಿ ಹಾಗೂ ಮನೋಜ್.ಎಂ ಮತ್ತು ಸೊಸೈಟಿ ಸಿಬ್ಬಂದಿ ವರ್ಗದವರ  ಸಮ್ಮುಖದಲ್ಲಿ ಕಾರ್ಯಾರಂಭ ಮಾಡಲಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading