Ad Widget

ರೆಂಜಾಳ : 5ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ – ನಿರಂತರ ವಿದ್ಯುತ್ ಪೂರೈಕೆಗೆ ಮೆಸ್ಕಾಂ ಜತೆಗೆ ಕೈಜೋಡಿಸುತ್ತಿರುವ ಸ್ಥಳೀಯರಿಗೆ ಸನ್ಮಾನ


ಶ್ರೀ ಶಾಸ್ತಾವು ಯುವಕ ಮಂಡಲ (ರಿ.). ರೆಂಜಾಳ ಮರ್ಕಂಜ ಇದರ ಆಶ್ರಯದಲ್ಲಿ 5ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಪ್ರಯುಕ್ತ ಸಾರ್ವಜನಿಕ ಮೊಸರುಕುಡಿಕೆ ಉತ್ಸವವು ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ಆ.24 ರಂದು ಜರುಗಿತು.
ರೆಂಜಾಳ ಶ್ರೀ ಕ್ಷೇತ್ರದ ಪ್ರಧಾನ ಆರ್ಚಕ ಸುಬಹ್ಮಣ್ಯ ಭಟ್ ಉದ್ಘಾಟನೆ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಬೇರಿಕೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಪುಟ್ಟಣ ಗೌಡ ಬಾಣೂರು,ಯು.ಸಂ.ಮಂಡಳಿ ನಿರ್ದೇಶಕ ನಿತೀಶ್ ಎರ್ಮಟ್ಟಿ, ದಾಸರಬೈಲು ಯುವಶಕ್ತಿ ಮಿತ್ರಬಳಗದ ಅಧ್ಯಕ್ಷ ದಯಾನಂದ ದಾಸರಬೈಲು, ಮರ್ಕಂಜ ಪ್ರೌಢಶಾಲಾ ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮಿ, ಬೊಮ್ಮಾರು ಗಜಾನನ ಯುವತಿ ಮಂಡಲದ ಅಧ್ಯಕ್ಷೆ ಶ್ರೀಮತಿ ಪತಿಮ ರೆಂಜಾಳ, ಜಗನ್ಮೋಹನ ರೈ, ಸುಬ್ರಹ್ಮಣ್ಯ ಕಿಲಾರ್ಕಜೆ, ದಾಮೋದರ ಪಾಟಾಳಿ ಮಿತ್ತಡ್ಕ ಆಗಮಿಸಿದ್ದರು.
ನಂತರ ಮೊಸರು ಕುಡಿಕೆ , ಶ್ರೀಕೃಷ್ಣ ವೇಷ ಸ್ಪರ್ಧೆ ಹಾಗೂ ಸಾರ್ವಜನಿಕರಿಗೆ ಮತ್ತು ಮಕ್ಕಳಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮ ನಡೆಯಿತು.

ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ರಾಜೇಶ್ ಬೇರಿಕೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಗೀತಾ ಹೆಚ್., ಆಟಲ್‌ಜೀ ಚಾರಿಟೇಬಲ್ ಟ್ರಸ್ಟ್ ಸುಳ್ಯ ಇದರ ಅಧ್ಯಕ್ಷ ಹರೀಶ್ ಕಂಜಿಪಿಲಿ, ಮರ್ಕಂಜ – ನೆಲ್ಲೂರು ಕೆಮ್ರಾಜೆ ಪಂಚಸ್ಥಾಪನೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಗನ್ನಾಥ ಕಾಯರ, ಧರ್ಮದರ್ಶಿ ರಾಜೇಶ್ ನಾಥ್ ಜೀ, ಯು.ಸಂ‌.ಮಂಡಳಿ ಅಧ್ಯಕ್ಷ ವಿಜಯಕುಮಾರ ಉಬರಡ್ಕ, ರಾಘವ ಗೌಡ ಕಂಜಿಪಿಲಿ ಆಗಮಿಸಿದ್ದರು.
ಈ ಭಾಗಕ್ಕೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆಯಾದಾಗ ಮೆಸ್ಕಾಂ ಸಿಬ್ವಂದಿಗಳಿಗೆ ಹಗಲು ರಾತ್ರಿಯೆನ್ನದೇ ನೆರವಾಗುತ್ತಿರುವ ಹರೀಶ್ ಕೊಡಪಾಲ, ಸತೀಶ್ ನಾಯಕ್ ಮಾಪಲಕಜೆ, ಶರತ್ ಕಕ್ಕಾಡು, ಮೋಹನ ರೆಂಜಾಳ ಇವರನ್ನು ಸನ್ಮಾನಿಸಲಾಯಿತು.

ಹರಿಪ್ರಸಾದ ಬೊಮ್ಮಾರು, ಚಂದ್ರಶೇಖರ ಪೂಜಾರಿ ಹೈದಂಗೂರು, ನಿತ್ಯಾನಂದ ಭೀಮಗುಳಿ ಕ್ರೀಡಾಕೂಟ ನಿರ್ವಹಿಸಿದರು.ಲೋಹಿತ್ ರೆಂಜಾಳ ಸ್ವಾಗತಿಸಿ,ರಾಜೇಶ್ ರೆಂಜಾಳ ವಂದಿಸಿದರು. ಐತ್ತ ರೆಂಜಾಳ, ಹರ್ಷಿತ್ ಮಿತ್ತಡ್ಕ ನಿರೂಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading