Ad Widget

ಶ್ರೀಕೃಷ್ಣ ಜನ್ಮಾಷ್ಟಮಿಯ ವಿಶೇಷ ಭಕ್ತಿ ಗೀತೆ ಬಿಡುಗಡೆ

ತುಳು ನಾಡ ಗಾನ ಗಂಧರ್ವ ಗಾಯಕ ಜಗದೀಶ್ ಆಚಾರ್ಯ ಪುತ್ತೂರು ಮತ್ತು ಬಳಗದಿಂದ ಮೂಡಿಬಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಹೊಸ ಭಕ್ತಿ ಗೀತೆಯನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಬಿಡುಗಡೆಗೊಳಿಸಿದರು.
ಈ ಅದ್ಭುತ ಗೀತೆಯು ಜಗದೀಶ್ ಆಚಾರ್ಯ ಮತ್ತು ಅವರ ಕಲಾ ಬಳಗದಿಂದ ಮೂಡಿಬಂದಿದ್ದು, ಭಕ್ತರ ಹೃದಯ ಮುಟ್ಟುವಂತೆ ಕುಣಿತ ಭಜನೆ ಹಾಗೂ ನವೀನ ರಾಗ ಸಂಯೋಜನೆಯೊಂದಿಗೆ ಭಕ್ತಿಗೀತೆ ರೂಪದಲ್ಲಿ ಮೂಡಿಬಂದಿದೆ.
ನವೀನ್ ಮಾವಜಿ, ಶ್ರೀಮತಿ ಕಾವ್ಯಶ್ರೀ ನವೀನ್ ಮಾವಜಿ, ಮತ್ತು ಬೇಬಿ ಸಾನ್ವಿ ಮಾವಜಿ ಕಲಾ ಪೋಷಕರಾಗಿದ್ದಾರೆ. 
ಜನ್ಯ ಪ್ರಸಾದ್ ಅನಂತಾಡಿ, ಉಜ್ವಲ ಆಚಾರ್ ಮಂಕುಡೆ ಹಾಗೂ ಸಾಹಿತ್ಯ ಆಚಾರ್ಯ ಪುತ್ತೂರು ಸಹ ಗಾಯಕಿಯರಾಗಿದ್ದಾರೆ.
ಶ್ರೀ ಟಾಕೀಸ್ ನ ಪ್ರಸಾದ್ ಚಿತ್ರೀಕರಣ ಹಾಗು ಸಂಕಲನ ಮಾಡಿದ್ದಾರೆ.
ಬಿಡುಗಡೆ ಸಮಾರಂಭದಲ್ಲಿ ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಎಸ್ ಜೆ ಏಸುರಾಜ್, ದೇವಳದ ಅಭಿಯಂತರ ಉದಯ್ ಕುಮಾರ್ ಕೆ ಸಿ, ನಿರ್ಮಾಪಕ ನವೀನ್ ಮಾವಜಿ ಮತ್ತು ಕಾವ್ಯಶ್ರೀ ನವೀನ್ ಮಾವಜಿ, ವ್ಯವಸ್ಥಾಪನಾ ಸಮಿತಿ ಸದಸ್ಯರು, ಸೌಮ್ಯ ಭರತ್ ಮತ್ತು ಲೀಲಾ ಮನಮೋಹನ್,
ಮಾಸ್ಟರ್ ಪ್ಲಾನ್ ಮೇಲುಸ್ತುವಾರಿ ಸಮಿತಿ ಸದಸ್ಯರಾದ ಲೋಲಾಕ್ಷ ಕೈಕಂಬ, ವಿದ್ಯಾಸಂಸ್ಥೆಗಳ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು
ದೇವಳದ ಸಿಬ್ಬಂದಿಗಳಾದ ಮಹೇಶ್ ಕುಮಾರ್.ಎಸ್ ಮತ್ತು ಯೋಗೀಶ್.ಎಂ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading