Ad Widget

ಸುಳ್ಯ : ಬಿಎಂಎಸ್ ಆಟೋರಿಕ್ಷಾ ಚಾಲಕರ ಸಂಘದ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ

ಸುಳ್ಯ ತಾಲೂಕು ಆಟೋರಿಕ್ಷಾ ಚಾಲಕರ ಸಂಘದ(ಬಿ.ಎಂ.ಎಸ್ ಸಂಯೋಜಿತ) ವತಿಯಿಂದ ಆ.15 ರಂದು ಸ್ವಾತಂತ್ರ್ಯ ದಿನಾಚರಣೆ ನಡೆಯಿತು.
ಧ್ವಜಾರೋಹಣ ವನ್ನು ಮಾಜಿ ಸೈನಿಕ ಚಾರ್ಲ್ಸ್ ಹೆರಾಲ್ಡ್ ಡಿಸೋಜಾ ನೆರವೇರಿಸಿದರು.
ಮುಖ್ಯ ಅಭ್ಯಾಗತರಾಗಿ ಸಂಘದ ಮಾಜಿ ಅಧ್ಯಕ್ಷರಾದ ಪಿ ಗೋಪಾಲಕೃಷ್ಣ ಭಟ್ ಪೈಚಾರ್, ರಾಧಾಕೃಷ್ಣ ಬೈತಡ್ಕ,  ಸಂಘದ ಅಧ್ಯಕ್ಷ ಪ್ರಕಾಶ್ ಎಂ.ಎಸ್ ಈ ಸಂದರ್ಭದಲ್ಲಿ ಮಾತಾಡಿದರು.
ಸಿಂಧೂರ ವಿಜಯದ ಸವಿ ನೆನಪಿಗೆ … ಕಾರ್ಯಕ್ರಮಕ್ಕೆ ಬಂದ ಅತಿಥಿ ಹಾಗೂ ಚಾಲಕ ಸದಸ್ಯರಿಗೆ ಸಿಂಧೂರ ತಿಲಕ ಹಣೆಗೆ ಹಚ್ಚಿ ಸ್ವಾಗತಿಸಲಾಯಿತು.
ಆಪರೇಷನ್ ಸಿಂಧೂರದಲ್ಲಿ ಪರಾಕ್ರಮ ಮೆರೆದು ಭಾರತದ ಕೀರ್ತಿ ಪತಾಕೆಯನ್ನು ಜಗತ್ತಿಗೆ ಅನಾವರಣ ಗೊಳಿಸಿದ ಬ್ರಹ್ಮೋಸ್ ಕ್ಷಿಪಣಿ ಹಾಗೂ ಎಸ್ 400 ರಾಡಾರ್ ಸುದರ್ಶನ ಚಕ್ರ ದ ಕಟೌಟ್ ಗೆ ಮಾತೆಯರಿಂದ ಹರಸಿನ ಕುಂಕುಮ ಹಚ್ಚಿ ಪುಷ್ಪ ನಮನ  ಸಲ್ಲಿಸಲಾಯಿತು.
ವಂದೇ ಮಾತರಂ ಗೀತೆಯನ್ನು ಯಶಸ್ವಿ.ಪಿ ಭಟ್ ಹಾಡಿದರು.‌ ಝಂಡಾ ಊಂಚ ನಾಗರಾಜ್ ಮುಳ್ಯ ಹಾಡಿದರು.‌
ಬಳಿಕ ಎಲ್ಲಾ ಸದಸ್ಯರು ಆಟೋರಿಕ್ಷಾ ಸಹಿತ ತ್ರಿವರ್ಣ ಧ್ವಜದೊಂದಿಗೆ  ಭಗತ್ ಸಿಂಗ್ ನಿಲ್ದಾಣ(ಖಾಸಗಿ ಬಸ್ ನಿಲ್ದಾಣ) ದಿಂದ ಮೆರವಣಿಗೆ ಹೊರಟು ಗಾಂಧಿನಗರ ಬಸ್ ನಿಲ್ದಾಣ ಶ್ರೀರಾಮ್ ಪೇಟೆ ಲಾಲ್ ಬಹದ್ದೂರ್ ಶಾಸ್ತ್ರಿ ಸರ್ಕಲ್, ಭಗತ್ ಸಿಂಗ್ ನಿಲ್ದಾಣದವರೆಗೆ ಮೆರವಣಿಗೆ ಸಾಗಿತು. 
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್ ಎಂ, ಕೋಶಾಧಿಕಾರಿ ರವಿ ಎಸ್, ಸಂಘಟನಾ ಕಾರ್ಯದರ್ಶಿ ಸುಂದರ ಪೆರಾಜೆ ಪ್ರಮುಖರಾದ ವಿಜಯ ಕುಮಾರ್ ಉಬರಡ್ಕ, ಚಂದ್ರ ಶೇಖರ ಮರ್ಕಂಜ, ನಿರ್ದೇಶಕರಾದ ದರ್ನೇಶ್, ಜಯರಾಮ ಪಿ, ಲೋಕೇಶ್,  ಶಂಕರ, ಜನಾರ್ದನ ಕೆ, ಸದಸ್ಯರುಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.‌
ಮಾತೆಯರಾದ ಪುನೀತ ಪ್ರಕಾಶ್, ಹರಿಣಾಕ್ಷಿ ನಾರಾಯಣ, ಅನುರಾಧ ರವಿ ಅತಿಥಿಗಳಿಗೆ ಸಿಂಧೂರ ಹಚ್ಚಿ, ಪುಷ್ಪ ನಮನ ಸಲ್ಲಿಸಿದರು  
ಸುರೇಂದ್ರ ಕಾಮತ್ ಸ್ವಾಗತಿಸಿ,  ಪ್ರಶಾಂತ್ ಭಟ್ ವಂದಿಸಿದರು. ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್.ಎಂ ಕಾರ್ಯಕ್ರಮ ನಿರೂಪಿಸಿದರು.‌
ಭಾನುಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading