Ad Widget

ಸುಳ್ಯ : ಗೌಡ ಯುವ ಸೇವಾ ಸಂಘ ಹಾಗೂ ವಿವಿಧ ಘಟಕಗಳ ಆಶ್ರಯದಲ್ಲಿ ಆಟಿಯ ಸಂಭ್ರಮ ಕಾರ್ಯಕ್ರಮ ; ವಿವಿಧ ಸಾಧಕರಿಗೆ ಸನ್ಮಾನ

ಸುಳ್ಯ : ಗೌಡರ ಯುವ ಸೇವಾ ಸಂಘ, ಮಹಿಳಾ ಘಟಕ ಮತ್ತು ತರುಣ ಘಟಕ ಇವರ ಸಹಯೋಗದೊಂದಿಗೆ ಸುಳ್ಯ ನಗರ ಗೌಡ ಸಮಿತಿ, ಮಹಿಳಾ ಘಟಕ, ತರುಣ ಘಟಕಗಳ ನೇತೃತ್ವದಲ್ಲಿ 13ನೇ ವರ್ಷದ ಆಟಿಯ ಸಂಭ್ರಮ ಆಗಸ್ಟ್ 3 ರಂದು ಗೌಡ ಸಮುದಾಯ ಭವನ ಕೊಡಿಯಾಲಬೈಲು ನಲ್ಲಿ ನಡೆಯಿತು.
ಸಮಾರಂಭ ಅಧ್ಯಕ್ಷತೆಯನ್ನು ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್. ಗಂಗಾಧರ ವಹಿಸಿದ್ದರು. ಉದ್ಘಾಟನೆಯನ್ನು
ರಾಮಕೃಷ್ಣ ಅಮೈ ನ್ಯಾಯವಾದಿಗಳು ಅಧ್ಯಕ್ಷರು, ಆಡಳಿತ ಸಮಿತಿ, ಶ್ರೀ ವಿಷ್ಣು ಮೂರ್ತಿ ದೈವಸ್ಥಾನ ಕೊಡಿಯಾಲಬೈಲು ಇವರು ನೆರವೇರಿಸಿದರು. ಶ್ರೀಮತಿ ವಿನುತಾ ಪಾತಿಕಲ್ಲು ಅಧ್ಯಕ್ಷರು, ತಾಲೂಕು ಮಹಿಳಾ ಘಟಕ,  ಪ್ರೀತಮ್ ಡಿ. ಕೆ. ಅಧ್ಯಕ್ಷರು, ತಾಲೂಕು ತರುಣ ಘಟಕ, ಶ್ರೀಮತಿ ಹರ್ಷ ಕರುಣಾಕರ ಅಧ್ಯಕ್ಷರು, ಸುಳ್ಯ ನಗರ ಮಹಿಳಾ ಘಟಕ ಇವರು ಗೌರವ ಉಪಸ್ಥಿತರಾಗಿದ್ದರು.
ಸಮಾರೋಪ – ಸನ್ಮಾನ – ಬಹುಮಾನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ನಗರ ಸಮಿತಿ ಅಧ್ಯಕ್ಷ ರಾಕೇಶ್ ಕುಂಟಿಕಾನ ವಹಿಸಿದ್ದರು. ‘ಆಟಿ’ ಆಚರಣೆಯ ವಿಶೇಷತೆಯ ಬಗ್ಗೆ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ನಿರ್ದೇಶಕರಾದ ಚಂದಶೇಖರ ಪೇರಾಲು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಪಿ. ಕೆ. ಉಮೇಶ ಅಧ್ಯಕ್ಷರು, ಆಡಳಿತ ಸಮಿತಿ, ಶ್ರೀ ಕಲ್ಕುಡ ದೈವಸ್ಥಾನ ಗಾಂಧಿನಗರ,  ಕೆ. ಸಿ. ಸದಾನಂದ ಅಧ್ಯಕ್ಷರು, ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸುಳ್ಯ ಇವರು ಆಗಮಿಸಿದ್ದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.  ಡಾ| ಕೇಶವ ಸುಳ್ಳಿ (ಪಶು ವೈದ್ಯಕೀಯ ಸೇವೆ), ಯಂ. ಡಿ. ನಿರಂಜನ (ಯುವ ಉದ್ಯಮಿ), ನವೀತ್ ಕಂದಡ್ಕ (ಉದ್ಯೋಗ-ಸಾಧನೆ), ಡಾ| ಅಭಿಜ್ಞಾಬಿ. ಎಂ. (ದಂತ ವೈದ್ಯಕೀಯ ಶಿಕ್ಷಣ ಬ್ಯಾಂಕ್ ವಿಜೇತೆ), ತಿಮ್ಮಪ್ಪ ಗೌಡ ನಾವೂರು (ಧಾರ್ಮಿಕ ಸೇವೆ), ಮ್ಯಾಲಪ್ಪ ಗೌಡ ಸೂಂತೋಡು (ಗದ್ದೆ ಬೇಸಾಯ),  ಕು| ಸೋನಾ ಅಡ್ಕಾರ್ (ನೃತ್ಯ ಮತ್ತು ಯೋಗದಲ್ಲಿ ರಾಜ್ಯ ಮಟ್ಟದ ಪ್ರತಿಭೆ), ಕು| ಭೂಮಿಕ (ಕ್ರೀಡೆ-ಸಾಧನೆ) ಇವರನ್ನು ಗೌರವಿಸಲಾಯಿತು.
ಗೌಡರ ಯುವ ಸೇವಾ ಸಂಘದ ಗೌರವಾಧ್ಯಕ್ಷ ದಿನೇಶ್ ಮಡಪ್ಪಾಡಿ ಸನ್ಮಾನಿತರನ್ನು ಪರಿಚಯಿಸಿದರು. ಗೌಡ ಯುವ ಸೇವಾ ಸಂಘದ ಗೌರವಾಧ್ಯಕ್ಚ ಐ.ಬಿ. ಚಂದ್ರಶೇಖರ ಸ್ವಾಗತಿಸಿ, ಡಿ.ಟಿ. ದಯಾನಂದ ವಂದಿಸಿದರು. ಲತಾಶ್ರೀ ಸುಪ್ರೀತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading