Ad Widget

ಬೆಳ್ಳಾರೆ : ಸ್ನೇಹಿತರ ಕಲಾಸಂಘದವರಿಂದ ಅಟ್ಟಿ ಮಡಿಕೆ, ಮೊಸರು ಕುಡಿಕೆ ಹಾಗೂ ಶ್ರೀಕೃಷ್ಣ ಜನ್ಮಾಷ್ಠಮಿಯ ಆಮಂತ್ರಣ ಪತ್ರಿಕೆ ಬಿಡುಗಡೆ

ಸ್ನೇಹಿತರ ಕಲಾಸಂಘ  ಬೆಳ್ಳಾರೆ ಇವರ ವತಿಯಿಂದ ಆಗಸ್ಟ್ 15ರಂದು ನಡೆಯಲಿರುವ ಅಟ್ಟಿ ಮಡಿಕೆ ಮೊಸರು ಕುಡಿಕೆ ಹಾಗೂ ಆಗಸ್ಟ್ 17ರಂದು ಶ್ರೀ ಕೃಷ್ಣಜನ್ಮಾಷ್ಠಮಿಯ ಪ್ರಯುಕ್ತ ನಡೆಯಲಿರುವ ಕಾರ್ಯಕ್ರಮದ ಆಮಂತ್ರಣ ಬಿಡುಗಡೆ ಕಾರ್ಯಕ್ರಮವು  ಜುಲೈ 30ರಂದು ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸ್ನೇಹಿತರ ಕಲಾ ಸಂಘದ ಅಧ್ಯಕ್ಷರಾದ  ಪದ್ಮನಾಭ ಬೀಡು, ಕಾರ್ಯದರ್ಶಿ ಗಣೇಶ್ ಪಾಟಾಲಿ ಕುರುಂಬುಡೇಲು, ಕೋಶಾಧಿಕಾರಿ ಶ್ರೀನಿವಾಸ್ ಕುರುಂಬುಡೇಲು, ಉಪಾಧ್ಯಕ್ಷರಾದ ವಸಂತ ಗೌಡ  ಪಡ್ಪು, ನಿಕಟ ಪೂರ್ವ ಅಧ್ಯಕ್ಷರಾದ ವಸಂತ ಉಲ್ಲಾಸ್, ಅಜಪಿಲ  ಶ್ರೀ ಮಹಾಲಿಂಗೇಶ್ವರ  ದೇವಸ್ಥಾನದ ಅರ್ಚಕರಾದ ಉದಯಕುಮಾರ್ ಉಪಾಧ್ಯಾಯ, ಜೇಸಿ ಪ್ರದೀಪ್ ಕುಮಾರ್ ರೈ ಪನ್ನೆ, ದೇವಸ್ಥಾನದ ಕಚೇರಿ ವ್ಯವಸ್ಥಾಪಕರಾದ ಮಹೇಶ್ ಅಜಪಿಲ, ಸಾಂಸ್ಕೃತಿಕ ಕಾರ್ಯದರ್ಶಿ ಮಹಾಲಿಂಗ ಕುರುಂಬುಡೇಲು,  ಪೂರ್ವಾಧ್ಯಕ್ಷರಾದ ಕೊರಗಪ್ಪ ನಾಯ್ಕ ಕುರುಂಬುಡೇಲು, ಸಂಜಯ್ ನೆಟ್ಟಾರು  ಸದಸ್ಯರುಗಳಾದ ತೀರ್ಥರಾಮ ಮಣಿಮಜಲು, ಸನತ್ ಕಲ್ಲೋಣಿ, ಚಂದ್ರಶೇಖರ ಗೌಡ  ಬಸ್ತಿಗುಡ್ಡೆ, ಪ್ರಸಾದ್ ಬೆಳ್ಳಾರೆ ಹಾಗೂ ಊರವರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading